ಮುಖ್ಯಮಂತ್ರಿಗಳು ಏನು ಕಿತ್ತುಗುಡ್ಡೆ ಹಾಕಿದ್ದಾರೆ? – ಗುಂಡಿನ ದಾಳಿ ವಿರುದ್ಧ ಹೆಚ್,ಡಿಕೆ ಆಕ್ರೋಶ

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿ ವಿಚಾರವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಹೆಚ್,ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದರು ಪೊಲೀಸ್ ಠಾಣೆಯಲ್ಲಿ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರ ತೆಗೆದುಕೊಂಡು ಪೊಲೀಸ್ರ ಮೇಲೆ ಫೈರ್ ಮಾಡ್ತಿದ್ರು ಎಂದು ಸಿಎಂ ಹೇಳ್ತಾರೆ. ಒಬ್ಬ ಪೊಲೀಸ್ ಅಧಿಕಾರಿ ಫೈರ್ ಮಾಡಿ ಯಾರೂ ಸತ್ತಿಲ್ಲಾ ಅಂತಾನೆ. ಅವನ್ಯಾವೋನೋ ಪ್ರಭಾಕರ್ ಭಟ್ಟ ಇದ್ದಾನೆ ಎಂದು ಏಕವಚನದಲ್ಲಿ ಆಕ್ರೋಶ.

ಅಧಿಕಾರಿಗಳು ಪ್ರಭಾಕರ್ ಭಟ್ ನನ್ನ ಆದೇಶದ ಮೇರೇಗೆ ಕೆಲಸ ಮಾಡುತ್ತಿದ್ದೀರಾ? ಅಥವಾ ಸರ್ಕಾರದ ಸೂಚನೆ ಮೇರೆಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ? ಗಲಾಟೆಯಾದಾಗ ಸಂಜೆ ಪ್ರಭಾಕರ್ ಭಟ್ ನ ಮನೆಗೆ ಯಾವ ಪೊಲೀಸ್ ಅಧಿಕಾರಿಗಳು ಹೋಗಿದ್ರು ಎಂದು ತನಿಖೆಯಾಗಲೀ.

ಈ ಸಿಎಂಗೆ ಮಾನ ಮರ್ಯಾದೆ ಇದ್ರೆ ತಪ್ಪಿತಸ್ಥ ಅಧಿಕಾರಿಗಳನ್ನ ಜೈಲಿಗೆ ಹಾಕಿ. ಇವರ ಯೋಗ್ಯತೆಗೆ ಒಂದು ಸರ್ಕಾರ. ಸತ್ತು ಮಣ್ಣಾಗಿದ್ದಾರೆ ಇವರ ಮೇಲೆ 307 ಎಫ್ ಐಆರ್ ಮಾಡಿದ್ದಾರೆ. ಕೇರಳದಿಂದ ಬಂದಿದ್ರು ಗಲಾಟೆ ಮಾಡೋಕೆ ಅಂತಾರೆ. 7ರಿಂದ 8 ಸಾವಿರ ಜನ್ರು ಪ್ರತಿಭಟನೆ ಮಾಡಿದ್ರು ಅಂತಾ ಪೊಲೀಸ್ರು ಹೇಳ್ತಾರೆ.

ಇಂದು ಕರ್ಫ್ಯೂ ತೆಗೆದಿದ್ದೀರಿ ಏನಾಗಿದೆ ಎಲ್ಲವೂ ಕೂಲ್ ಆಗಿದೆ. ಯಾರೋ ಗಣಪತಿ ಆತ್ಮಹತ್ಯೆ ಮಾಡಿಕೊಂಡರೆ ಗೃಹಸಚಿವ ರಾಜೀನಾಮೆ ನೀಡ್ಬೇಕು ಅಂದ್ರು. ಆದ್ರೆ ನೀವೇನು ಮಾಡ್ತಿದ್ದೀರಿ ಜನ್ರನ್ನ ಸಾಯಿಸುತ್ತಿದ್ದೀರಿ. ಬ್ಯಾಂಕ್ವೆಟ್ ಹಾಲ್ ನಲ್ಲಿ ಹಣ ಖರ್ಚು ಮಾಡಿ ಆ ಶಾಸಕರನ್ನ ಸಚಿವ ಸ್ಥಾನ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಇವರ ಯೋಗ್ಯತೆಗೆ ಖಾದರ್ ಏನೋ ಹೇಳಿದ ಅಂತಾ ಹೀಗೆ ಮಾಡುತ್ತಿದ್ದೀರಿ ಎಫ್ ಐಆರ್ ಮಾಡಿದ್ದೀರಿ. ಪ್ರಭಾಕರ್ ಭಟ್, ಶೋಭ ಕರಂದ್ಲಾಜೆ ಏನು ಭಾಷಣ ಮಾಡಿದ್ರು ಅವರ ಮೇಲೆ ಎಫ್ ಐಆರ್ ಹಾಕಿದ್ರಾ ಎಂದು ಪ್ರಶ್ನೆ.

ಮಂತ್ರಿಗಳು ಏನು ಕಿತ್ತುಗುಡ್ಡೆ ಹಾಕಿದ್ದಾರೆ ಎಂದು ಆಕ್ರೋಶ. ತನಿಖೆ ಮಾಡಿ ಏನು ಮಾಡ್ತಾರೆ. ಜೆಡಿಎಸ್ ಪಕ್ಷ ಜನ್ರ ಪರವಾಗಿದೆ. ನಾವು ಯಾರ ಕಡೆಯೂ ಹೋಗೊಲ್ಲಾ. ಬಿಜೆಪಿ ಕಾಂಗ್ರೆಸ್ ನವರು ನಮ್ಮ ಪಕ್ಷ ಹುಡುಕಿಕೊಂಡು ಬರಬೇಕು. ಯಾರು 31 ಜನ ಪೊಲೀಸ್ರು ಗಾಯಗೊಂಡಿದ್ದಾರೆ. ಬನ್ರೀ ಹೋಗೋಣ ಆಸ್ಪತ್ರೆಗೆ ಎಲ್ಲಿ ದಾಖಲಾಗಿದ್ದಾರೆ ಪೊಲೀಸ್ರು. ಸರ್ಕಾರ ಸುಳ್ಳು ಹೇಳುತ್ತಿದೆ. ಮಾಜಿ ಸಿಎಂ ಎಸ್,ಎಂ,ಕೃಷ್ಣನ ಅಳಿಯನನ್ನ ನೇತ್ರವತಿ ನದಿಗೆ ತಳ್ಳಿದ್ರು ಈಗ ಹಿಂದಿನ ಸರ್ಕಾರ ಬೀಳಿಸಿದ್ರು ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ ಹೆಚ್,ಡಿಕೆ ಆಕ್ರೋಶಗೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights