ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಹಸಿರು ನಿಶಾನೆ ಬೀಸಿದ ರಾಜ್ಯ ಸರ್ಕಾರ
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ 39 ದಿನಗಳಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಲಾಕ್‌ಡೌನ್ ಜೊತೆಗೆ ವಿಧಿಸಿದ್ದ ಮಾರ್ಗಸೂಚಿಗಳು ಮೇ 3ರ ಮಧ್ಯರಾತ್ರಿ (ನಾಳೆ)ಗೆ ಕೊನೆಯಾಗಲಿವೆ.
ಕೆಂದ್ರ ಸರ್ಕಾರದ ಸೂಚನೆಯಂತೆ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಹೊಸ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿದೆ.
ರಾಜ್ಯವನ್ನು ಕೆಂಪು, ಹಸಿರು, ಕಿತ್ತಳೆ ವಲಯಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರೆಡ್ ಝೋನ್ನಲ್ಲಿ ಕರ್ನಾಟಕದ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ರೆಡ್ ಝೋನ್‌ನಲ್ಲಿವೆ. ರೆಡ್ ಝೋನ್ಗಳಲ್ಲಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಆದರೆ ಎಲ್ಲಾ ಮೂರು ವಲಯಗಳಲ್ಲಿರುವ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಯಿಂದಲೇ ಮದ್ಯದ ಅಂಗಡಿಗಳು ತೆರೆಯಲಿವೆ. ಕನಿಷ್ಠ 6 ಅಡಿ ಅಂತರ ಕಾಯ್ಡುಕೊಂಡು ಮದ್ಯ ಖರೀದಿ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರೆಡ್ ಝೋನ್ನಲ್ಲಿ ಸಿಂಗಲ್ ಶಾಪ್ಗಳಿಗೆ ಮಾತ್ರ ಅನುಮತಿ ಕೊಡಲಾಗಿದ್ದು, ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಮದ್ಯ ಖರೀದಿಸುವಾಗ ಒಂದು ಸಲಕ್ಕೆ 5 ಜನರು ಮಾತ್ರ ಅಂಗಡಿ ಒಳಗಿರಬೇಕು. ಜೊತೆಗೆ ಪಾನ್, ಗುಟ್ಕಾ, ಮಸಾಲಾ ಮಾರಾಟಕ್ಕೂ ಸರ್ಕಾರ ಅನುಮತಿಯನ್ನು ಕೊಟ್ಟಿದೆ.
ಅಂತಾರಾಜ್ಯ ಓಡಾಟಕ್ಕೆ ಅವಕಾಶ ಹೊಸ ಮಾರ್ಗಸೂಚಿಯಲ್ಲಿಯೂ ಅನುಮತಿ ಇಲ್ಲ. ಅಂತರ್ ರಾಜ್ಯ, ಅಂತರ್ ಜಿಲ್ಲೆ ಬಸ್ ಸಂಚಾರ ಇರುವುದಿಲ್ಲ. ಆಯಾ ಜಿಲ್ಲೆಗಳಲ್ಲೇ ಶೇ.50ರಷ್ಟು ಬಸ್ ಸಂಚಾರಕ್ಕೆ ಅನುಮತಿ ಕೊಡಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳು ಓಡಾಟಕ್ಕೆ ಅನುಮತಿ ಕೊಟ್ಟಿಲ್ಲ. ಮೆಟ್ರೋ ರೈಲುಗಳ ಸಂಚಾರಕ್ಕೂ ಅನುಮತಿ ನೀಡಿಲ್ಲ.

