ಹಾಂಕಾಂಗ್‌ಗೆ ಹೋದ ಭಾರತೀಯರಲ್ಲಿ ಕೊರೊನಾ; ಏರ್ ಇಂಡಿಯಾ ವಿಮಾನಕ್ಕೆ ಹಾಂಕಾಂಗ್‌ ನಿಷೇಧ

ಭಾರತದಿಂದ ಹಾಂಕಾಂಗ್ ತೆರಳಿದ್ದ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಆಗಸ್ಟ್‌ ತಿಂಗಳ ಅಂತ್ಯದವರೆಗೆ ಹಾಂಕಾಂಗ್‌ಗೆ ಭಾರತದ ಏರ್‌ ಇಂಡಿಯಾ ವಿಮಾನಗಳ ಪ್ರವೇಶವನ್ನು ಹಾಂಕಾಂಗ್ ಸರ್ಕಾರ ನಿಷೇಧಿಸಿದೆ.

ಹಾಂಕಾಂಗ್‌ಗೆ ಬರಲು ಬಯಸುವ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕೋವಿಡ್ ಪರೀಕ್ಷೆಯನ್ನು ನಡೆಸಿ, ಸೋಂಕು ನೆಗೆಟಿಗ್‌ ಬಂದಿರುವ ಪ್ರಮಾಣಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಹಾಂಕಾಂಗ್ ಪ್ರವೇಶ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹಾಂಕಾಂಗ್ ಕಳೆದ ತಿಂಗಳಲ್ಲೇ ಕೆಲವು ನಿಯಮಗಳನ್ನು ಹೊರಡಿಸಿತ್ತು.

ಇದಲ್ಲದೆ, ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಕಾಂಗ್ ವಿಮಾನ ನಿಲ್ದಾಣದ ಆವರಣಕ್ಕೆ ಆಗಮಿಸಿದ ನಂತರವೂ ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಲಾಗಿತ್ತು.

ಹೀಗಾಗಿ, ಏರ್ ಇಂಡಿಯಾ ವಿಮಾನದ ಮೂಲಕ ಹಾಂಕಾಂಗ್‌ಗೆ ಬಂದ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹಾಗಾಗಿ ಹಾಂಕಾಂಗ್ ಸರ್ಕಾರ ಭಾರತದ ಏರ್ ಇಂಡಿಯಾ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎನ್ನಲಾಗುತ್ತಿದೆ.

“ಹಾಂಕಾಂಗ್ ಅಧಿಕಾರಿಗಳು ವಿಧಿಸಿರುವ ನಿರ್ಬಂಧಗಳಿಂದಾಗಿ, ಎಐ 310/315, ದೆಹಲಿ – ಹಾಂಕಾಂಗ್ – 2020 ಆಗಸ್ಟ್ 18 ರ ವಿಮಾನ ಪ್ರಯಾಣವನ್ನು ಮುಂದೂಡಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ನವೀಕರಣವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಪ್ರಯಾಣಿಕರು ದಯವಿಟ್ಟು ಸಹಕರಿಸಿ ಮತ್ತು ಸಹಾಯಕ್ಕಾಗಿ ಏರ್ ಇಂಡಿಯಾ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿ” ಎಂದು ಏರ್‌ ಇಂಡಿಯಾ ಟ್ವೀಟ್ ಮಾಡಿದೆ.

ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಮಾರ್ಚ್ 23 ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ನಂತರದಲ್ಲಿ, ಭಾರತವು ಜುಲೈನಿಂದ ಅಮೆರಿಕ, ಜರ್ಮನಿ, ಫ್ರಾನ್ಸ್, ಸೌದಿ ಅರೇಬಿಯಾ, ಮಾಲ್ಡೀವ್ಸ್ ಮತ್ತು ಲಂಡನ್ ದೇಶಗಳೊಂದಿಗೆ ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಾಗಿ ಎರಡು ದೇಶಗಳ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳ ಮೂಲಕ ವಿಮಾನ ಸೇವೆಯನ್ನು ಮುಂದುವರೆಸಲಾಗುತ್ತಿದೆ.


ಇದನ್ನೂ ಓದೀಸಟ್ಲೇಜ್-ಯಮುನಾ ಕಾಲುವೆ ನಿರ್ಮಾಣಕ್ಕೆ ಮುಂದಾದರೆ ಪಂಜಾಬ್ ಹೊತ್ತಿ ಉರಿಯಲಿದೆ: ಪಂಜಾಬ್ ಮುಖ್ಯಮಂತ್ರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights