ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಸೆಲಬ್ರೇಷನ್ ಗೆ ಕೌಂಟ್ ಡೌನ್ ಸ್ಟಾರ್ಟ್….

ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಸೆಲಬ್ರೇಷನ್ ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ದು ಯಶ್ ಅಭಿಮಾನಿಗಳು ಹುಟ್ಟುಹಬ್ಬದ ಆಚರಣೆಗೆ ಸಕಲ ಸಿದ್ದತೆ ನಡೆಸಿದ್ದಾರೆ.

ಎರಡು ವಿಶ್ವದಾಖಲೆ ಬರೆಯಲು ಯಶ್ ಫ್ಯಾನ್ಸ್ ಸಜ್ಜುಗೊಂಡಿದ್ದಾರೆ. ಒಂದು, ರಾಕಿಭಾಯ್ ಬರ್ತಡೇಗಾಗಿ 5000 ಕೆಜಿ ತೂಕದ ಕೇಕ್ ತಯಾರಿ ಮಾಡಲಾಗಿದ್ದರೆ, ಇನ್ನೊಂದು ನಂದಿ ಲಿಂಕ್ ಗ್ರೌಂಡ್ ನಲ್ಲಿ 216 ಅಡಿ ಎತ್ತರದ ಕಟೌಟ್ ಹಾಕಲಾಗುತ್ತಿದೆ. ಈವರೆಗೆ ನಟ ಸೂರ್ಯನ 215 ಅಡಿ ಕಟೌಟ್ ಹಾಕಿದ್ದೇ ವಿಶ್ವದಾಖಲೆಯಾಗಿತ್ತು. ಆದರಿದು ಅದನ್ನ ಮೀರಿಸಿದ ಕಟೌಟ್ ಆಗಿದೆ. ನಂದಿ ಲಿಂಕ್ ಗ್ರೌಂಡ್ ನಲ್ಲಿ ಮಧ್ಯರಾತ್ರಿ ೧೨ ಕ್ಕೆ ಪತ್ನಿ ರಾಧಿಕಾ ಜೊತೆ ಸೇರಿ ಕೇಕ್ ಕಟ್ ಮಾಡಲಿದ್ದಾರೆ ಯಶ್.

ನಂದಿ ಲಿಂಕ್ ಗ್ರೌಂಡ್ ನಲ್ಲಿ ಅದ್ಧೂರಿ ಹುಟ್ಟು ಹಬ್ಬ ನಡೆಯಲಿದೆ.  ರಾಕಿಭಾಯ್ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲಿ ಸುಮಾರು 20 ಸಾವಿರ ಅಭಿಮಾನಿಗಳು ಪಾಲ್ಗೊಳ್ಳೋ ನಿರೀಕ್ಷೆ ಇದೆ. ಜೊತೆಗೆ ಯಶ್ ಬರ್ತಡೇ ಗಿಫ್ಟ್ ಆಗಿ ರಿಲೀಸ್ ಆಗಲಿದೆ ಕೆಜಿಎಫ್ -೨ ಸೆಕೆಂಡ್ ಲುಕ್ ಎನ್ನಲಾಗುತ್ತಿದೆ. ಯಶೋ ಮಾರ್ಗದ ವತಿಯಿಂದ ಸಾವಿರಾರು ಗಿಡಗಳ ವಿತರಣೆ ಕೂಡ ಮಾಡಲಾಗುವುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights