ಮುಸ್ಲೀಮರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಕ್ಷಮೆ ಯಾಚಿಸಿದ ಅನರ್ಬ್ ಗೋಸ್ವಾಮಿ

ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಮುಸ್ಲಿಮರ ಭಾವನೆಗಳನ್ನು ನೋಯಿಸಿದ ಆರೋಪದ ನಂತರ ಅಪರೂಪಕ್ಕೆ ಬೇಷರತ್‌ ಕ್ಷಮೆಯಾಚಿಸಿದೆ. ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿಯಾದ ಸುದ್ದಿ ಪ್ರಸಾರ ಮಾಡಿ ಸಿಕ್ಕಿಬಿದ್ದ ನಂತರ ಅರ್ನಬ್‌ ಗೋಸ್ವಾಮಿಯ ಚಾನೆಲ್‌ನ ಅಸಾಧಾರಣ ಕ್ಷಮೆಯಾಚನೆಯು ಹೊರಬಿದ್ದಿದೆ.

ರಿಪಬ್ಲಿಕ್‌ ಟಿವಿಯಲ್ಲಿ ಜಮಾತ್-ಇ-ಇಸ್ಲಾಮಿ ಭಾರತದ ಮುಖ್ಯಸ್ಥ ಮೌಲಾನಾ ಜಲಾಲುದ್ದೀನ್ ಉಮ್ರಿ ಭಯೋತ್ಪಾದಕ ಎಂದು ಸುಳ್ಳು ಆರೋಪವನ್ನು ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ನಂತರ ರಿಪಬ್ಲಿಕ್ ಟಿವಿಯು ಕ್ಷಮೆಯಾಚಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವಾರು ಮುಸ್ಲಿಂ ಗುಂಪುಗಳು ರಿಪಬ್ಲಿಕ್‌ ಮತ್ತು ಸಿಎನ್‌ಎನ್-ನ್ಯೂಸ್ 18 ಚಾನೆಲ್‌‌ಗಳ ಸುಳ್ಳು ಸುದ್ದಿ ಹರಡುವ ಕೃತ್ಯವನ್ನು ಖಂಡಿಸಿ ಪತ್ರವೊಂದನ್ನು ಬರೆದಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ. ಎಐಎಂಪಿಎಲ್‌ಬಿಯ ಪತ್ರದಲ್ಲಿ “ಸಿಎನ್‌ಎನ್-ನ್ಯೂಸ್ 18 ಚಾನೆಲ್‌ ಮುಸ್ಲಿಮರಿಗೆ ಪವಿತ್ರವಾದ ಮೂರು ತಾಣಗಳನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ‘ಭಯೋತ್ಪಾದಕ ಕಾರ್ಖಾನೆ’ಗೆ ಸಂಬಂಧಿಸಿವೆ ಎಂದು ತೋರಿಸುವ ಮೂಲಕ ಧರ್ಮನಿಂದನೆ ಮಾಡಿದ್ದನ್ನು ಖಂಡಿಸಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಕುರಿತು ಟ್ವಿಟ್ಟರ್‌ನಲ್ಲಿ “ಎಐಎಂಪಿಎಲ್‌ಬಿಯ ಉಪಾಧ್ಯಕ್ಷ ಎಂ.ಎಲ್.ಜಲಾಲುದ್ದೀನ್ ಉಮ್ರಿಯವರನ್ನು ರಿಪಬ್ಲಿಕ್‌ ಟಿವಿಯು ಭಯೋತ್ಪಾದಕನೆಂದು ಸುಳ್ಳು ಆರೋಪಿಸಿದ್ದಕ್ಕಾಗಿ ತೀವ್ರವಾಗಿ ಖಂಡಿಸುತ್ತೇವೆ. ಮೆಕ್ಕಾ, ಮದೀನಾ ಮತ್ತು ಕುಡ್ಸ್‌ನ ಕುರಿತು ಧರ್ಮನಿಂದನೆ ಮಾಡಿದ್ದಕ್ಕೆ CNNnews18 ನ ಕ್ರಮವನ್ನು ಖಂಡಿಸುತ್ತೇವೆ. ಈ ಕುರಿತು ಸಾರ್ವಜನಿಕವಾಗಿ ಎರಡು ಚಾನೆಲ್‌ಗಳು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.

ತನ್ನ ನಕಲಿ ವರದಿಯ ಸಂಭವನೀಯ ಪರಿಣಾಮಗಳನ್ನು ಅರಿತುಕೊಂಡ ರಿಪಬ್ಲಿಕ್ ಟಿವಿಯು ಮಿಂಚಿನ ವೇಗದಲ್ಲಿ ಸಾಗಿ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಅಪರೂಪಕ್ಕೆ ಕ್ಷಮೆಯಾಚಿಸಿತು. ಅದರ ಟ್ವೀಟ್‌ನಲ್ಲಿ, “ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವನ್ನು ತಪ್ಪಾಗಿ ಪ್ರಸಾರ ಮಾಡಿದ್ದಕ್ಕಾಗಿ ಸ್ಪಷ್ಟೀಕರಣ ಮತ್ತು ಕ್ಷಮೆಯಾಚನೆಯನ್ನು ರಿಪಬ್ಲಿಕ್ ಟಿವಿಯಲ್ಲಿ ಸಂಜೆ 4:03 ಕ್ಕೆ ಪ್ರಸಾರ ಮಾಡಲಾಯಿತು. ಇದು ಅಜಾಗರೂಕ ದೋಷವಾಗಿದ್ದು, ಸಂಬಂಧಪಟ್ಟ ವೀಡಿಯೊದಲ್ಲಿ ಸೈಯದ್ ಜಲಾಲುದ್ದೀನ್ ಉಮ್ರಿ ಅವರ ಚಿತ್ರವು ನಮ್ಮ ತಪ್ಪಾಗಿ ಪ್ರಸಾರವಾಯಿತು ಮತ್ತು ತಕ್ಷಣ ಸರಿಪಡಿಸಲಾಗಿದೆ”

                                     

ಅದರ ನಂತರದ ಟ್ವೀಟ್‌ನಲ್ಲಿ, “ರಿಪಬ್ಲಿಕ್ ಟಿವಿ ಮೌಲಾನಾ ಸೈಯದ್ ಜಲಾಲುದ್ದೀನ್ ಉಮ್ರಿಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತದೆ” ಎಂದು ಬರೆದಿದೆ.

ರಿಪಬ್ಲಿಕ್ ಟಿವಿ ತನ್ನ ವೆಬ್‌ಸೈಟ್‌ನಿಂದ ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿರುವಂತೆ ತೋರುತ್ತಿದೆ ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ವಿರುದ್ಧ ಸರಕಾರದ ದಬ್ಬಾಳಿಕೆಯ ಕುರಿತಾದ ತನ್ನ ವರದಿಯನ್ನು ನವೀಕರಿಸಿದೆ. ಕಣಿವೆಯ ಜಮಾತೆ-ಇ-ಇಸ್ಲಾಮಿ ಭಾರತದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಿಎನ್ಎನ್-ನ್ಯೂಸ್ 18 ಚಾನೆಲ್‌ನ ಅವಾಂತರಗಳು

ಮತ್ತೊಂದೆಡೆ, ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಒಡೆತನದ ಚಾನೆಲ್ ಸಿಎನ್ಎನ್-ನ್ಯೂಸ್ 18 ಚಾನೆಲ್‌ ಇನ್ನಷ್ಟು ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಚಾನೆಲ್‌ ವಿಶ್ವದಾದ್ಯಂತ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಎಐಎಂಪಿಎಲ್‌ಬಿಯು ಆರೋಪಿಸಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ವ್ಯಕ್ತಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ಆಸ್ತಿ ವಿವರಗಳನ್ನು ಚಾನೆಲ್ ಶನಿವಾರ ತನ್ನ ಪ್ರಸಾರದಲ್ಲಿ ತಿಳಿಸಿದೆ. ಆಗ ಅದು ‘ಬಹವಾಲ್‌ಪುರದ ಜೆಎಂ ಭಯೋತ್ಪಾದಕ ಕಾರ್ಖಾನೆ’ ಎಂಬ ಮುಖ್ಯಾಂಶಗಳನ್ನು ಪ್ರಸಾರ ಮಾಡುತ್ತಿರುವಾಗ, ಮೆಕ್ಕಾದ ಬೃಹತ್‌ ಮಸೀದಿಯ ಫೋಟೋಗಳನ್ನು ತೋರಿಸಿದೆ. ಮದೀನಾದ ಮಸೀದಿ ಮತ್ತು ಅಲ್-ಅಕ್ಸಾವನ್ನು ಕೂಡ ಅಜರ್‌ನ ಭಯೋತ್ಪಾದಕ ಕಾರ್ಖಾನೆಯ ಭಾಗವೆಂದು ಪ್ರಸಾರ ಮಾಡಿದೆ. ಈ ಮಸೀದಿಗಳನ್ನು ವಿಶ್ವದಾದ್ಯಂತ ಮುಸ್ಲಿಮರಿಗೆ ಮೂರು ಅತ್ಯಂತ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ.

ಎಐಎಂಪಿಎಲ್‌ಬಿಯ ಪತ್ರವು ಸಿಎನ್ಎನ್-ನ್ಯೂಸ್ 18 ರ ನ್ಯೂಸ್ ಫ್ಲ್ಯಾಷ್ ಅನ್ನು ಚೇಷ್ಟೆಯೆಂದು, ಇಸ್ಲಾಂ ಧರ್ಮವನ್ನು ಕೆಣಕಲು ಮತ್ತು ಮುಸ್ಲಿಮರನ್ನು ಕೆರಳಿಸಲು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದೆ. ಜಗತ್ತಿನಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಂಬಲಾಗದಷ್ಟು ಕೋಮುಪ್ರಚೋದನೆಯ ಪ್ರಸಾರಕ್ಕಾಗಿ ಚಾನೆಲ್ ಇನ್ನೂ ಕ್ಷಮೆಯಾಚಿಸಿಲ್ಲ. ಇಸ್ಲಾಂ ಧರ್ಮದ ಮೂರು ಪವಿತ್ರ ತಾಣಗಳ ಚಿತ್ರಗಳನ್ನು ‘ಜೆಎಂ ಭಯೋತ್ಪಾದಕ ಅಂಶ’ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರ ಮಾಡುವ ಮೂಲಕ, ಚಾನೆಲ್ ಮುಸ್ಲಿಮರನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸಿದೆ.

ಒಟ್ಟಿನಲ್ಲಿ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಸುದ್ದಿ ಹರಡುವಲ್ಲಿ ನಿರತವಾಗಿವೆ. ಆ ಮೂಲಕ ಪತ್ರಿಕೋದ್ಯಮದ ಮೂಲ ಆಶಯಗಳನ್ನು ಮಣ್ಣು ಮಾಡುತ್ತಿವೆ. ಆದರೆ ಇದರ ವಿರುದ್ಧ ದೂರು ನೀಡುವ, ಸುಳ್ಳುಗಳನ್ನು ಬಯಲು ಮಾಡುವ ಕೆಲಸವೂ ಕೂಡ ನಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.

ಕೃಪೆ: ಜನತಕಾರಿಪೋರ್ಟರ್‌

(ಈ ಲೇಖನ 2019ರ ಮಾರ್ಚ್‌ 3 ರಂದು ಜನತಕಾರಿಪೋರ್ಟರ್‌ನಲ್ಲಿ ಪ್ರಕಟವಾಗಿದ್ದು. ಮಾಧ್ಯಮಗಳು ಹೇಗೆ ಸುಳ್ಳು ಹಬ್ಬಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿದ್ದರಿಂದ ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ)


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights