BPL ನಿಂದ 30 ಸಾವಿರ ಸೇರಿ 50 ಸಾವಿರ ವೆಂಟಿಲೇಟರುಗಳ ಖರೀದಿ – ಕೇಂದ್ರ ಸರಕಾರ..

ಕೊರೋನಾ ಪಿಡುಗನ್ನು ಕೇವಲ ಲಾಕ್‌ಡೌನ್‌ನಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ವೆಂಟಿಲೇಟರುಗಳ ಸಗಟು ಖರೀದಿಗೆ ಕೇಂದ್ರ ಸರಕಾರ ಮುಂದಾಗಿದೆ. ದೇಶದಲ್ಲಿ ಪ್ರಸ್ತುತ 40 ಸಾವಿರ ವೆಂಟಿಲೇಟರುಗಳಿದ್ದು ಅದರಲ್ಲಿ 14 ಸಾವಿರ ಯಾಂತ್ರಗಳನ್ನು ಕೊರೋನಾ ಬಾಧಿತರಿಗೆಂದು ಮಿಸಲಿಡಲಾಗಿದೆ. ಈ ಪ್ರಮಾಣವನ್ನು ಹೆಚ್ಚಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗ ಮುಂದಡಿ ಇಟ್ಟಿದೆ.

ಆದರೆ ಪರಿಸ್ಥಿತಿ ತೀವ್ರಗೊಂಡರೇ ಮತ್ತು ಮುಂದೆ ಇಂತಹ ಪರಿಸ್ಥಿತಿ ತಲೆದೊರಿದರೇ ಇರಲಿ ಎಂದು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರುಗಳ ಖರೀದಿಗೆ ಕೇಂದ್ರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ವೆಂಟಿಲೇಟರುಗಳ ಖರೀದಿಗೆ ಕೇಂದ್ರ ಸರಕಾರ ಮುಂದಾಗಿದ್ದು ಇದಕ್ಕಾಗಿ ಬೇಡಿಕೆಯನ್ನು ಇಟ್ಟಿದೆ. ಭಾರತದ ಹೆಮ್ಮೆಯ ಸಾರ್ವಜನಿಕ ಉದ್ದಿಮೆ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ದೇಶದ ಕರೆಗೆ ಓಗೊಟ್ಟಿದ್ದು 30 ಸಾವಿರ ವೆಂಟಿಲೇಟರುಗಳನ್ನು ಪೂರೈಸುವುದಾಗಿ ಹೇಳಿದೆ.

ಇದಲ್ಲದೇ ನೊಯ್ಡಾದಲ್ಲಿರುವ ಆಗ್ವಾ ಹೆಲ್ತ್‌ಕೇರ್‍ ಸಂಸ್ಥೆಗೆ 10 ಸಾವಿರ ಯಂತ್ರಗಳ ಪೂರೈಕೆಗೆ ಸಹ ಕೇಂದ್ರ ಸರಕಾರ ಆದೇಶಿಸಿದೆ.     ಇನ್ನು ಬಹುತೇಕ ಎಲ್ಲ ಬಾರೀ ಆಟೋಮೊಬೈಲ್ ಕಂಪೆನಿಗಳಿಗೆ ವೆಂಟಿಲೇಟರುಗಳ ನಿರ್ಮಾಣ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಗಿದೆ.

ಇದು ಸಾಲದು ಎಂಬಂತೆ ಚೀನಾ, ಸಿಂಗಾಪುರ ಮುಮತಾದ ದೇಶದಗಳಿಂದ ಮತ್ತೂ 10 ಸಾವಿರ ವೆಂಟಿಲೇಟರುಗಳ ಖರೀದಿಗೂ ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights