ಯಮನ ಬಳಿಕ ಕೊರೊನಾ ಜಾಗೃತಿಗೆ ಶಾರುಖ್ ಸಿನಿಮಾ ಪೋಸ್ಟರ್ ಬಳಸಿದ ಪೊಲೀಸ್ ಇಲಾಖೆ…!
ಕೋವಿಡ್-19 ಜಾಗೃತಿ ಮೂಡಿಸಲು ಯಮನ ಬಳಕೆ ಮಾಡಿ ಆಯ್ತು, ನಾಟಗಳ ಪ್ರದರ್ಶ ಆಯ್ತು ಈಗ ಸಿನಿಮಾ ಪೋಸ್ಟರ್ ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹೌದು… ನಾಗ್ಪುರ ಪೊಲೀಸರು ಎಸ್‌ಆರ್‌ಕೆ ಬ್ಲಾಕ್‌ಬಸ್ಟರ್ ಬಳಸಿಕೊಂಡುಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಾಗ್ಪುರ ಪೊಲೀಸರು ತಮ್ಮ ಸಂದೇಶವನ್ನು ಸಾರ್ವಜನಿಕರಲ್ಲಿ ಹರಡಲು ವಿನೋದ ಮತ್ತು ಸೃಜನಶೀಲ ಪೋಸ್ಟ್‌ಗಳ ಬಳಕೆ ಮಾಡಿಕೊಂಡಿದ್ದಾರೆ. ಕೆಲವು ಸಮಯಗಳಲ್ಲಿ ಮನೆಯಿಂದ ಹೊರಬರುವಾಗ ಮುಖವಾಡ ಧರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಲು ನಾಗ್ಪುರ ಪೊಲೀಸರು ಶಾರುಖ್ ಖಾನ್ ಅಭಿನಯದ 1998 ರ ಚಲನಚಿತ್ರ “ಕುಚ್ ಕುಚ್ ಹೋತಾ ಹೈ” ಯಿಂದ ಸ್ಟಿಲ್ ಅನ್ನು ತೆಗೆದುಕೊಂಡು ಒಂದು ಟ್ವಿಸ್ಟ್ನೊಂದಿಗೆ ಬಳಸಿಕೊಂಡಿದ್ದಾರೆ.
ಬುಧವಾರ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ಚಿತ್ರದ ದೃಶ್ಯದಲ್ಲಿ ಶಾರುಖ್ ಖಾನ್ ಕಾಜೋಲ್ನನ್ನು ತಬ್ಬಿಕೊಂಡು ಅದೇ ಸಮಯದಲ್ಲಿ ರಾಣಿ ಮುಖರ್ಜಿ ಅವರ ಕೈಯನ್ನು ಹಿಡಿದಿದ್ದಾರೆ. ಹೊರಗೆ ಹೋಗುವಾಗ ಮುಖವಾಡ ಧರಿಸಲು ಮರೆಯಬಾರದು ಎಂಬ ಸಂದೇಶವನ್ನು ರವಾನಿಸಲು ಪೊಲೀಸರು ಶ್ರೀ ಖಾನ್ ಅವರನ್ನು “ನೀವು”, ಕಾಜೋಲ್ ಅವರನ್ನು “ಗೋಯಿಂಗ್ ಔಟ್” (ಹೊರಗೆ ಹೋಗುವಾಗ) ಮತ್ತು ರಾಣಿ ಮುಖರ್ಜಿ ಅವರನ್ನು “ಮಾಸ್ಕ್” (ಮಾಸ್ಕ್ ಹಾಕಿಕೊಳ್ಳಬೇಕು) ಎಂದು ಲೇಬಲ್ ಮಾಡಿದ್ದಾರೆ. ಒಟ್ಟಾಗಿ ‘ನೀವು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ’ ಎಂಬ ಸಂದೇಶವನ್ನು ಇಲ್ಲಿ ಸಾರಲಾಗಿದೆ. ಈ ಪೋಸ್ಟರ್ ನ್ನು ಟ್ವೀಟರ್ ನಲ್ಲಿ ನಾಗ್ಪುರ ಪೊಲೀಸರು ಹಂಚಿಕೊಂಡಿದ್ದಾರೆ.
Don't let this bond break….
Kyunki, Bohot Kuch Hota Hai!#WearAMask#NagpurPolice pic.twitter.com/fai9yIC4kZ— Nagpur City Police (@NagpurPolice) May 27, 2020
ಜೊತೆಗೆ “ಈ ಬಂಧವನ್ನು ಮುರಿಯಲು ಬಿಡಬೇಡಿ … ಕ್ಯುಂಕಿ, ಬೋಹೋತ್ ಕುಚ್ ಹೋತಾ ಹೈ” (ಯಾಕೆಂದರೆ, ಏನೆಲ್ಲಾ ಗಿಬಿಡುತ್ತದೆ) ಎಂದು ನಾಗ್ಪುರ ಪೊಲೀಸರು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಶೀರ್ಷಿಕೆ ಬರೆದಿದ್ದಾರೆ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ನಾಗ್ಪುರ ಪೊಲೀಸರು ಕಳೆದ ತಿಂಗಳು ಮನೆಯಿಂದ ಹೊರಹೋಗುವಾಗ ಜನರಿಗೆ ಮುಖವಾಡಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿದ್ದರು.
ಅವರು ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು ಮುಖವಾಡ ಧರಿಸದೆ ಹೊರಹೋಗುವವರನ್ನು ಮರಳಿ ಮನೆಗೆ ಕಳುಹಿಸುತ್ತಿದ್ದಾರೆ. ನಾಗ್ಪುರದಲ್ಲಿ ಇದುವರೆಗೆ 612 ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ. ಸದ್ಯ ಪೋಸ್ಟ್ ಭಾರೀ ಸದ್ದು ಮಾಡುತ್ತಿದ್ದು, ಕೊರೊನಾ ಜಾಗೃತಿಗೆ ಈ ಪೋಸ್ಟರ್ ತುಂಬಾನೇ ಸಹಕಾರಿಯಾಗಿದೆ. ಜೊತೆಗೆ ಈ ಸೃಜನಶೀಲತೆಗೆ ಜನ ಮೆಚ್ಚಿಕೊಂಡಿದ್ದಾರೆ.

