“ಲವ್ ಯೂ ಪಾಕ್ ಆರ್ಮಿ “ ಪೋಸ್ಟ್ ಹರಿಬಿಟ್ಟ ಯುವಕನ ಬಂಧನ…!

ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಎಡವಟ್ಟಿನಿಂದ ಅಮೂಲ್ಯ ಪೊಲೀಸ್ ವಶದಲ್ಲಿದ್ದಾಳೆ ಈ ನಡುವೆ ನಿನ್ನೆ ವಿಜಾಪುರದಲ್ಲಿ ಪಾಕ್ ಆರ್ಮಿ ಪರ ಪೋಸ್ಟ್ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ.
ಹೌದು.. ಸಾಮಾಜಿಕ ಜಾಲತಾಣಗಳಲ್ಲಿ “ಲವ್ ಯೂ ಪಾಕ್ ಆರ್ಮಿ “ ಎಂದು ಪೋಸ್ಟ್ ಹರಿಬಿಟ್ಟ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

 ತಾಳಿಕೋಟೆಯ ಮೇರು ಬ್ಯಾಗ್ ವಾಟ್ ಎಂಬ ಯುವಕ ಇಂತಹ ಕೃತ್ಯ ಎಸಗಿದ್ದು, ಎಟೂಝಡ್ ಖಾತೆಯಲ್ಲಿ “ಲವ್ ಯೂ ಪಾಕ್ ಆರ್ಮಿ “ ಎಂದು ಪೋಸ್ಟ್ ಬರೆಯಲಾಗಿದ್ದು, ಈತ ಅದನ್ನು ಶೇರ್ ಮಾಡಿದ್ದಾನೆ.

ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಆರೋಪಿಯನ್ನು ಮುದ್ದೇಬಿಹಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೇ ಎಟೂಝಡ್ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights