ಎಂಎಲ್‌ಸಿ ಅಭ್ಯರ್ಥಿಗಳ ಆಯ್ಕೆ ಯಡಿಯೂರಪ್ಪನವರ ವಿಜಯವಲ್ಲ; ಹೈಕಮಾಂಡ್‌ ಚದುರಂಗದ ಆಟ!

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ ದೂಷಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಬದಾಲಾಗುತ್ತಿರುವ ರಾಜಕೀಯ ಸಮೀಕರಣವನ್ನು ಸ್ಪಷ್ಟಪಡಿಸಿದೆ. ಯಡಿಯೂರಪ್ಪನವರನ್ನು ಹಿಂದೆಕ್ಕೆ ದೂಡುತ್ತಿರುವುದಕ್ಕೆ, ಜೂನ್ 19 ರಂದು ರಾಜ್ಯಸಭಾ ಚುನಾವಣೆಗೆ ಯಡಿಯುರಪ್ಪ ಶಿಫಾರಸು ಮಾಡಿದ ಎಲ್ಲಾ ಮೂರು ಹೆಸರುಗಳನ್ನು ತಿರಸ್ಕರಿಸಿರುವುದು ಇತ್ತೀಚೆಗಿನ ಉದಾಹರಣೆ.

ಯಡಿಯುರಪ್ಪ ಅವರನ್ನು ರಾಜ್ಯ ರಾಜಕೀಯದಲ್ಲಿ ಅಪ್ರಸ್ತುತಗೊಳಿಸುವ ಮತ್ತ ಅವರ ಪ್ರಭಾವವನ್ನು ಒಸಕಿ ಹಾಕುವ ಕ್ರಮಗಳು ಆರ್‌ಎಸ್‌ಎಸ್ ಬಣದ ಬಿಜೆಪಿಗರ ಯೋಜನೆಯ ಭಾಗವಾಗಿ ನಡೆಯುತ್ತಿವೆ.

ಆದ್ದರಿಂದ, ವಿಧಾನ ಪರಿಷತ್‌ ಚುನಾವಣೆಗೆ ಜೂನ್ 16 ರಂದು ಯಡಿಯೂರಪ್ಪ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು, ಅವರ ಗೆಲುವು ಎಂದು ಹೇಳಲಾಯಿತು ಆಥವಾ ಪ್ರತಿಪಾದಿಸಲಾಯಿತು.  ಆದರೆ ಇದು ವಾಸ್ತವದಿಂದ ದೂರವಿದೆ.

ಅದು ಯಡಿಯೂರಪ್ಪನವರ ರಾಜಕೀಯ ವಿಜಯವಲ್ಲ

ಎಂಟಿಬಿ ನಾಗರಾಜ್, ಆರ್ ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹಾ ನಾಯಕ್, ಎಂಎಲ್ಸಿ ಚುನಾವಣೆಗೆ ಕಣಕ್ಕಿಳಿದ ನಾಲ್ವರು ಅಭ್ಯರ್ಥಿಗಳು. ಈ ನಾಲ್ಕು ಅಭ್ಯರ್ಥಿಗಳು ಯಡಿಯೂರಪ್ಪ ಅವರ ಬೆಂಬಲಿಗರು ಎಂಬುದು ಸತ್ಯವಾಗಿದ್ದರೂ, ಈ ಆಯ್ಕೆ ಯಡಿಯೂರಪ್ಪನವರ ವಿಜಯವಲ್ಲ ಎಂಬುದಕ್ಕೆ ಮೂರು ಅಂಶಗಳಿವೆ.

MTB Nagaraj, 'Pendulum' Shankar make BJP list for Karnataka MLC ...

ಮೊದಲನೆಯದಾಗಿ, ನಾಲ್ಕು ಅಭ್ಯರ್ಥಿಗಳ ಪೈಕಿ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ತಳಮಟ್ಟದ ಪಕ್ಷದ ಕಾರ್ಯಕರ್ತೆಯಾಗಿದ್ದು, ಆರ್‌ಎಸ್‌ಎಸ್ ಶಿಬಿರದಿಂದ ಆಯ್ಕೆಯಾದರವರು.

ಎರಡನೆಯದಾಗಿ, ಪಕ್ಷದ ಕೇಂದ್ರ ನಾಯಕತ್ವವು ರಾಜ್ಯದ ಕೋರ್ ಕಮಿಟಿಯ ಶಿಫಾರಸ್ಸು ಮಾಡಿದ್ದ, ಯಡಿಯೂರಪ್ಪನವರ ಆಯ್ಕೆಯ ಅಭ್ಯರ್ಥಿಯನ್ನು ತಿರಸ್ಕರಿಸಿದೆ. ಯಡಿಯೂರಪ್ಪ ಪಾಳಯದಲ್ಲಿ ಸೂಚಿಸಲಾಗಿದ್ದ ಶಿಫಾರಸ್ಸಿನ ಮೂಲ ಪಟ್ಟಿಯಲ್ಲಿ ಎ.ಎಚ್.​​ವಿಶ್ವನಾಥ್ ಅವರ ಹೆಸರು ಇತ್ತು.

ವಿಶ್ವನಾಥ್‌, 2019 ರಲ್ಲಿ ಕೇಸರಿ ಪಕ್ಷವು ಅಧಿಕಾರಕ್ಕೆ ಬರಲು ಶ್ರಮಿಸಿದ್ದವರಲ್ಲಿ ಮುಖ್ಯ ಪಕ್ಷಾಂತರಿಗಳಲ್ಲಿ ಒಬ್ಬರಾಗಿದ್ದು, ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ವಿಶ್ವನಾಥ್‌ ಆಯ್ಕೆಯ ಬದಲಾಗಿ ಪ್ರತಾಪ್‌ ಸಿಂಹ ನಾಯಕ್‌ ಅವರನ್ನು ಆಯ್ಕೆ ಮಾಡಿದ್ದು, ಯಡಿಯೂರಪ್ಪನವರ ನಿರ್ಧಾರವನ್ನು ತಿರಸ್ಕರಿಸಿತು.

Karnataka by-election: BJP candidate AH Vishwanath admits defeat ...

ಎಂಎಲ್‌ಸಿ ಚುನಾವಣೆಯು ಯಡಿಯೂರಪ್ಪನಿಗೆ ರಾಜಕೀಯ ವಿಜಯವಲ್ಲ ಎಂದು ಸಾಬೀತುಪಡಿಸುವ ಮೂರನೇ ಮತ್ತು ನಿರ್ಣಾಯಕ ಅಂಶವೆಂದರೆ ಮೊದಲ ಮೂರು ಅಭ್ಯರ್ಥಿಗಳ ಆಯ್ಕೆಯ ಹಿಂದಿನ ಇತಿಹಾಸ.

ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರು 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಒಕ್ಕೂಟವನ್ನು ತೊರೆದ ನಂತರ ಬಿಜೆಪಿಗೆ ಸೇರಿದ್ದರು. ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಎಂಟಿಬಿ ಉಪಚುನಾವಣೆಯಲ್ಲಿ ಸೋತರೆ, ಶಂಕರ್ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗಿರಲಿಲ್ಲ.

ಮೂರನೇ ಅಭ್ಯರ್ಥಿ ಸುನಿಲ್ ವಲ್ಯಾಪುರೆ, ತಮ್ಮ ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಹಾರಿ ಬಂದಿದ್ದ ಉಮೇಶ್‌ ಜಾದವ್‌ ಅವರ ಪುತ್ರ ಅರವಿಂದ್‌ ಉಮೇಶ್‌ ಜಾಧವ್‌ ಅವರಿಗಾಗಿ ಬಿಟ್ಟುಕೊಟ್ಟಿದ್ದರು. ಪಕ್ಷಾಂತರವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಉಮೇಶ್‌ ಪುತ್ರನಿಗೆ ಟಿಕೆಟ್‌ ಬಹುಮಾನವಾಗಿ ನೀಡಲಾಗಿತ್ತು.

ಪಕ್ಷಾಂತರ ಮಾಡುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದಕ್ಕಾಗಿ ಅಭ್ಯರ್ಥಿಗಳಿಗೆ ಮೂಲಭೂತವಾಗಿ ಮರುಪಾವತಿ ಮಾಡಲಾಯಿತು. ಈ ವಲಸಿಗರ ಟಿಕೆಟ್‌ ಮತ್ತು ಸ್ಥಾನಗಳನ್ನು ಯಡಿಯುರಪ್ಪ ಮಾತ್ರ ನಿರ್ಧರಿಸಲಿಲ್ಲ. ಇದು ಪಕ್ಷದ ಹೈಕಮಾಂಡ್‌ನ ನಿರ್ಧಾರವಾಗಿತ್ತು.

ಮೇಲಿನ ಅಂಶಗಳ ಆಧಾರದಲ್ಲಿ ಎಂಎಲ್‌ಸಿ ಅಭ್ಯರ್ಥಿಗಳ ಆಯ್ಕೆಯು ರಾಜ್ಯದಲ್ಲಿ ಯಡಿಯುರಪ್ಪ ಅವರ ರಾಜಕೀಯ ನಿಲುವಿಗೆ ಪೂರಕವಾಗಿಲ್ಲ ಎಂದು ತೋರಿಸುತ್ತದೆ.

ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದಂತೆ, “ಈಗ, ನಮ್ಮ ಪರವಾಗಿ ಲಾಬಿ ಮಾಡಲು ಪ್ರಮುಖ ಮಂತ್ರಿಗಳು ಅಥವಾ ನಾಯಕರನ್ನು ನಾವು ಅಂವಲಂಬಿಸಲು ಸಾಧ್ಯವಿಲ್ಲ. ಇದಕ್ಕೆ ಮಣೆ ಹಾಕುವುದಿಲ್ಲ ಎಂಬುದನ್ನು ಹೈಕಮಾಂಡ್‌ ಸ್ಪಷ್ಟವಾಗಿ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೂಚಿಸಿದೆ. ಅಭ್ಯರ್ಥಿಗಳ ಆಯ್ಕೆಯ ಮೈದಾನ ವಿಶಾಲವಾಗಿದೆ” ಎಂದು ಎಂಎಲ್‌ಸಿ ಟಿಕೆಟ್‌ ಆಕಾಂಕ್ಷಿಗಳು ಹೇಳಿಕೊಂಡಿದ್ದರು.

ವಾಸ್ತವವಾಗಿ, ನಿಮಗೆ ಯಾವುದೇ ಸ್ಥಾನಗಳು ಅಥವಾ ಟಿಕೆಟ್‌ ಬೇಕಾದರೆ, ನೀವು ಹೈಕಮಾಂಡ್‌ ಸಂಪರ್ಕಿಸಬೇಕೇ ಹೊರತು ಯಡಿಯೂರಪ್ಪರನ್ನಲ್ಲ ಎಂದು ಬಿಜೆಪಿ ಹೈಕಮಾಂಡ್‌ ಎಂಎಲ್‌ಸಿ ಚುನಾವಣೆಯಲ್ಲಿ ಸ್ಪಷ್ಟವಾಗಿ ಹೇಳಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights