ಅನಾರೋಗ್ಯದಿಂದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ…..!

ಬಾಲಿವುಡ್ ಹಿರಿಯ ನಟ, ನಿರ್ಮಾಪಕ ರಿಷಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 67 ವರ್ಷದ ರಿಷಿ ಕಪೂರ್ ಕ್ಯಾನ್ಸ್ರ್ ನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಹೀಗಾಗಿ, ಕೂಡಲೇ ಅವರನ್ನು ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದು, ಚಿಕಿತ್ಸೆ ಮುಮದುವರಿದಿದೆ. ಇನ್ನು, ರಿಷಿ ಕಪೂರ್ ಕ್ಯಾನ್ಸರ್ ಗೆ ಅಮೆರಿಕಾದಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಮರಳಿದ್ದರು.

ಕಳೆದ ಫೆಬ್ರವರಿ ತಿಂಗಳಿನಲ್ಲಿಯೂ ರಿಷಿ ಕಪೂರ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಾರ್ಯಕ್ರಮವೊಂದಕ್ಕೆ ಹೋಗಿದ್ದ ರಿಷಿ ಅವರು ಮೊದಲ ಬಾರಿಗೆ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೆಲ ಸೋಂಕಿನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿತ್ತು.

ಮತ್ತೆ ಮುಂಬೈಗೆ ಮರಳಿದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಏಪ್ರಿಲ್2 ರಿಂದಲೂ ರಿಷಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಗಳನ್ನು ಮಾಡಿಲ್ಲದೇ ಇರುವುದು ಇದೀಗ ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚು ಮಾಡಿತ್ತು

ಉಸಿರಾಟದ ಸಮಸ್ಯೆಯಿಂದ ಭುಧವಾರ ಬೆಳಗ್ಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಿನ್ನೆಯಷ್ಟೇ ಇರ್ಫಾನ್ ಖಾನ್ ನನ್ನು ಕಳೆದುಕೊಂಡ ದು:ಖದಲ್ಲಿದ್ದ ಬಾಲಿವುಡ್ ಗೆ ಮತ್ತೊಂದು ಅಘಾತವಾಗಿದೆ.

ರಿಷಿ ಕಪೂರ್ ಮೊದಲನೆಯ ರಂಗಪ್ರವೇಶ ಅವರ ತಂದೆಯ 1970 ರಲ್ಲಿನ ಸಿನಿಮಾ ‘ಮೇರಾ ನಾಮ್ ಜೋಕರ್’, ಅವರ ತಂದೆಯ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಕಪೂರ್ ರವರು ನಟಿಸಿದ ಮೊದಲ ಚಿತ್ರ ‘ಡಿಂಪಲ್ ಕಪಾಡಿ’ಯರವರ ವಿರುದ್ಧ 1973 ರಲ್ಲಿ ತಯಾರಾದ ಪ್ರಸಿದ್ಧ ಸಿನಿಮಾ ‘ಬಾಬಿ’ ಇದು ಅತ್ಯಲ್ಪಕಾಲದಲ್ಲಿಯೇ ಯುವಕರ ಜನಮನ್ನಣೆಗಳಿಸಿತು. ಅವರು ಅಲ್ಲಿಂದ ಸುಮಾರು ನೂರಾರು ಚಿತ್ರಗಳಲ್ಲಿ ಕಾಣಿಸಿಕೊಂಡರು.

ರಿಷಿ ಕಪೂರ್ ಪತ್ರಿ ನೀತೂ ಸಿಂಗ್, ಮಕ್ಕಳಾದ ರಣಬೀರ್ ಕಪೂರ್, ರಿಧಿಮಾ ಕಪೂರ್ ನ್ನು ಅಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights