ಮೋದಿ ಹೇಳಿಕೆ ಬಳಸಿಕೊಂಡು ಮೋದಿಗೇ ಆಪ್‌ ಇಟ್ಟ ಚೀನಾ:

ಲಡಾಕ್‌ ಗಡಿಯಲ್ಲಿ ಉದ್ಭವಿಸಿರುವ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಕುರಿತು ಚರ್ಚಿಸಲು ಮೋದಿಯವರು ಶುಕ್ರವಾರ ಸರ್ವಪಕ್ಷಗಳ ಸಭೆ ಕರೆದಿದ್ದರು. ಸಭೆಯಲ್ಲಿ ‘ಭಾರತೀಯ ಗಡಿಯೊಳಗೆ ಯಾರೂ ಪ್ರವೇಶ ಮಾಡಿಲ್ಲ’ ಎಂಬ ಹೇಳಿಯನ್ನು ನೀಡಿದ್ದರು.

ಮೋದಿಯವರು ಈ ಹೇಳಿಯನ್ನು ವಿರೋಧಿಸಿ ಭಾರತದ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೂ, ಟೀಕಾ ಪ್ರಹಾರವನ್ನೂ ನಡೆಸಿದ್ದವು. ಆದರ ಜೊತೆಗೆ, ಈಗ ಮೋದಿಯವರ ಹೇಳಿಕೆಯನ್ನು ಬಳಸಿಕೊಂಡು ಚೀನಾ ಸರ್ಕಾರವು ಭಾರತದ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸುತ್ತಿದ್ದು, ಮೋದಿಯವರಿಗೇ ಆಪ್‌ ಇಟ್ಟಿದೆ.

“ಮೋದಿಯವರು ತಮ್ಮ ಸರ್ವಪಕ್ಷಗಳ ಸಭೆಯಲ್ಲಿ ಭಾರತದ ಲಡಾಖ್‌ ಭೂ ಭಾಗದೊಳಗೆ ಯಾರೂ ಪ್ರವೇಶ ಮಾಡಿಲ್ಲ ಎಂದಿದ್ದಾರೆ. ಹಾಗಿದ್ದ ಮೇಲೆ ಅವರ ಹೇಳಿಕೆಯ ಪ್ರಕಾರ ಘರ್ಷಣೆ ನಡೆದಿರುವುದು ಚೀನಾ ಭೂಭಾಗದೊಳಗೆ. ಅಂದರೆ, ಭಾರತೀಯ ಚೈನಿಕರು ಚೀನಾ ಗಡಿ ಪ್ರದೇಶದ ಮೇಲೆ ಆಕ್ರಮಣ ನಡೆಸಿದ್ದಾರೆ’ ಎಂದು ಚೀನಾದ ಜಿಟಿಟಿಎನ್‌ ನ್ಯೂಸ್‌ ಪ್ರೊಡ್ಯೂಸೆರ್‌ ಶೆನ್ ಶಿವೀ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ಚೀನಾದ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರ ಹೇಳಿಕೆಯು ಟ್ರೋಲ್‌ ಆಗುತ್ತಿದೆ..

                 

ಈ ನಡುವೆ, ಪ್ರಧಾನಮಂತ್ರಿ ಕಾರ್ಯಲಯ (ಪಿಎಂಒ ಆಫ್‌ ಇಂಡಿಯಾ) ಮೋದಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ಗಡಿ ವಾಸ್ತವ ರೇಖೆಯನ್ನು ದಾಟಿ ಭಾರತದ ಭೂಭಾಗಕ್ಕೆ ಚೀನಾ ಸೇನಾಪಡೆ ನುಗ್ಗಿಬರಲು ಸಾಧ್ಯವಾಗಿಲ್ಲ. ನಮ್ಮ ಸೈನಿಕರು ತೋರಿದ ದಿಟ್ಟತನದಿಂದ ಚೀನಾ ಸೈನಿಕರು ಭಾರತದೊಳಗೆ ನುಗ್ಗಲು ವಿಫಲರಾಗಿದ್ದಾರೆ. ಗಡಿ ವಾಸ್ತವ ರೇಖೆಯನ್ನು ಉಲ್ಲಂಘಿಸುವ ಪ್ರಯತ್ನಗಳಿಗೆ ನಮ್ಮ ಸೇನೆ ದಿಟ್ಟತನದಿಂದ ದೃಢವಾಗಿ ಪ್ರತಿಕ್ರಿಯೆ ನೀಡಿದೆ” ಎಂಬರ್ಥದಲ್ಲಿ ಪ್ರಧಾನಿ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆ ಎಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights