ರಾಜ್ಯಕ್ಕೆ ಮುಂಬೈ ಕಂಟಕ : 24 ಗಂಟೆಯಲ್ಲಿ 149 ಕೊರೊನಾ ಕೇಸ್ : ಸಾವಿನ ಸಂಖ್ಯೆ 41ಕ್ಕೇರಿಕೆ!

ಕರುನಾಡಿಗೆ ಇಂದು ಮುಂಬೈ ಕಂಟಕ ಶುರುವಾಗಿದ್ದು ರಾಜ್ಯದಲ್ಲಿಂದು ಹೊಸದಾಗಿ 149 ಕೊರೊನಾ ಕೇಸ್ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1395 ಕ್ಕೇರಿಕೆಯಾಗಿದೆ.

ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನೂರಕ್ಕೂ ಅಧಿಕ ಜನ ಹೊಸದಾಗಿ ದಾಖಲಾಗಿದ್ದಾರೆ. ಇದಕ್ಕೆ ಮೂಲ ಮುಂಬೈನಿಂದ ಬಂದವರೇ ಆಗಿದ್ದು, ಮುಂಬೈನಿಂದ ಬಂದವರಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವೇಳೆಗೆ ಅರ್ಧ ದಿನಕ್ಕೆ ಹೊಸದಾಗಿ 127 ಕೊರೊನಾ ಕೇಸ್ ದಾಖಲಾಗಿದ್ದು, ಸಂಜೆ ವೇಳೆ ಈ ಸಂಖ್ಯೆ 149ರಷ್ಟಾಗಿದ್ದು ಕರ್ನಾಟಕದಲ್ಲಿ ಇದೇ ಮೊದಲು.

1395ಕೊರೊನಾ ಸೋಂಕಿತರಲ್ಲಿ  543 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 41 ಜನ ಸಾವನ್ನಪ್ಪಿದ್ದು, 23187 ಜನರ ಮೇಲೆ ನಿಗಾ ಇಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಮಂಡ್ಯದಲ್ಲಿ 71 ಸೋಂಕಿತರು ದಾಖಲಾಗಿದ್ದು ಸಕ್ಕರೆ ನಾಡಿ ಜನ ಶಾಕ್ ಆಗಿದ್ದಾರೆ. 5 ಚಿಕ್ಕಮಗಳೂರು, ದಾವಣೆಗೆರೆ 22, ಬೆಂಗಳೂರು 6, ಉಡುಪಿ 4,  ವಿಜಯಪುರ, ಗದಗ, ಬೀದರ್, ರಾಯಚೂರು, ಯಾದಗಿರಿ, ಯಾದಗಿರಿ, ಚಿತ್ರದುರ್ಗ ತಲಾ ಒಂದು,  ಉತ್ತರ ಕನ್ನಡ-4, ಕಲಬುರಗಿ 13, ಶಿವಮೊಗ್ಗ 10, ಚಿಕ್ಕಮಗಳೂರು 5 ಸೋಂಕಿತರು ದೃಢಪಟ್ಟಿದ್ದಾರೆ.

ಇಂದು ರಾಜ್ಯದಲ್ಲಿ ದಾಖಲಾದ 149 ಕೊರೊನಾ ಪ್ರಕರಣಗಳ ಪೈಕಿ 113  ಬೇರೆ ರಾಜ್ಯದಿಂದ ಬಂದವರಾಗಿದ್ದಾರೆ. ಜೊತೆಗೆ ಉಡಪಿಯಲ್ಲೂ ಮಹಾರಾಷ್ಟ್ರದಿಂದ ಬಂದವರಿಗೇ ಕೊರೊನಾ ಪಾಸಿಟಿವ್ ದಾಖಲಾಗಿದೆ. ಇದರಿಂದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ನಿಂದ ಬರುವ ಎಲ್ಲಾ ಸಾರಿಗೆ ಬಂದ್ ಮಾಡಲಾಗಿದೆ. ಯಾವ ಪ್ರಯಾಣಿಕರು ರಾಜ್ಯಗಳಿಗೆ ಬರುವಂತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights