ಸೋಂಕು ಪೀಡಿತ ಗ್ರಾಮಗಳಲ್ಲಿ ತಾನೆ ಖುದ್ದು ಔ‍ಷಧಿ ಸಿಂಪಡಿಸಿದ ಶಾಸಕ

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಈ ಸಂದರ್ಭದಲ್ಲಿ ಜನರಿಗೆ ನೆರವಾಗುತ್ತಿರುವ ಶಾಸಕರು ಬೆರಳೆಣಿಯಷ್ಟು ಮಾತ್ರ. ಅದೇ ರೀತಿಯಲ್ಲಿ ಕರ್ನಾಟಕದ ಒಬ್ಬ ಶಾಸಕ ಸ್ವತಹ ತಾವೇ ಕೊರೋನಾ ವೈರಸ್​​ಗೆ ಗ್ರಾಮಗಳಲ್ಲಿ ಔಷಧಿ ಸಿಂಪಡಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ತಾವು ಶಾಸಕರು ಎನ್ನುವುದನ್ನು ಮರೆತು ಜನರ ರಕ್ಷಣೆಗೆ ಸೈನಿಕರಂತೆ ದುಡಿಯುತ್ತಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಅವರು ರಾಜಕೀಯಕ್ಕೂ ಮುನ್ನ ವೃತ್ತಿಪರ  ವೈದ್ಯರಾಗಿದ್ದರು ಎನ್ನುವ ವಿಚಾರ ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ಜನರಿಂದ ಆಯ್ಕೆಯಾದ ಬಳಿಕ ವೈದ್ಯ ವೃತ್ತಿಗೆ ಗುಡ್​ಬೈ ಹೇಳುತ್ತಾರೆ ಎಂದು ಹಲವು ಜನ ಅಂದುಕೊಂಡಿದ್ದರು. ಆದರೆ, ಕಿಲ್ಲರ್ ಕೊರೋನಾದಿಂದ ತಮ್ಮ ಕ್ಷೇತ್ರದ ಜನತೆಯ ರಕ್ಷಣೆಗೆ ತಾವೇ ಟೊಂಕ ಕಟ್ಟಿ ನಿಂತಿದ್ದಾರೆ. ಗ್ರಾಮಗಳಲ್ಲಿ ಔಷಧ ಸಿಂಪಡಣೆ, ಮೈಕ್ ಹಿಡಿದು ಕೊರೋನಾ ಸೋಂಕು ಹರಡುವ ಬಗೆ ಹೀಗೆ ಸವಿಸ್ತಾರವಾಗಿ ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ. ಪ್ರತಿ ನಿತ್ಯ ಒಂದೊಂದು ಹಳ್ಳಿಗೆ ಹೋಗುವ ಇವರು ಮೈಕ್ ಮೂಲಕ ಜಾಗೃತಿ ಮೂಡಿಸುವುದನ್ನು ಮಾತ್ರ ಮರೆತಿಲ್ಲ.

ಶಾಸಕ ಡಾ. ರಂಗನಾಥ್ ಅವರ ಕಾಯಕ ಇಷ್ಟಕ್ಕೆ ಮುಗಿದಿಲ್ಲ. ಇದರ ನಡುವೆ ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರದ ಬಡವರಿಗೆ ಉಚಿತ ಹಣ್ಣು, ತರಕಾರಿ, ದಿನಸಿಗಳನ್ನ ಹಂಚುವ ಕೆಲಸವನ್ನೂ ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಇದಕ್ಕಾಗಿ ಹೊರ ಜಿಲ್ಲೆಗಳಿಂದ ವಸ್ತುಗಳನ್ನ ತರಿಸಿಕೊಳ್ಳುತಿದ್ದಾರೆ. ಇದಕೆಲ್ಲಾ ಬೆನ್ನೆಲುಬಾಗಿ ನಿಂತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರ ಸಹಕಾರವನ್ನೂ ನೆನೆಯುತ್ತಾರೆ.

ರಾಜ್ಯದಲ್ಲಿ ಕೊರೊನಾ ಪರಿಹಾರ ಚಟುವಟಿಕೆ ನಡೆಸಿದ ಮೊದಲಿಗರಲ್ಲಿ ಇವರೂ ಒಬ್ಬರು. ಈಗ ಎಲ್ಲಾ ಪಕ್ಷದ ಶಾಸಕರೂ ಇವರ ಕಾರ್ಯವನ್ನ ಅನುರಿಸುತಿದ್ದಾರೆ ಎನ್ನುವ ಮಾತಿದೆ. ಶಾಸಕರ ಸೇವೆ ಕ್ಷೇತ್ರದ ಪ್ರತಿಯೊಬ್ಬರಿಗೂ ತಲುಪಿಸಲು ಅವಿರತ ಶ್ರಮಿಸುತ್ತಿರುವ ಶಾಸಕ ರಂಗನಾಥ್ ಅವರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights