ಭಾರತದ ಗಡಿಯೊಳಗೆ ಚೀನೀಯರು ಪ್ರವೇಶಿಸದಿದ್ದಲ್ಲಿ, ಭಾರತೀಯ ಸೈನಿಕರನ್ನು ಕೊಂದವರಾರು? ಮೋದಿ ವಿರುದ್ಧ ಟೀಕಾ ಪ್ರಹಾರ

ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತ ಘರ್ಷಣೆಗೆ ಸಂಬಂಧಿಸಿದಂತೆ ಆಲ್ ಪಾರ್ಟಿ ಮಿಟಿಂಗ್ ನಲ್ಲಿ  ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತದೆ.. ಗಡಿ ವಿಷಯದಲ್ಲಿ ಪ್ರಧಾನಿಯನ್ನು ಟೀಕಿಸುವವರ ಗುಂಪಿಗೆ  ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಸೆರಿಕೋಡಿದ್ದಾರೆ.. ಸರ್ವಪಕ್ಷ ಸಭೆಯಲ್ಲಿ ಮೋದಿ ”ಭಾರತದ ಗಡಿಯೊಳಗೆ ಯಾರೂ ಪ್ರವೇಶ ಮಾಡಿಲ್ಲ” ಎಂದು ಹೇಳಿದ್ದರು. ಈ ಹೇಳಿಕೆ ಖಂಡಿಸಿರುವ ಪಿ ಚಿದಂಬರಂ ”ಹಾಗಾದ್ರೆ, ಭಾರತದ ಸೈನಿಕರನ್ನು ಕೊಂದಿದ್ದು ಯಾರು”? ಎಂದು ಕೇಳಿದ್ದಾರೆ.


ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಭಾರತ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ‘ದೇಶದ ರಕ್ಷಣೆ ವಿಷಯವನ್ನು ಚರ್ಚಿಸಬೇಕಾದ ಸಮಯದಲ್ಲಿ ಚೀನಾ ವಸ್ತು ನಿಷೇಧದ ಕೂಗು ಬೇಕಾಗಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.  ಜೊತೆಗೆ”ಚೀನಾಗೆ ಪ್ರಧಾನಿ ಮೋದಿ ಕ್ಲೀನ್ ಚಿಟ್ ನೀಡಿದ್ದಾರೆಯೇ”? ಎಂದು ಪ್ರಶ್ನಿಸಿದ್ದಾರೆ.

ಗಡಿಯೊಳಗೆ ಯಾರೂ ಪ್ರವೇಶ ಮಾಡಿಲ್ಲ ಎಂದು ಮೋದಿ ಹೇಳುವ ಮೂಲಕ ಪ್ರಧಾನಿ ಮೋದಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದಾರಯೇ? ಎಂದು ಪಿ ಚಿದಂಬರಂ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ. ”ಹಾಗಾದ್ರೆ ಚೀನಾದೊಂದಿಗೆ ಮಾತುಕತೆ ನಡೆಸಲು ಏನು ಇದೆ? ಮೇಜರ್ ಜನರಲ್‌ಗಳು ಏಕೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದರ ಬಗ್ಗೆ ಚರ್ಚೆಯಾಗ್ತಿದೆ?” ಎಂದು ಕೇಳಿದ್ದಾರೆ.
”ಚೀನಾ ಸೇನೆಯೂ ಭಾರತದ ಗಡಿಯೊಳಗೆ ಪ್ರವೇಶ ಮಾಡಿಲ್ಲ ಅಥವಾ ಗಡಿ ಉಲ್ಲಂಘನೆಯಾಗಿಲ್ಲ ಎನ್ನುವುದಾರೇ ಉಭಯ ರಾಷ್ಟ್ರಗಳ ಮಧ್ಯೆ ಗಡಿಯಿಂದ ಸೇನೆ ನಿಷ್ಕ್ರಿಯಗೊಳಿಸುವ ಕುರಿತು ಚರ್ಚೆ ಏಕೆ ಮಾಡಲಾಗಿದೆ” ಎಂದು ಮಾಜಿ ಹಣಕಾಸು ಸಚಿವ ಟ್ವೀಟ್ ಮಾಡಿದ್ದಾರೆ.

‘ಭಾರತ ಗಡಿ ಪ್ರದೇಶಕ್ಕೆ ವಿದೇಶಿ ಸೇನೆ ಪ್ರವೇಶವಾಗಿಲ್ಲ ಎನ್ನುವುದಾರೇ, ಮೇ 5 ಮತ್ತು ಮೇ 6 ರಂದು ಭಾರತ-ಚೀನಾ ಗಡಿಯಲ್ಲಿ ಏನಾಯಿತು? ಮೇ 16-17 ರಂದು ಲಡಾಖ್ ಗಡಿಯಲ್ಲಿ ಏನಾಯಿತು? 20 ಭಾರತೀಯ ಯೋಧರು ಹೇಗೆ ಮೃತಪಟ್ಟರು? ಎಂದು ಸ್ಪಷ್ಟ ಮಾಹಿತಿ ನೀಡಿ ಕಾಂಗ್ರೆಸ್ ಹಿರಿಯ ನಾಯಕ ಪ್ರಧಾನಿ ಅವರನ್ನು ಆಗ್ರಹಿಸಿದ್ದಾರೆ.

ಜೂನ್ 14ರ ರಾತ್ರಿ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಭಾರತ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೆ ಉಭಯ ರಾಷ್ಟ್ರಗಳ ನಡುವೆ ಮೇಜರ್ ಜನರಲ್ ಮಟ್ಟದ ಚರ್ಚೆ ಆಗಿದೆ. ಭಾರತ ಗಡಿ ಉಲ್ಲಂಘನೆ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಚೀನಾ ಉತ್ತರ ನೀಡಿತ್ತು. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights