ಮುಸ್ಲಿಂ ಮಾರಾಟಗಾರ ಹಣ್ಣುಗಳ ಮೇಲೆ ಮೂತ್ರವನ್ನು ಚಿಮುಕಿಸುವ ವಿಡಿಯೋ ಫೇಕ್
ಉತ್ತರಪ್ರದೇಶದ ಬಿಜ್ನೋರ್‌ನ ಹಿಂದೂಗಳ ವಸತಿ ಪ್ರದೇಶಗಳಲ್ಲಿ ವ್ಯಾಪಾರಿಯೊಬ್ಬ ತಾನು ಮಾರಾಟ ಮಾಡುತ್ತಿದ್ದ ಬಾಳೆಹಣ್ಣುಗಳ ಮೇಲೆ ಮೂತ್ರ ಸಿಂಪಡಿಸುತ್ತಿದ್ದನೆಂದು ವೃದ್ಧರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಬಳಸಿಕೊಂಡು ಬಿಜೆಪಿ ನಾಯಕರು ಮತ್ತು ಬಲಪಂಥೀಯರು ಇಸ್ಲಾಮೋಫೋಬಿಯಾವನ್ನು ಹರಡಲು ಶುರುಮಾಡಿದ್ದಾರೆ.
ಸಂಘಪರಿವಾರದವರು ಮುಸ್ಲೀಮರ ಮೇಲೆ ಭಯದ ವಾತಾವರಣ ಸೃಷ್ಠಿಸುತ್ತಿರುವುದರ ವಿರುದ್ಧ ಮಾತನಾಡುವವರನ್ನು ಅಪಹಾಸ್ಯ ಮಾಡುಲು ವಿಡಿಯೋವನ್ನು ಬಳಸಿಕೊಳ್ಳಲಾಗಿದೆ. ಇದೇ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
और ज़रा इन बाबा के भी कारनामे देखो …ये बेचारे बाबा सिर्फ़ बोतल में पेसाब कर उसे केले के ऊपर छिड़क रहें थे ..
फिर भी पुलिस बड़े अदब से पेश आ रही है..
कोई ज़रा आरती की थली लाना ..बाबा की आरती करनी है क्योंकि कुछ अन्यथा बोलो तो फिर ISLAMOPHOBIA की complaint कर देंगे Gulf में!! pic.twitter.com/SwzdfFJXm7— Sambit Patra (@sambitswaraj) April 22, 2020
ಪ್ರಸಿದ್ಧ ಇಸ್ಲಾಮೋಫೋಬ್ ತಾರೆಕ್ ಫತಾಹ್ ಎಂಬ ಮುಸ್ಮೀಂ ವಿರೋಧಿ ಸಹ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Muslim fruit vendor in India caught collecting his pee in a bottle and then sprinkling his urine on bananas for sale What is wrong with my community? Ya Allah, what have we Muslims become?
pic.twitter.com/XZyWFYKvK0— Tarek Fatah (@TarekFatah) April 21, 2020
ಈ ವಿಡಿಯೋ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಕಡಿಮೆ ಅವಧಿಯಲ್ಲಿ ವೈರಲ್ ಆಗಿದೆ.
ಸತ್ಯಾಂಶ:
ಮುದುಕ ಮೂತ್ರ ವಿಸರ್ಜನೆಯ ನಂತರ ಸ್ವಚ್ಛಗೊಳಿಸುವ ‘ಇಸ್ತಿಂಜಾ’ಕಾರ್ಯವನ್ನು ಮಾಡುತ್ತಿದ್ದ ಎಂದು ಬಿಜ್ನೋರ್‌ನ ಅನೇಕ ಸ್ಥಳೀಯರು ಹೇಳಿದ್ದಾರೆ.
ಮೂತ್ರ ವಿಸರ್ಜಿಸಿದ ನಂತರ ಮುಸ್ಲಿಮರು ಸ್ವಚ್ಛಗೊಳಿಸುವುದು ಕಡ್ಡಾಯವಾಗಿದೆ. ಮೂತ್ರನಾಳ ಅಥವಾ ಗುದದ್ವಾರವನ್ನು ಶೌಚಾಲಯ ಉಪಯೋಗಿಸಿದ ನಂತರ ನೀರು ಅಥವಾ ಶೌಚಾಲಯದ ಕಾಗದ ಯಾವುದರಲ್ಲಾದರೂ ಸ್ವಚ್ಛಗೊಳಿಸುತ್ತಾರೆ. ಈ ತೊಳೆಯುವ ಕ್ರಿಯೆಗೆ ಅರೇಬಿಕ್‌ನಲಲ್ಲಿ ಇಸ್ತಿಂಜಾ ಎಂದು ಕರೆಯಲಾಗುತ್ತದೆ, ಮತ್ತು ಇದಕ್ಕಾಗಿ ಸಾಮಾನ್ಯವಾಗಿ ಪಾತ್ರೆಯನ್ನು ಬಳಸಲಾಗುತ್ತದೆ. ವೃದ್ಧನು ನೀರಿನ ಬಾಟಲಿಯನ್ನು ಪಾತ್ರೆಯಂತೆ ಬಳಸುತ್ತಿದ್ದನು.
और ज़रा इन बाबा के भी कारनामे देखो …ये बेचारे बाबा सिर्फ़ बोतल में पेसाब कर उसे केले के ऊपर छिड़क रहें थे ..
फिर भी पुलिस बड़े अदब से पेश आ रही है..
कोई ज़रा आरती की थली लाना ..बाबा की आरती करनी है क्योंकि कुछ अन्यथा बोलो तो फिर ISLAMOPHOBIA की complaint कर देंगे Gulf में!! pic.twitter.com/SwzdfFJXm7— Sambit Patra (@sambitswaraj) April 22, 2020
ಇದಲ್ಲದೆ ವೈರಲ್ ವೀಡಿಯೊದಲ್ಲಿ ಎಲ್ಲಿಯೂ ಮನುಷ್ಯನು ಹಣ್ಣುಗಳ ಮೇಲೆ ಏನನ್ನೂ ಚಿಮುಕಿಸುವುದು ಕಾಣುವುದಿಲ್ಲ. ಆದ್ದರಿಂದ ಸುಳ್ಳು ಮಾಹಿತಿಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆ ವಯಸ್ಸಾದ ಮುದುಕ ಹೊಡೆತ ಬೀಳುವ ಭಯದಿಂದ ಕೈಗಳ್ನು ಮಡಿಚಿ ಕ್ಷಮೆ ಯಾಚಿಸುತ್ತಿದ್ದಾರೆ.
महोदय @bijnorpolice बोतल मे पेशाब कर केले पर डालने के संबंध मे, आपकी ओर से मुकदमा किए जाने का उत्तर दिया जा रहा हैं। क्या कोई ऐसा वीडियो मिला जिसमे आरोप सत्यापित हो रहें हैं? विनम्र निवेदन है कृपया स्पष्ट करें, ताकि समाज मे भ्रम न रहें। शांति, भाईचारा के लिए यह अति आवश्यक हैं।
— Aalam Faridi (@AalamFaridi) April 22, 2020
ಈ ವ್ಯಕ್ತಿ ಹಣ್ಣುಗಳ ಮೇಲೆ ಮೂತ್ರ ಸಿಂಪಡಿಸುತ್ತಿದ್ದನೆಂದು ಬಿಜ್ನೋರ್ ಪೊಲೀಸರು ಖಚಿತಪಡಿಸಿಲ್ಲ. ಈ ಘಟನೆಯ ಬಗ್ಗೆ ಪತ್ರಕರ್ತರೊಬ್ಬರು ಬಿಜ್ನೋರ್ ಪೊಲೀಸರನ್ನು ಕೇಳಿದಾಗ ಅವರು ವ್ಯಕ್ತಿಯನ್ನು ಕ್ವಾರಂಟೈನ್ ಮಾಡಲಾಗಿದೆ ಮತ್ತು ಈ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಉತ್ತರಿಸಿದರು.
ವಯಸ್ಸಾದ ಆ ವ್ಯಕ್ತಿಯು ಕೆಳಗಿನ ಪೋಸ್ಟ್ನಲ್ಲಿ ಏನು ನಡೆಯಿತೆಂದು ವಿವರಿಸಿದ್ದನ್ನು ನೋಡಬಹುದು:
https://m.facebook.com/story.php?story_fbid=1079464145759657&id=100010882455495
ಕೊರೊನಾ ಸೋಂಕಿನ ಹಾವಳಿ ಹೆಚ್ಚಾದ ಕಳೆದ ಕೆಲವು ದಿನಗಳಲ್ಲಿ ಅನೇಕ ಹಿಂದುತ್ವವಾದಿ ಕಾರ್ಯಕರ್ತರು ಮುಸ್ಲಿಮರನ್ನು ಹಿಂದೂ ಪ್ರದೇಶಗಳಲ್ಲಿ ವ್ಯಾಪಾರ ಮಾಡದಂತೆ ಬೆದರಿಕೆ ಹಾಕಿದ್ದಾರೆ. ಈ ಘಟನೆಯು ಮುಸ್ಲಿಮರನ್ನು ದೂಷಿಸುವ ಪ್ರಚಾರದ ಭಾಗವಾಗಿ ಬಳಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

