ಮೈತ್ರಿ ಸರ್ಕಾರದಲ್ಲಿ ಪೋನ್ ಕದ್ದಾಲಿಕೆ ಪ್ರಕರಣ : ಕಳವಳ ವ್ಯಕ್ತಪಡಿಸಿದ ಸಿಎಂ, ಸಚಿವ, ಶಾಸಕರು

ಮೈತ್ರಿ ಸರ್ಕಾರದಲ್ಲಿ ಪೋನ್ ಕದ್ದಾಲಿಕೆ ಪ್ರಕರಣ ಘಟನೆ ಬಗ್ಗೆ ಶಾಸಕ ಎಸ್.ಎ ರಾಮದಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕಾಗಿ ಇಷ್ಟೊಂದು ನೀಚ ಸ್ಥಿತಿಗೆ ಇಳಿಯಬಾರದು.  ಸ್ವಾಮೀಜಿಗಳು ಒಂದು ಪಕ್ಷದ ಪರ ಇರುವುದಿಲ್ಲ. ಅಂತಹವರ ಟೆಲಿಫೋನ್ ಕದ್ದಾಲಿಕೆ ಮಾಡಿರುವುದು ಬೇಸರದ ಸಂಗತಿ. ಮಹಾಭಾರತದಲ್ಲಿ ಅರ್ಜುನ ದ್ರೌಪದಿ ಮತ್ತು ಧರ್ಮರಾಯನ ನಡುವಿನ ಸಂಭಾಷಣೆ ಕೇಳಿಸಿಕೊಂಡಿದ್ದ. ಅದರ ಪರಿಣಾಮ ಪ್ರಾಯಶ್ಚಿತ್ತಕ್ಕಾಗಿ ಯಾತ್ರೆ ಹೋಗಿದ್ದ. ಈಗ ರಾಜಕಾರಣಿಗಳು ಟೆಲಿಫೋನ್ ಕದ್ದಾಲಿಕೆ ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಶಿಕ್ಷೆಗಿಂತ ಮುಖ್ಯವಾಗಿ ತನಿಖೆಯಿಂದ ಸತ್ಯಾಂಶ ಹೊರಬಿದ್ದರೆ ತಪ್ಪಿತಸ್ಥರು ತಲೆ ತಗ್ಗಿಸಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೂ ಕೊನೆಗೆ ಅದರ ಕುರುವು ಸಿಗುತ್ತೆ. ಇದೂ ಕೂಡ ಅದೇರಿತಿ, ಯಾರು ಏನೇ ತಪ್ಪು ಮಾಡಿದ್ದರೂ ತನಿಖೆಯಲ್ಲಿ ಅದು ಹೊರ ಬರುತ್ತೆ. ನನಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ತನಿಖೆ ಪೂರ್ಣಗೊಂಡ ನಂತರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ. ಕಾನೂನು ಮೀರಿ ಯಾರು ನಡೆಯೋಕೆ ಆಗೋಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗುತ್ತೆ‌. ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿದೆ. ಇಂತಹ ಕೆಲಸವನ್ನು ಯಾರು ಮಾಡಬಾರದು. ಇದು ನೋವಿನ ಸಂಗತಿ. ಸಿಬಿಐ ತನಿಖೆಯಿಂದ ಎಲ್ಲಾ ಗೊತ್ತಾಗುತ್ತೆ ತಪಿಸ್ಥರಿಗೆ ಶಿಕ್ಷೆಯಾಗುತ್ತೆ ಎಂದರು.

ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಪೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸುತ್ತೂರು ಶ್ರೀ ಪೋನ್ ಕದ್ದಾಲಿಕೆ ವಿಚಾರ. ಯಾರ ಪೋನ್ ಕದ್ದಾಲಿಕೆ ಆಗಿದ್ದರು ಸತ್ಯ ಹೊರಬರಲಿದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ನಂತರ ಆ ಬಗ್ಗೆ ಮಾತನಾಡುತ್ತೇನೆ. ಸುತ್ತೂರು ಶ್ರೀಗಳ ಪೋನ್ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights