ವಿತ್ತ ಸಚಿವೆಯಿಂದ 3ನೇ ಸುದ್ದಿಗೋಷ್ಠಿ : ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಘೋಷಣೆ!
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ಗೆ ಸಂಬಂಧಪಟ್ಟಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೂರನೇ ಸುದ್ದಿಗೋಷ್ಠಿ ನಡೆಸಿದ್ದಾರೆ. ನಿನ್ನೆ ಮತ್ತು ಮೊನ್ನೆ ಸಣ್ಣ ಕೈಗಾರಿಕೆಗಳಿಗೆ ಹಾಗೂ ರೈತರಿಗೆ ಆರ್ಥಿಕ ನೆರವನ್ನು ಫೋಷಣೆ ಮಾಡಿದ್ದು ಇಂದು ಇವತ್ತು ಕೃಷಿ ಮತ್ತು ಕೃಷಿ ಸಂಬಂಧಿತ, ಮೀನುಗಾರಿಕೆ, ಹೈನುಗಾರಿಕೆ ಆಧ್ಯತೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ಕರೆದಿದ್ದ ವಿತ್ತ ಸಚಿವೆ, ಭಾರತದ ಜನಸಂಖ್ಯೆ ಬಹುತೇಕ ಜನ ಕೃಷಿಯನ್ನು ಅವಲಂಭಿಸಿದ್ದಾರೆ. ಏನೇ ಕಷ್ಟವಿದ್ದರೂ ಕೃಷಿ ಚಟುವಟಿಕೆಯನ್ನು ನಡೆಸುತ್ತಾರೆ. ಹಾಲು, ಹತ್ತಿ, ಬೆಳೆ ಉತ್ಪಾದನೆಯಲ್ಲಿ ದೇಶಕ್ಕೆ ಮೊದಲ ಸ್ಥಾನವಿದೆ. ಈ ವಲಯಗಳಿಗೆ ನೆರವು ಘೋಷಿಸುತ್ತೇವೆ. ಈಗಾಗಲೇ ಹಿಂಗಾರು ಮಳೆಯ ಕಟಾವು ಮುಗಿದಿದೆ. ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕೃಷಿ ಸಂಬಂಧಿಸಿದ 11 ಚಟುವಟಿಕೆಗಳಿಗೆ ನೆರವು ಘೋಷಿಸಿದ್ದೇವೆ. ಕೃಷಿ ಉತ್ಪನ್ನ, ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಮೊದಲ ಆಧ್ಯತೆ ನೀಡಿದ್ದೇವೆ. ಮೂಲ ಸೌಕರ್ಯ ಸಾಮಾರ್ಥ್ಯ ವೃದ್ಧಿ ಬಗ್ಗೆ 8 ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದೇವೆ’ ಎಂದರು.
‘ಮಾರ್ಚ್ ಏಪ್ರಿಲ್ 2 ತಿಂಗಳಲ್ಲಿ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರತಿನಿತ್ಯ 360 ಲಕ್ಷ ಲೀಟರ್ ಮಾತ್ರ ಹಾಲು ಮಾರಾಟವಾಗುತ್ತದೆ. 560 ಲಕ್ಷ ಲೀಟರ್ ಹಾಲನ್ನು ಹೈನುಗಾರರಿಂದ ಖರೀದಿ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿ 18700 ಕೋಟಿ ರೈತರಿಗೆ ಹಣ ವರ್ಗಾವಣೆ ಮಾಡಿದ್ದೇವೆ. ಪಿಎಂ ಫಸಲ್ ಭೀಮಾ ಯೋಜನೆ ಅಡಿ 6400 ಕೋಟಿ ನೀಡಿದ್ದೇವೆ’ ಎಂದರು.
ಈ ವೇಳೆ ವಿತ್ತ ಸವಿಚೆ ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ಘೋಷಿಸಿದ್ದಾರೆ. ಇದು ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಘೋಷಿಸಲಾದ ಮೂರನೇ ಪ್ಯಾಕೇಜ್ ಇದು ಆಗಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10000 ಕೋಟಿ ಮೀಸಲು ಮತ್ತು ಆಯುರ್ವೇದ ಉತ್ಪನ್ನಗಳ ಸಾಗಾಟಕ್ಕೂ ಹಣ ಮೀಸಲಿಡಲಾಗಿದೆ ಎಂದರು. ಕರ್ನಾಟಕದ ರಾಗಿ, ತಮಿಳುನಾಡಿನ ಅರಸಿನ, ಕಾಶ್ಮೀರದ ಕೇಸರಿಗೆ ಮಾರುಕಟ್ಟೆ ವಿಸ್ತರಣೆ ಹಾಗೂ ಎಲ್ಲಾ ಆಹಾರ ಉತ್ಪನ್ನ ಮಾರುಕಟ್ಟೆಗೆ ಒತ್ತು ನೀಡಲಾಗಿದೆ. ಸಾವಯವ ಹಾಗೂ ಹರ್ಬಲ್ ಕೃಷಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.
ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಸತತ ಎರಡು ದಿನ ಸುದ್ದಿಗೋಷ್ಠಿ ನಡೆಸಿ, ಲಾಕ್ಡೌನ್ ಸಂದರ್ಭದಲ್ಲಿ ದೇಶದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಹೇಗೆ ಯೋಜನೆಗಳನ್ನು ರೂಪಿಸಿದೆ ಎಂದು ವಿವರಣೆ ನೀಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಂದು ಮತ್ತಷ್ಟು ವಿವರಣೆ ನೀಡಿದ್ದಾರೆ. ಮೂಲಗಳ ಪ್ರಕಾರ, ಭಾನುವಾರವರೆಗೂ ಪ್ರತಿದಿನವೂ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರಂತೆ.
20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರದು ಪ್ಯಾಕೇಜ್ ಬಗ್ಗೆ ಇಂದೇ ಕಡೆಯ ಸುದ್ದಿಗೋಷ್ಠಿ ಆಗುವ ಸಾಧ್ಯತೆ ಕೂಡ ಇದೆ.

