ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಎಲೋನ್ ಮುಸ್ಕ್ ಒಡೆತನದ ಕಾರು ಉತ್ಪಾದನ ಸಂಸ್ಥೆ ಟೆಲ್ಸ; ಉಚಿತ ವಿತರಣೆಯ ಭರವಸೆ

ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲಿ, ತುರ್ತು ರೋಗಿಗಳಿಗೆ ವೆಂಟಿಲೇಟರ್ ಗಳ ಅವಶ್ಯಕತೆ ಇರುವುದರಿಂದ ಅವುಗಳ ಅಲಭ್ಯತೆ ಹಲವು ಕಡೆ ಸಮಸ್ಯೆಯಾಗಿದೆ. ಈಗಾಗಲೇ ಹಲವು ಅಮೆರಿಕಾದ ಕಾರು ಸಂಸ್ಥೆಗಳು ವೆಂಟಿಲೇಟರ್ ಉತ್ಪಾದನೆಗೆ ಮುಂದಾಗಿವೆ. ಈಗ ಮತ್ತೊಂದು ಕಾರು ಉತ್ಪಾದನಾ ಸಂಸ್ಥೆ ಟೆಲ್ಸ, ಕಾರಿನ ಬಿಡಿಭಾಗಗಳನ್ನು ಬಳಸಿ ವೆಂಟಿಲೇಟರ್ ಉತ್ಪಾದಿಸುವ ವಿಡಿಯೋ ಒಂದನ್ನು ಪ್ರಕಟಿಸಿದೆ.

ಈ ವೆಂಟಿಲೇಟರ್ ಗಳು ಯಾವಾಗ ಆಸ್ಪತ್ರೆಗಳಿಗೆ ಲಭ್ಯವಾಗಲಿವೆ ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ ಇದಕ್ಕೆ ಅಮೆರಿಕಾದ ಎಫ್ ಡಿ ಎ ಇಂದ ಪರವಾನಗಿ ಸಿಕ್ಕಿದೆಯಂತೆ.

ಮಾರ್ಚ್ 31ರಂದು ಟೆಲ್ಸ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಗಳ ಒಡೆಯ ಎಲೋನ್ ಮುಸ್ಕ್ ಟ್ವೀಟ್ ಮಾಡಿ, ವೆಂಟಿಲೇಟರ್ ಉತ್ಪಾದನೆ ಮಾಡುತ್ತಿರುವ ವಿಷಯವನ್ನು ಹೇಳಿ, ವಿಶ್ವದಾದ್ಯಂತ ಟೆಲ್ಸ ತಲುಪುವ ಸಾಧ್ಯತೆ ಇರುವ ಕಡೆಗೆಲ್ಲ ಆಸ್ಪತ್ರೆಗಳಿಗೆ ಉಚಿತವಾಗಿ ವೆಂಟಿಲೇಟರ್ ನೀಡುವುದಾಗಿ ತಿಳಿಸಿದ್ದರು.

ಅಮೆರಿಕಾದಲ್ಲಿ ಕಾರು ಉತ್ಪಾದನಾ ಸಂಸ್ಥೆಗಳಾದ ಜನರಲ್ ಮೋಟರ್ಸ್ ಮತ್ತು ಫೋರ್ಡ್ ಕೂಡ ಕೊರೊನ ಸಾಂಕ್ರಾಮಿಕದ ವಿರುದ್ಧ ಹೋರಾಡಲು ವೆಂಟಿಲೇಟರ್ ಉತ್ಪಾದನೆಗೆ ಕೈಹಾಕಿದ್ದವು.

ಭಾರತದಲ್ಲಿ ಮಹೀಂದ್ರ ಕಾರು ಉತ್ಪಾದನೆ ಸಂಸ್ಥೆ ಕೂಡ ಈಗ ವೆಂಟಿಲೇಟರ್ ತಯಾರಿಸಿ ಆಸ್ಪತ್ರೆಗಳಿಗೆ ಒದಗಿಸಲು ಮುಂದಾಗಿದೆ ಎಂದು ತಿಳಿದುಬಂದಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights