ಹಿರಿಯ ಪತ್ರಕರ್ತನ ಮೇಲೆ ಉತ್ತರ ಪ್ರದೇಶ ಸರ್ಕಾರ ಎಫ್ ಐ ಆರ್: ಪಿ ಚಿದಂಬರಂ ಖಂಡನೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟ್ವಿಟ್ಟರ್ ನಲ್ಲಿ ಪೋಸ್ಟ್ ಬರೆದಿದ್ದಕ್ಕೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಎಫ್ ಐ ಆರ್ ದಾಖಲಿಸಿರುವುದನ್ನು ಖಂಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ತೆಗೆದುಕೊಂಡಿರುವ ಕ್ರಮ ಎಂದಿದ್ದಾರೆ. ಎಫ್ ಐ ಆರ್ ಕೂಡಲೇ ಹಿಂಪಡೆಯಬೇಕೆಂದು ಮಾಜಿ ಗೃಹಸಚಿವ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ತಲ್ಬಿಗ್ಜಿ ಜಮಾತ್ ಸಮಾವೇಶ ನಡೆದ ದಿನವೇ ಮುಖ್ಯಮಂತ್ರಿ ಆದಿತ್ಯನಾಥ್ ಮಾಮೂಲಿನಂತೆಯೇ ರಾಮನವಮಿ ನಡೆಸುವುದಾಗಿ ಹೇಳಿದ್ದರು ಎಂದು ಬರೆದಿದ್ದ ‘ದ ವೈರ್’ ಅಂತರ್ಜಾಲ ಪತ್ರಿಕೆಯ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ಬುಧವಾರ ಎಫ್ ಐ ಆರ್ ದಾಖಲಿಸಿದ್ದರು.

ರಾಷ್ಟ್ರದಾದ್ಯಂತ ಕೊರೊನ ವೈರಸ್ ತಡೆಯಲು ಲಾಕ್ ಡೌನ್ ಇದ್ದಾಗ ಅಯೋಧ್ಯೆಯ ರಾಮಜನ್ಮಭೂಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆದಿತ್ಯನಾಥ್ ನಡೆ ಬಗ್ಗೆ ಪ್ರಶ್ನಿಸದ್ದನ್ನೂ ಎಫ್ ಐ ಆರ್ ನಲ್ಲಿ ನಮೂದಿಸಲಾಗಿದೆ.

“ಸತ್ಯಾಂಶಗಳು ಮತ್ತು ಸತ್ಯಾಂಶಗಳು ಮಾತ್ರ ಇದ್ದ ಲೇಖನ ಬರೆದಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ದ ವೈರ್ ವಿರುದ್ಧ ಪ್ರಕರಣ ದಾಖಲಿಸಿದೆ. ಇದರಲ್ಲಿ ಯಾವ ಅಂಶವೂ ತಪ್ಪಿಲ್ಲ ಅಥವಾ ತಪ್ಪಿನ ಆರೋಪವೂ ಇಲ್ಲ. ಇಲ್ಲಿ ಅಪರಾಧ ಎಲ್ಲಿ ಬಂತು?” ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರಾಜಕೀಯ ಪ್ರೇರಿತ ಎಂದು ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights