ಒಬಾಮ, ಬಿಲ್‌ಗೇಟ್ಸ್‌, ಬಿಡೆನ್‌ ಸೇರಿದಂತೆ ಪ್ರಭಾವಿಗಳ ಟ್ವಿಟರ್‌ ಹ್ಯಾಕ್‌ ಮಾಡಿದ ಹ್ಯಾಕರ್ಸ್‌!

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಜೋ ಬಿಡೆನ್, ಯುಎಸ್‌ಎ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟೆಸ್ಲಾ ಸಿಇಒ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಸೇರಿದಂತೆ ಹಲವು ಪ್ರಭಾವಿಗಳ ಟ್ವಿಟ್ಟರ್ ಖಾತೆಗಳನ್ನು ಖತರ್ನಾಕ್‌ ಹ್ಯಾಕರ್ಸ್‌ ಏಕಕಾಲಕ್ಕೆ ಹ್ಯಾಕ್ ಮಾಡಿದ್ದಾರೆ.  ಇದೊಂದು  ಕ್ರಿಪ್ಟೋಕರೆನ್ಸಿ ಹಗರಣ ಎಂಬಂತೆ ಕಾಣಿಸಿದೆ.

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಟ್ವಿಟರ್‌ ಖಾತೆಯು ಬುಧವಾರ ಮಧ್ಯಾಹ್ನ 4.17 ಕ್ಕೆ ಹ್ಯಾಕ್‌ ಆಗಿದ್ದು, “‘ಕೋವಿಡ್ -19 ಕಾರಣ ನಾನು ಉದಾರವಾಗಿದ್ದೇನೆ. ಮುಂದಿನ ಒಂದು ಗಂಟೆಯವರೆಗೆ ನನ್ನ ಬಿಟಿಸಿ ವಿಳಾಸಕ್ಕೆ ಕಳುಹಿಸಿದ ಯಾವುದೇ ಬಿಟಿಸಿ ಪಾವತಿಯನ್ನು ನಾನು ದ್ವಿಗುಣಗೊಳಿಸುತ್ತೇನೆ., ಅದೃಷ್ಟ ಪರೀಕ್ಷಿಸಿ ಹಾಗೂ  ಸುರಕ್ಷಿತವಾಗಿರಿ! ” ಎಂದು ಟ್ವೀಟ್ ಮಾಡಲಾಗಿದೆ ಎಂದು ದಿ ವರ್ಜ್ ವರದಿ ಮಾಡಿದೆ.

Hackers appear to target Twitter accounts of Joe Biden, Elon Musk ...

ಟ್ವೀಟ್‌ನಲ್ಲಿ ಬಿಟ್‌ಕಾಯಿನ್ ವಿಳಾಸವವನ್ನೂ ಸೇರಿಸಿದ್ದಾರೆ. ಕೆಲ ಕ್ಷಣಗಳಲ್ಲಿ ಟ್ವೀಟ್ ಅನ್ನು ಅಳಿಸಲಾಗಿದ್ದು, ಮತ್ತೊಂದು ಟ್ವೀಟ್‌ನಲ್ಲಿ ನನ್ನ ಬಿಟಿಸಿ ವಿಳಾಸಕ್ಕೆ ಕಳುಹಿಸಲಾದ ಎಲ್ಲಾ ಪಾವತಿಗಳನ್ನು ಕೃತಜ್ಞತೆಯಿಂದ ದ್ವಿಗುಣಗೊಳಿಸುತ್ತಿದ್ದೇನೆ’ ಎಂದು ಪೋಸ್ಟ್‌ ಮಾಡಲಾಗಿದೆ.

ಬರಾಕ್ ಒಬಾಮ ಅವರ ಟ್ವೀಟ್‌ ಹ್ಯಾಕ್‌ ಮಾಡಲಾಗಿದ್ದು, ‘ನೀವು $ 1,000 ಕಳುಹಿಸಿ, ನಾನು $ 2,000 ವಾಪಸ್ ಕಳುಹಿಸುತ್ತೇನೆ! ಈ ಆಫರ್ ಮುಂದಿನ 30 ನಿಮಿಷಗಳವರೆಗೆ ಮಾತ್ರ!!,’ ಎಂದು ಬರೆಯಲಾಗಿದ್ದು, ನಂತರ ಅದನ್ನೂ ಡಿಲೀಟ್‌ ಮಾಡಲಾಗಿದೆ. ಹಾಗಾಗಿ, ಬಹುಶಃ ಇದು ಹ್ಯಾಕರ್‌ನ ಕ್ರಿಪ್ಟೋ ವ್ಯಾಲೆಟ್‌ಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

Barack Obama, Bill Gates, Apple, and other famous Twitter accounts ...

ಬಿಲ್ ಗೇಟ್ಸ್ ಟ್ವೀಟ್ ಸಹ ಹ್ಯಾಕ್‌ ಆಗಿದ್ದು, ಅದರಲ್ಲಿಯೂ ಪೋಸ್ಟ್‌ ಮಾಡಿ ಡಿಲೀಟ್‌ ಮಾಡಲಾಗಿದೆ. ಆಪಲ್, ಉಬರ್, ಕಾನ್ಯೆ ವೆಸ್ಟ್ ಮತ್ತು ಮೈಕ್ ಬ್ಲೂಮ್‌ಬರ್ಗ್‌ನ ಖಾತೆಗಳನ್ನು ಸಹ ಹ್ಯಾಕ್ ಮಾಡಲಾಗಿದೆ. ಅಲ್ಲದೆ, ವ್ಯಾಪಕವಾಗಿ ಟ್ವೀಟ್ ಗಳು ಹರಿದಾಡುತ್ತಿದೆ.

Dozens of major Twitter accounts hacked in massive ongoing Bitcoin ...

‘ಟ್ವಿಟ್ಟರ್ನಲ್ಲಿ ಖಾತೆಗಳ ಮೇಲೆ ಪರಿಣಾಮ ಬೀರುವ ಭದ್ರತಾ ಆತಂಕದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಎಲ್ಲವನ್ನೂ ಶೀಘ್ರದಲ್ಲೇ ನವೀಕರಿಸುತ್ತೇವೆ’ ಎಂದು ಟ್ವಿಟರ್ ಸಪೋರ್ಟ್ ಪ್ರತಿಕ್ರಿಯೆ ನೀಡಿದೆ.

ಹ್ಯಾಕರ್ ದಾಳಿಯ ನಂತರ ಕೆಲವು ಖಾತೆಗಳಿಗೆ ಹೊಸ ಟ್ವೀಟ್‌ಗಳನ್ನು ಕಳುಹಿಸುವ ಅವಕಾಶವನ್ನು ಟ್ವಿಟರ್ ನಿಲ್ಲಿಸಿದೆ.

‘ನಾವು ಘಟನೆಯನ್ನು ಪರಿಶೀಲಿಸುವಾಗ ಮತ್ತು ಪರಿಹರಿಸುವಾಗ ನೀವು ಟ್ವೀಟ್‌ ಮಾಡಲು ಅಥವಾ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಸಾಧ್ಯವಾಗದಿರಬಹುದು. ಖಾತೆಯ ಕೆಲವು ಕಾರ್ಯಗಳನ್ನು ಸೀಮಿತಗೊಳಿಸುತ್ತಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು’ ಎಂದು ಟ್ವಿಟರ್ ಸಪೋರ್ಟ್ ಟ್ವೀಟ್ ನಲ್ಲಿ ಹೇಳಿದೆ.

ಇತ್ತೀಚೆಗಿನ ದಿನಗಳಲ್ಲಿ ಹ್ಯಾಕರ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಕಳೆದ ತಿಂಗಳು ಭಾರತದ ಕೇಂದ್ರ ಆರೋಗ್ಯದ ಸಚಿವಾಲಯದ ಮಾಹಿತಿಯನ್ನು ಹ್ಯಾಕ್‌ ಮಾಡಲಾಗಿದ್ದು, ಸಂಸತ್ತಿನ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ಹರಡಿರುವುದರ ಮಾಹಿತಿಯನ್ನು ಹ್ಯಾಕರ್ಸ್‌ ಬಹಿರಂಗ ಪಡಿಸಿದ್ದರು. ಅಲ್ಲದೆ, ಹಲವಾರು ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಸ್ಟಾರ್‌ಗಳ ಟ್ವಿಟರ್‌, ಪೇಸ್‌ಬುಕ್‌ ಖಾತೆಗಳನ್ನು ಹ್ಯಾಕ್‌ ಮಾಡಲಾಗುತ್ತಿದ್ದು, ಹ್ಯಾಕರ್ಸ್‌ಗಳು ತಲೆ ನೋವಾಗಿದ್ದಾರೆ.


ಇದನ್ನೂ ಓದಿವಿಶ್ವ ಹಿಂದೂ ಪರಿಷತ್‌ ವೆಬ್‌ಸೈಟ್‌ ಹ್ಯಾಕ್‌; ಪ್ರಚೋದನಾಕಾರಿ ಪೋಸ್ಟ್‌ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights