ಸಕ್ಕರೆನಾಡು ಮಂಡ್ಯದಲ್ಲಿ ಕಾಣಿಸಿಕೊಂಡ ದೆವ್ವ! : ದೆವ್ವದ ವಿಡಿಯೋ ನೋಡಿ ದಂಗಾದ ಮಂದಿ
ರಸ್ತೆಯ ಮೇಲೆ ಯಾವುದೋ ಹೆಂಗಸಿನ ಆಕಾರದಲ್ಲಿ ನಡೆದಾಡುವ ದೃಶ್ಯವೊಂದು ಸದ್ಯ ಭಾರೀ ವೈರಲ್ ಆಗುದ್ದು, ವಿಡಿಯೋ ನೋಡಿದ ಮಂದಿ ದಂಗಾಗಿ ಹೋಗಿದ್ದಾರೆ.
ಹೌದು.. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಬಳಿ ದೆವ್ವ ಪ್ರತ್ಯಕ್ಷವಾಗಿದೆ. ಸ್ಥಳೀಯ ಯುವಕರು ೧ ನಿಮಿಷದ ದೆವ್ವದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಗ್ರಾಮದ ಹೊರವಲಯ ಕೊಡೊಯಾಲ ಕೊತ್ತತ್ತಿ ರಸ್ತೆಯ ಸೇತುವೆ ಮೇಲೆ ನಿಂತಂತೆ ಕೊನೆಗೆ ಮೇಲಕ್ಕೆ ಹೋಗುವಂತೆ ಕಾಣುವ ದೆವ್ವದ ದೃಶ್ಯ ಸೆರ ಹಿಡಿಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ದೆವ್ವದ ವಿಡಿಯೋ ನೋಡಿ ಮಂಡ್ಯದ ಮಮದಿ ಅಕ್ಷಶ: ಶಾಕ್ ಆಗಿದ್ದಾರೆ. ದೆವ್ವದ ವಿಡಿಯೋ ವೈರಲ್ ಆಗಿ ಆ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕೆಲವರಿಂದ ದೆವ್ವದ ಬಗ್ಗೆ ವಾದ ಪ್ರತಿವಾದ ನಡೆಯುತ್ತಿದೆ. ಜಿಲ್ಲೆಯಲ್ಲಿ ಸಖತ್ ಸೆನ್ಷೇಸನಲ್ ಕ್ರಿಯೇಟ್ ಮಾಡಿರೋ ವೈರಲ್ ಆಗಿರೋ ದೆವ್ವದ ವಿಡಿಯೋ ಕಂಡು ರಾತ್ರಿಯಲ್ಲಿ ಆ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರು ಭಯ ಪಡ್ತಿದ್ದಾರೆ.