ರಾಜ್ಯದೆಲ್ಲೆಡೆ ಬಂದ್ ಕಿಚ್ಚು : ಪ್ರತಿಭಟನೆಗಿಳಿದ ಕಾರ್ಮಿಕ ಮುಖಂಡರು ಪೊಲೀಸರ ವಶ

ಇಂದು ಭಾರತ್ ಬಂದ್ ಹಿನ್ನೆಲೆಯಲ್ಲಿ  ರಾಜ್ಯದೆಲ್ಲೆಡೆ ಬಂದ್ ಕಿಚ್ಚು ಹರಡಿಕೊಳ್ಳದಂತೆ ಪೊಲೀಸರು ಬಿಗ್ ಭದ್ರತೆ ಒದಗಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲಾಗುತ್ತಿದೆ.

ಕೋಲಾರದಲ್ಲಿ ಪ್ರತಿಭಟನೆಗಿಳಿದ ಕಾರ್ಮಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಮಿಕ ಸುಧಾರಣೆ, ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಮತ್ತು ಕನಿಷ್ಠ ವೇತನ ಹಾಗೂ ಸಾಮಾಜಿಕ ಸುರಕ್ಷತೆ ಸೇರಿದಂತೆ ಕಾರ್ಮಿಕ ವರ್ಗದ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕೇಂದ್ರಿಯ ಕಾರ್ಮಿಕ ಒಕ್ಕೂಟಗಳ ಕರೆ ನೀಡಿರುವ ಇಂದಿನ(ಬುಧವಾರ) ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಂಗಳೂರು: ಜನಜೀವನ ಸಹಜ
ಮಂಗಳೂರಿನಲ್ಲಿ ಬೆಳಗ್ಗೆಯಿಂದ ಜನಜೀವನ ಸಹಜವಾಗಿದ್ದು, ಸರಕಾರಿ/ಖಾಸಗಿ ಬಸ್ಸುಗಳು ಓಡಾಡುತ್ತಿವೆ. ಸೆಂಟ್ರಲ್ ಮಾರ್ಕೆಟ್, ಬಂದರ್ ದಕ್ಕೆಯಲ್ಲಿ ಚಟುವಟಿಕೆ ಎಂದಿನಂತಿವೆ. ಎಲ್ಲೂ ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿಲ್ಲ.

ಶಾಲೆ, ಕಾಲೇಜುಗಳು ಎಂದಿನಂತೆ ತೆರೆದಿವೆ. ಆದರೆ ಕೇರಳ ರಸ್ತೆ ಸಾರಿಗೆ ಸೇರಿದ ಬಸ್‌ಗಳ ಮಂಗಳೂರು ಬಸ್ ಸಂಚಾರ ಸ್ಥಗಿತಗೊಂಡಿವೆ. ಹಾಗಾಗಿ ಒಂದಷ್ಟು ಜನ ವಿರಳತೆಯಿದೆ.

ಕುತ್ತಾರ್‌ನಲ್ಲಿ ಪ್ರತಿಭಟನೆ
ಕಾರ್ಮಿಕರ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಮಂಗಳೂರು ನಗರ ಹೊರವಲಯದ ಕುತ್ತಾರ್ ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ಡಿವೈಎಫ್‌ಐಯಿಂದ ಪ್ರತಿಭಟನೆ ನಡೆಯಿತು.

ಬೆಂಗಳೂರು ಸಹಜ

ಕಾರ್ಮಿಕ ಮುಷ್ಕರದ ಬಿಸಿ ಬೆಂಗಳೂರು ನಗರಕ್ಕೆ ಅಷ್ಟೇನು ತಟ್ಟಿಲ್ಲ. ನಗರದಲ್ಲಿ ಜನಜೀವನ ಸಹಜವಾಗಿದೆ. ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿವೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳು ಎಂದಿನಂತೆ ಓಡಾಡುತ್ತಿವೆ.

ನಗರದ ಟೌನ್ ಹಾಲ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಇಂದಿಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತೆ ಗೆ ಎರಡು ಕೆಎಸ್ ಆರ್‌ಪಿ ತುಕಡಿ, ಒಂದು ಸಿಎಆರ್ ಮತ್ತು ಒಂದು ವಾಟರ್ ಜೆಟ್ ನಿಯೋಜಿಸಲಾಗಿದೆ. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights