ದೆಹಲಿ ತಲುಪಿದ ಅಫ್ಘಾನಿಸ್ತಾನ ವಲಸಿಗರಿಗೆ ಕೋವಿಡ್ ಪಾಸಿಟಿವ್!

ನಿನ್ನೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದವರಲ್ಲಿ ಕೊರೊನಾವೈರಸ್ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ ಜನರನ್ನು ನಿರ್ಬಂಧಿಸಲಾಗಿದೆ.

ನಿನ್ನೆ ದೆಹಲಿಗೆ ಬಂದಿಳಿದ 78 ಅಫ್ಘಾನಿಸ್ತಾನ ವಲಸಿಗರಲ್ಲಿ 16 ಜನರಿಗೆ ಲಕ್ಷಣರಹಿತ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೊಳಗಾದವರಲ್ಲಿ ಸಿಖ್ಖರ ಪವಿತ್ರ ಗ್ರಂಥಗಳ ಪ್ರತಿಗಳನ್ನು ಕಾಬೂಲ್‌ನಿಂದ ಭಾರತಕ್ಕೆ ಹಿಂತಿರುಗಿಸಿದ ಮೂವರು ಗ್ರಂಥಿಗಳೂ ಇದ್ದಾರೆ. ಮಂಗಳವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಖ್ಖರ ಪವಿತ್ರ ಗ್ರಂಥದ ಪ್ರತಿಗಳನ್ನು ಸ್ವೀಕರಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ, ಪ್ರತಿಗಳಲ್ಲಿ ಒಂದನ್ನು ಗೌರವದಿಂದ ತಲೆಗೆ ಒತ್ತಿಕೊಂಡ ವಿಡಿಯೋವನ್ನು ಟ್ವೀಟ್ ಮಾಡಿದ್ದರು.

ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ನಂತರ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದೆ. 228 ಭಾರತೀಯ ನಾಗರಿಕರು ಸೇರಿದಂತೆ ಒಟ್ಟು 626 ಜನರನ್ನು ಅಫ್ಘಾನಿಸ್ತಾನದಿಂದ ಇಲ್ಲಿಯವರೆಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಹರ್ದೀಪ್ ಪುರಿ ಮಾಹಿತಿ ನೀಡಿದರು. ಅವರಲ್ಲಿ 77 ಮಂದಿ ಅಫಘಾನ್ ಸಿಖ್ಖರು ಎಂದು ಅವರು ಮಾಹಿತಿ ನೀಡಿದರು. ಸ್ಥಳಾಂತರಿಸಲಾದ ಭಾರತೀಯ ನಾಗರಿಕರ ಸಂಖ್ಯೆಯು ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವವರನ್ನು ಒಳಗೊಂಡಿರುವುದಿಲ್ಲ ಎಂದು ಶ್ರೀ ಪುರಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಆಗಸ್ಟ್ 16 ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರನ್ನು ಏರ್ ಲಿಫ್ಟ್ ಮಾಡುವ “ಆಪರೇಷನ್ ದೇವಿ ಶಕ್ತಿ” ಎಂದು ಕರೆಯಲಾಗುವ ಸ್ಥಳಾಂತರ ಕಾರ್ಯಾಚರಣೆಯನ್ನು ಹೊಸದಿಲ್ಲಿ ಆರಂಭಿಸಿತು.

ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ದೇಶದಿಂದ ಪಲಾಯನ ಮಾಡುವ ಹತಾಶ ಪ್ರಯತ್ನದಲ್ಲಿ ಸಾವಿರಾರು ಆಫ್ಘನ್ನರು ಒಂದು ವಾರದಿಂದ ಕಾಬೂಲ್ ವಿಮಾನ ನಿಲ್ದಾಣದ ಸುತ್ತ ನೆರೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights