ಸಂತೆಯಲ್ಲಿ ಪಶುಗಳಂತೆ ಮಾರಾಟವಾದ್ರು ಅನರ್ಹರು – ಸಿದ್ದರಾಮಯ್ಯ ಟೀಕೆ

ಡಿ.9 ರ ನಂತರ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತೆ. ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಇದು ಅತೀಶಯೋಕ್ತಿ ಅಲ್ಲ, ಯಡಿಯೂರಪ್ಪ ಎಷ್ಟೇ ರೌಂಡ ಹೊಡಿಲಿ, ನಾವು ಅಧಿಕಾರಕ್ಕೆ ಬರ್ತೆವೆ, ಅಥಣಿ ಮತಕ್ಷೇತ್ರಕ್ಕೆ ನೀರು ಕೊಡ್ತೇವೆ ಎಂದು ಸಿದ್ಧರಾಮಯ್ಯ ಮತ್ತೋಮ್ಮೆ ಸರಕಾರ ಪತನದ ಭವಿಷ್ಯ ನುಡಿದಿದ್ದಾರೆ.

ಅಥಣಿ ಬೈ ಎಲೆಕ್ಷನ್ ತೆಲಸಂಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಭಾಷಣದ ವೇಳೆ,  ಇದು ಯಾರಿಗೂ ಬೇಡವಾದ ಚುನಾವಣೆ. ಇದರಿಂದ ಯಾರಿಗೆ ಲಾಭ? ನಿಮಗೆ ಲಾಭವಾಗಿಲ್ಲ. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ‌ ಅವರಿಗೆ ಲಾಭವಾಗಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ಸಿ ಬಿಟ್ಟಿರುವುದಾಗಿ ಹೇಳುತ್ತಿರುವು ಅನರ್ಹ ಶಾಸಕರು ಹಸಿ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ಮಾರಾಟವಾದವರು. ಸಂತೆಯಲ್ಲಿ ಪಶುಗಳಂತೆ ಮಾರಾಟವಾದ ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಕೇಳಿ ಕಾಂಗ್ರೆಸ್ ಬಿಟ್ಟಿದ್ದಾರಾ ? ಎಂದು ತೆಲಸಂಗ ಮತದಾರರಿಗೆ ಸಿದ್ಧರಾಮಯ್ಯ ಪ್ರಶ್ನೆ ಹೇಳಿದ್ದಾರೆ.

ನಿಮ್ಮನ್ನು ಕೇಳದೆ ಬಿಜೆಪಿಗೆ ಹೋಗಿದ್ದು ನಿಮ್ಮನ್ನು ಅವಮಾನ ಮಾಡಿದಂತೆ. ಈಗ ನಿಮಗೆ ಅವಕಾಶ ಬಂದಿದೆ. ಕುಮಟಳ್ಳಿ ಸ್ವಂತ ಊರು ತೆಲಸಂಗಕ್ಕೆ ಅವಮಾಡಿದ್ದಾರೆ. ಅಗೌರವ ಮಾಡಿದ ಮಹೇಶ ಕುಮಟಳ್ಳಿ ನೀವು ಎಂಎಲ್ಎ ಆಗಲು ಯೋಗ್ಯರಲ್ಲ ಎಂದು ಹೇಳಿ. ರಾಣೆಬೆನ್ನೂರಿನಲ್ಲಿ ಮುಂಬೈ ಓಟು, ಬನ್ನಿಕೋಡ ಓಟು ಎಂಬುದು ಜನರ ಸ್ಲೋಗನ್ ಆಗಿತ್ತು. ಅದನ್ನು ನಾನು ಹೇಳಿದ್ದು. ನಮ್ಮ ಕಡೆ ಕುರುಬರೂ ಗೌಡರೇ. ನಮ್ಮಪ್ಪ ಸಿದ್ದನಗೌಡ. ನನ್ನ ತಮ್ಮಂದಿರು ರಾಮೇಗೌಡ, ಸಿದ್ದೇಗೌಡ. ಅನರ್ಹರೆಂದರೆ ಎಂಎಲ್ಎ ಆಗಲು ನಾಲಾಯಕ್ ಎಂದರ್ಥ. ನಾಲಾಯಕ್ ಮನುಷ್ಯ ಮತ್ತೆ ತನ್ನನ್ನು ಲಾಯಕ್ ಮಾಡು‌ ಎಂದು ನಿಮ್ಮ ಬಳಿ ಬರ್ತಾನೆ. ಆಗ, ನೀವು ಸುಪ್ರೀಂ ಕೋರ್ಟ್ ನಿನ್ನನ್ನು ಅನರ್ಹ ಮಾಡಿದೆ ಎಂದು ಪರ್ಮನೆಂಟಾಗಿ ಮನೆಗೆ ಕಳುಹಿಸಿ ಎಂದು ಅಥಣಿ ಮತದಾರರಿಗೆ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ.

ದಯಮಾಡಿ ಕೈ ಮುಗಿದು ಪ್ರಾರ್ಥನೆ ಮಾಡ್ತೆನೆ. ಇಂಥವರಿಗೆ ತಕ್ಕ ಪಾಠ ಕಲಿಸಿ, ಇವರಿಗೆ ಬರಲಿ. ಮಹಾರಾಷ್ಟ್ರ, ಗುಜರಾತ ಚುನಾವಣೆಯಲ್ಲಿ‌ ಪಕ್ಷಾಂತರಿಗಳಿಗೆ ಮತದಾರರು ಸೋಲಿಸಿದ್ದಾರೆ. ಇಲ್ಲಿಯೂ ಅಂಥದ್ದೆ ವಾತಾವರಣವಿದೆ. ಮತದಾರರೂ ತಾವಾಗಿಯೇ ಈ ರೀತಿ ಹೇಳುತ್ತಿದ್ದಾರೆ. ಹಿರೇಕೆರೂರಿನಲ್ಲಿ ಮತದಾರರು ಬಿ. ಸಿ. ಪಾಟೀಲ ನನ್ನು ಮನೆಗೆ ಕಳುಹಿಸ್ತೇನೆ ಎಂದು ಹೇಳುತ್ತಿದ್ದಾರೆ. ಅಥಣಿಯಲ್ಲಿಯೂ‌ ಅದೇ ಆಗಬೇಕು. ಕುಮಟಳ್ಳಿ ನಿಮಗೆ ಮನುಷ್ಯತ್ವ ಇದೆಯಾ? ಮನುಷ್ಯತ್ವ ಇದೆಯಾ? ಅಭಿವೃದ್ಧಿ ಹೆಸರಲ್ಲಿ ಹೀಗೆ ಮಾಡಿದ್ದು ಸರಿನಾ? 17 ಜನ ಹೋಗಿದ್ದರಿಂದ ಸಮ್ಮಿಶ್ರ ಸರಕಾರ ಬಿದ್ದು ಹೋಯ್ತು ಎಂದು ಕುಮಟಳ್ಳಿ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಶ್ರೀಮಂತ ಪಾಟೀಲ ತಮ್ಮ ಶುಗರ್ ಫ್ಯಾಕ್ಟರಿ ವಿದ್ಯುತ್ ಕೆಲಸದ ಬಗ್ಗೆ ನನ್ನ ಬಳಿ‌ ಬಂದಿದ್ದರು. ನಾನು ಕುಮಾರಸ್ವಾಮಿಗೆ ಫೋನ್ ಮಾಡಿ ಕೆಲಸ ಮಾಡಲು ಹೇಳಿದೆ. ಅದಾದ ಅರ್ಧ ಗಂಟೆಯಲ್ಲಿಯೇ ಶ್ರೀಮಂತ ಪಾಟೀಲ‌ ಓಡಿ ಹೋದರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights