ಸಿಎಎ ವಿರೋಧಿಗಳು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳಿದ್ದಂತೆ – ಯತ್ನಾಳ

ಸಿಎಎ ವಿರೋಧಿಗಳು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳಿದ್ದಂತೆ ಎಂದು  ಬಸನಗೌಡ ರಾ. ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಅಂಬೇಡ್ಕರ ರಚಿತ ಸಂವಿಧಾನದಡಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಿಎಎ ಕಾಯಿದೆ ಪಾಸ್ ಮಾಡಲಾಗಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದನ್ನು ವಿರೋಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದಂತೆ.

ಸಲ್ಮಾನ ಖುರ್ಷಿದ ಕೂಡ ಈ ಕಾಯಿದೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ದಬ್ಬಾಳಿಕೆಗೆ ಒಳಗಾಗುವ ಅಲ್ಪಸಂಖ್ಯಾತ ಹಿಂದೂಗಳಿಗೆ ಇದರಡಿ ಪೌರತ್ವ ಸಿಗಲಿದೆ.

ಇನ್ನೂ ಸಿಎಂ ಮುಂದಿನ ರಾಜಕೀಯ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಹಿರಿಯ ಸಂಘ ಜೀವಿ. ಬಿಜೆಪಿ ಸಿದ್ಧಾಂಥದಂತೆ 75 ವರ್ಷ ಮೇಲ್ಪಟ್ಟವರು ಚುನಾವಣೆ ರಾಜಕೀಯದಿಂದ ದೂರ ಉಳಿಯುತ್ತಾರೆ. ಅದರಂತೆ ಕಲ್ಲಡ್ಕ ಪ್ರಭಾಕರ ಭಟ್ ಹಿರಿಯರಾಗಿ ತಮ್ಮ ಭಾವನೆ ಹೇಳಿದ್ದಾರೆ. ಅವರ ವೈಯಕ್ತಿಕ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತೆ. ಮುಂದಿನ ಬಾರಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾನೇ ಅಧಿಕಾರಕ್ಕೆ ಬರುತ್ತೇನೆ ಅಂತ ಅವರು ಸಿಎಂ ಹೇಳಿಲ್ಲ. ಪಕ್ಷ ಈ ಕುರಿತು ಆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ. ಸಚಿವ ಸಂಪುಟ ವಿಸ್ತರಣೆ ಬೇಗ ನಡೆಯಲಿದೆ. ಅನರ್ಹರಿಂದ ಅರ್ಹರಾದ ಶಾಸಕರು ಸಚಿವರಾಗಲಿದ್ದಾರೆ. ಎಲ್ಲ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತೆ. ಆದರೆ, ಹಲವು ಬಾರಿ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಸರಕಾರ ಉಳಿಸಿಕೊಳ್ಳಲು ನಾವೆಲ್ಲ‌ ಗಟ್ಟಿಯಾಗಬೇಕು.

ಭಾರತ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಸಿದ್ಧರಾಮಯ್ಯ ಹೇಳಿಕೆ ವಿಚಾರವಾಘಿ ಮಾತನಾಡಿದ ಅವರು, ಭಾರತವನ್ನು ಮತ್ತೇನು ಪಾಕಿಸ್ತಾನ ಮಾಡ್ತಾರಾ? ಹಿಂದೂಗಳು ಹೆಚ್ಚಾಗಿರುವ ದೇಶವನ್ನು ಹಿಂದೂ ರಾಷ್ಟ್ರ ಎಂದೇ ಕರೆಯುತ್ತಾರೆ. ಅಧಿಕಾರಕ್ಕಾಗಿ‌ ಅಂದು ಜವಾಹರಲಾಲ ನೆಹರು ಭಾರತ ವಿಭಜನೆಗೆ ಕಾರಣರಾದರು.

ನೆಹರು ಅವರಂಥ ವಿಲಾಸಿ ಜೀವನ ನಡೆಸುವ ಒಬ್ಬ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದು ಒಂದು ದುರಂತ. ಸರ್ಧಾರ ವಲ್ಲಭಬಾಯಿ ಪಟೇಲ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಶಿವಸೇನೆಯಿಂದ ಹಿಂದುತ್ವ ವಿಚಾರ ಕೈಜಾರಿ ಹೋಗಿದೆ. ಈ ಹಿನ್ನೆಲೆ ಗಡಿ, ಭಾಷೆ, ಶಿರಡಿ ಸಾಯಿಬಾವಾ ಜನ್ಮಸ್ಥಳದ ವಿವಾದವನ್ನು ಪ್ರಸ್ತಾಪಿಸುತ್ತಿದೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights