‘ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ ಇನ್ನು ವಿಷ ಕುಡಿದೋರು ಬದುಕುತ್ತಾರಾ’ ಬಿಜೆಪಿ ವಿರುದ್ದ ಸಿದ್ದು ವಾಗ್ದಾಳಿ

ಮೈಸೂರಿನಲ್ಲಿ ಮತ್ತೆ ತಮ್ಮ ಡೈಲಾಗ್ ರಿಪಿಟ್ ಮಾಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಬಿಜೆಪಿ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ ಇನ್ನು ವಿಷ ಕುಡಿದೋರು ಬದುಕುತ್ತಾರಾ ?  ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ಮಾದಾರೆ. ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೆ ಗೊತ್ತಾಗ್ತಿಲ್ಲ.
ನಾನೇ ಟಿಕೆಟ್ ಕೊಟ್ಟವರು ಶಾಸಕರಾದ್ರು ನಂತ್ರ ನನ್ನ ವಿರುದ್ದ ನಿಲ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂಂತಾಗಿದೆ.

ಇದು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಮಾತನಾಡಿದ್ದಾರೆ.

ಡಿಕೆಶಿಗೆ ಇಡಿ ವಿಚಾರಣೆ ವಿಚಾರ ಕೂಡ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡ್ತಿದೆ. ಕಾನೂನು ಅಂದ್ರೆ ಎಲ್ಲರಿಗೂ ಒಂದೆ ಅಲ್ವಾ.ಸದನದಲ್ಲಿ ಅಪರೇಷನ್ ಕಮಲದಬಗ್ಗೆ ಶಾಸಕರೇ ಪ್ರಸ್ತಾಪ ಮಾಡಿದ್ರು. ಅವರ ವಿರುದ್ದ ಯಾಕೆ ತನಿಖೆ ಮಾಡ್ತಿಲ್ಲಾ. ಡಿಕೆಶಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ.

ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದು ಸಾರಿ ನಾನು ಹೃದಯದಲ್ಲಿ ಇದ್ದಿನಿ ಅಂತಾನೆ. ಆಮೇಲೆ ನನ್ನೇ ಟೀಕೆ ಮಾಡ್ತಾನೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ರು.
ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ. ಮೈಸೂರಿನಲ್ಲಿ ಎಂಟಿಬಿ ನಾಗರಾಜ್ ಟೀಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು.

ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಜನರಲ್ ಎಲೆಕ್ಷನ್. ಬೈ ಎಲೆಕ್ಷನ್ ಗೆ ರೆಡಿ ಆಗಿದೀವಿ. ಮಧ್ಯಂತರ ಚುನಾವಣೆಗೂ ತಯಾರಾಗಿ ಅಂತ ಕಾರ್ಯಕರ್ತರಿಗೆ ಹೇಳಿದೀನಿ. ನೆನ್ನೆ ದಕ್ಷಿಣ ಕನ್ನಡಕ್ಕೆ ಹೋಗಿದ್ದೆ ಆಗ ನಮ್ ಕಾರ್ಯಕರ್ತರಿಗೆ ಡಿಸೆಂಬರ್ ಗೆ ಜನರಲ್ ಎಲೆಕ್ಷನ್ ಬರಬಹುದು ರೆಡಿ ಆಗಿ ಅಂತ ಹೇಳಿದೀನಿ.
ಯಾಕೆಂದ್ರೆ ಈ ಸರ್ಕಾರ ನೋಡಿದ್ರೆ ಅಧಿಕಾರ ನಡೆಸ್ತಾರೆ ಅಂತ ಅನ್ನಿಸ್ತಿಲ್ಲ. ಅದಕ್ಕೆ ಡಿಸೆಂಬರ್ ಗೆ ಜನರಲ್ ಎಲೆಕ್ಷನ್ ಬರತ್ತೆ ರೆಡಿ ಆಗಿ ಅಂತ ಹೇಳಿದ್ದೀನಿ ಎಂದು ಸಿದ್ದರಾಮಯ್ಯ ಮುಂದಿನ ರಾಜಕೀಯ ಭವಿಷ್ಯ ನುಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights