ಸಾಹಿತಿ, ಪ್ರಗತಿಪರ ಚಿಂತಕ ಡಾ.‌ಎಸ್ ಬಿ ಜೋಗೂರ ವಿಧಿವಶ..!

ಸಾಹಿತಿ, ಪ್ರಗತಿಪರ ಚಿಂತಕ ಡಾ.‌ಎಸ್ ಬಿ ಜೋಗೂರ (51) ವಿಧಿವಶರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜೋಗೂರ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.  ಮೂಲತಃ ವಿಜಯಪೂರ ಜಿಲ್ಲೆಯ ಸಿಂದಗಿಯವರಾದ ಅವರು ಧಾರವಾಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪತ್ರಕರ್ತ, ಸಾಹಿತಿ, ವಾಗ್ಮಿ, ಚಿಂತಕರಾಗಿದ್ದ ಅವರು ಬಣ್ಣದ ಹನಿಗಳು, ನಿನ್ಯಾಕೊ ನಿನ್ನ ಹಂಗ್ಯಾಕೊ, ಇರದೇ ತೋರುವ ಬಗೆ, ಸೇರಿದಂತೆ 70 ಕ್ಕೂ ಹೆಚ್ಚು ಕೃತಿಗಳನ್ನು, ಪಠ್ಯಪುಸ್ತಕ, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಯಂತ ಕೃತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಪತ್ನಿ ಶಿಥಲ, ಪುತ್ರರಾದ ಸಹಿಷ್ಣು (15) ವಿಷ್ಮಯ (6) ಸೇರಿದಂತೆ ಅಪಾರ ಶಿಷ್ಯ ಬಳಗವನ್ನು ಅಗಲಿರುವ ಮೃತ ಡಾ ಎಸ್ ಬಿ ಜೋಗೂರ ಅವರ ಅಂತ್ಯಕ್ರೀಯೆ ಇಂದು ಬೆಳಿಗ್ಗೆ 11 ಗಂಟೆಗೆ ಹೊಸಯಲ್ಲಾಪೂರ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights