ಗಡಿ ವಿಚಾರದಲ್ಲಿ ವಿಪಕ್ಷಗಳ ಟೀಕೆ ಕುಚೋದ್ಯತನ; ಪ್ರಧಾನಮಂತ್ರಿ ಕಾರ್ಯಾಲಯ ಹೀಗೆ ಹೇಳಿದ್ದೇಕೆ?

ಭಾರತ ಮತ್ತು ಚೀನಾ ಸೈನಿಕರ ನಡುವೆ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನೀ ಸೈನಿಕರು ಭಾರತದ ಗಡಿ ಬಂದಿಲ್ಲ. ಭಾರತದ ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದರು. ಮೋದಿಯವರ ಹೇಳಿಕೆ ತೀವ್ರ ಟೀಕೆ ಮಾಡಿದ್ದ ವಿಪಕ್ಷಗಳು ಚೀನೀ ಸೈನಿಕರು ಗಡಿ ದಾಟಿ ಬಾರದಿದ್ದ ಮೇಲೆ ಸೈನಿಕ ಹತ್ಯೆಯಾಗಲು ಕಾರಣವೇನು? ಎಂದು ಟ್ರೋಲ್‌ ಮಾಡಿದ್ದವು.

ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಪಿಎಂಒ (ಪ್ರಧಾನಮಂತ್ರಿ ಕಾರ್ಯಾಲಯ) ಗಡಿ ವಿಚಾರದಲ್ಲಿ ವಿಪಕ್ಷಗಳು ಕುಚೋದ್ಯತನವನ್ನು ಪ್ರದರ್ಶಿಸುತ್ತಿವೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಗಡಿ ವಾಸ್ತವ ರೇಖೆಯನ್ನು ದಾಟಿ ಭಾರತದ ಭೂಭಾಗಕ್ಕೆ ಚೀನಾ ಸೇನಾಪಡೆ ನುಗ್ಗಿಬರಲು ಸಾಧ್ಯವಾಗಿಲ್ಲ. ನಮ್ಮ ಸೈನಿಕರು ತೋರಿದ ದಿಟ್ಟತನದಿಂದ ಚೀನಾ ಸೈನಿಕರು ಭಾರತದೊಳಗೆ ನುಗ್ಗಲು ವಿಫಲರಾಗಿದ್ದಾರೆ. ಗಡಿ ವಾಸ್ತವ ರೇಖೆಯನ್ನು ಉಲ್ಲಂಘಿಸುವ ಪ್ರಯತ್ನಗಳಿಗೆ ನಮ್ಮ ಸೇನೆ ದಿಟ್ಟತನದಿಂದ ದೃಢವಾಗಿ ಪ್ರತಿಕ್ರಿಯೆ ನೀಡಿದೆ ಎಂಬರ್ಥದಲ್ಲಿ ಪ್ರಧಾನಿ ಹೇಳಿರುವ ಮಾತುಗಳನ್ನು ವಿಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡು ಕುಚೋದ್ಯದ ಟೀಕೆಗಳನ್ನು ಮಾಡುತ್ತಿವೆ ಎಂದು ಆರೋಪಿಸಿದೆ.

ಸೈನಿಕರ ತ್ಯಾಗ, ಬಲಿದಾನಗಳಿಂದ ಚೀನಾ ಸೈನಿಕರು ಒಳಗೆ ನುಗ್ಗಿ ನಮ್ಮ ಪ್ರಾಂತ್ಯದೊಳಗೆ ಬರುವ ಪ್ರಯತ್ನ ವಿಫಲವಾಯಿತು. ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಯಾವುದೇ ಏಕಪಕ್ಷೀಯ ಬದಲಾವಣೆಗೆ ನಮ್ಮ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಗಡಿ ವಿಚಾರದಲ್ಲಿ ವಿಪಕ್ಷಗಳ ಟೀಕೆ ಕುಚೋದ್ಯತನ; ಪ್ರಧಾನಮಂತ್ರಿ ಕಾರ್ಯಾಲಯ ಹೀಗೆ ಹೇಳಿದ್ದೇಕೆ?

  • September 14, 2020 at 1:31 pm
    Permalink

    Hello, after reading this awesome paragraph i am too glad
    to share my familiarity here with colleagues.

    Reply

Leave a Reply

Your email address will not be published.

Verified by MonsterInsights