ರಾಜ್ಯದಲ್ಲಿ 150 ಚಿತ್ರಮಂದಿರಗಳಿಗೆ ಬೀಳಲಿದೆಯೇ ಬೀಗ? ಯಾಕೆಗೊತ್ತಾ?

ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ ಮೇಲೆ ಎಲ್ಲಾ ಕ್ಷೇತ್ರಗಳೂ ಸಂಪೂರ್ಣ ಬಂದ್‌ ಆಗಿದೆ. ಅವುಗಳಲ್ಲಿ ಮನರಂಜನಾ ಕ್ಷೇತ್ರವೂ ಒಂದು. ಸಾವಿರಾರು ಜನರು ಒಂದೇ ಕಡೆ ಸೇರುವ ತಾಣವಾಗಿದ್ದ ಸಿನಿಮಾ ಥಿಯೇಟರ್‌ಗಳು ಬಂದ್‌ ಆಗಿದ್ದು, ಸದ್ಯ ಚಿತ್ರಮಂದಿರಗಳು ತೆರೆಯುವ ಸಾಧ್ಯತೆಯೂ ಕಡಿಮೆಯಾಗಿದೆ.

ಹೆಚ್ಚು ಜನರು ಒಂದೆಡೆ ಸೇರುವಂತಹ ಸಾರಿಗೆ, ರೈಲ್ವೇ, ಮಾಲ್, ಚಿತ್ರಮಂದಿರಗಳು ಸಧ್ಯಕ್ಕೆ ಓಪನ್‌ ಆಗಲಾರವು. ಈಗಾಗಲೇ ಸತತ 54 ದಿನಗಳ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಮೇಲೆಳಲಾರದಷ್ಟು ಬಿಕ್ಕಟ್ಟನ್ನು ಅನುಭವಿಸುತ್ತಿವೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳವನ್ನೂ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಚಿತ್ರಮಂದಿರಗಳ ಮಾಲೀಕರು ಹೇಳುತ್ತಿದ್ದಾರೆ.

ದೇಶದ ಖಜಾನೆಗೆ 450 ಕೋಟಿ ವಾರ್ಷಿಕ ಆದಾಯ ನೀಡುತ್ತಿದ್ದ ಚಿತ್ರಮಂದಿರಗಳು ಎರಡು ತಿಂಗಳುಗಳ ಮುಚ್ಚಿದ್ದು, ಇನ್ನೂ ಒಂದು ತಿಂಗಳು ಓಪನ್‌  ಆಗದೇ ಇರವು ಸಾದ್ಯತೆಗಳೇ ಹೆಚ್ಚಿವೆ. ಇದರಿಂದಾಗಿ ಸರ್ಕಾರದಿಂಲೇ ನೆರವು ಕೇಳುವ ಹಂತಕ್ಕೆ ಚಿತ್ರಪ್ರದರ್ಶಕರು ಬಂದಿದ್ದಾರೆ.

ಲಾಕ್‌ಡೌನ್ ಬಿಕ್ಕಟ್ಟಿನಿಂದಾಗಿ ಲಾಕ್‌ಡೌನ್‌ ತೆರವುಗೊಳ್ಳುವ ಹೊತ್ತಿಗೆ ಸುಮಾರು 150ಕ್ಕೂ ಹೆಚ್ಚು ಸಿಂಗಲ್‌ಸ್ಟ್ರೀನ್ ಚಿತ್ರಮಂದಿರಗಳು ಮುಚ್ಚುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ 615 ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಿವೆ.  ಲಾಕ್‌ಡೌನ್‌ ಸಂಪೂರ್ಣವಾಗಿ ತೆರವುಗೊಳಿಸಿದ ನಂತರವೂ ಜನ ಚಿತ್ರಮಂದಿರಕ್ಕೆ ಮೊದಲಿನ ರೀತಿಯಲ್ಲೇ ಬರುತ್ತಾರೆ ಎನ್ನುವ ನಿರೀಕ್ಷೆ ಇಲ್ಲ. ಇದನ್ನು ಅರಿತ ಕೆಲ ನಿರ್ಮಾಪಕರು ತಮ್ಮ ಸಿನಿಮಾವನ್ನು ಥಿಯೇಟರ್​ಗಳಲ್ಲಿ ರಿಲೀಸ್ ಮಾಡದೇ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್ ಮೊರೆ ಹೋಗುತ್ತಿದ್ದಾರೆ. ಇದು ಚಿತ್ರಮಂದಿರ ಮಾಲೀಕರನ್ನು ಚಿಂತೆಗೀಡು ಮಾಡಿದೆ.

ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳು ಆರಂಭವಾದ ಸಂದರ್ಭದಲ್ಲೇ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಆತಂಕಕ್ಕೆ ಒಳಗಾಗಿದ್ದವು. ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಿಗೆ ಅವಕಾಶ ನೀಡಬಾರದು ಎಂದು ಹೋರಾಟ ನಡೆಸಿದ್ದವು. ಈಗ ಅಮೆಜಾನ್ ಪ್ರೈಮ್, ನೆಟ್‌ಪ್ಲಿಕ್ಸ್‌ ನಂತಹ ಓಟಿಟಿ ಪ್ಲಾಟ್‌ಫಾಂಗಳು ತೆರೆದುಕೊಂಡಿದ್ದು, ಚಿತ್ರಮಂದಿರಗಳಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿವೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಪಿಸಿರುವ ‘ಲಾ’ ಹಾಗೂ ‘ಫ್ರೆಂಚ್​ ಬಿರಿಯಾನಿ’  ಸಿನಿಮಾಗಳನ್ನು  ಡಿಜಿಟಲ್​ನಲ್ಲಿ ರಿಲೀಸ್ ಮಾಡುವುದಾಗಿ ಪುನೀತ್​​​ ಘೋಷಣೆ ಮಾಡಿದ್ದಾರೆ. ಹೀಗಾಗಿ ಜೂನ್​ನಲ್ಲಿ ‘ಲಾ’, ಜುಲೈನಲ್ಲಿ ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಲಿವೆ. ಈ ಡಿಜಿಟಲ್ ರಿಲೀಸ್ ಟ್ರೆಂಡ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಹೊಸ ಟ್ರೆಂಡ್‌ನಿಂದಾಗಿ ಜನರಿಗೆ ಥಿಯೇಟರ್‌ಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಥಿಯೇಟರ್‌ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಯಲಿದೆ. ಆ ಕಾರಣದಿಂದಾಗಿ ರಾಜ್ಯದಲ್ಲಿ  150 ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುವ ಸಾದ್ಯತೆಯಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights