ಸಿಡಿ ಸಂತ್ರಸ್ತೆಯನ್ನು ಪತ್ತೆ ಮಾಡದೆ ಇರುವುದು ನಾಚಿಕೆಗೇಡಿನ ಸಂಗತಿ- ಸಿದ್ದರಾಮಯ್ಯ ಟ್ವೀಟ್

ಸಾಹುಕಾರನ ರಾಸಲೀಲೆ ಸಿಡಿ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದರೂ ಸಿಡಿ ಯುವತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೇಸರಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ “ಸಿಡಿ ಸಂತ್ರಸ್ತೆಯನ್ನು ಪತ್ತೆ ಮಾಡದೇ ಇರುವುದು ನಾಚಿಕೆಗೇಡಿನ ಸಂಗತಿ” ಎಂದು ಟ್ವೀಟ್ ಮಾಡಿದ್ದಾರೆ.

ಸಿಡಿ ಲೇಡಿ ನಾಪತ್ತೆಯಾಗಿ 26 ದಿನಗಳು ಕಳೆದರೂ ಆ ಯುವತಿಯನ್ನು ಪತ್ತೆ ಹಚ್ಚಲು ಎಸ್ಐಟಿಯಿಂದಾಗಲೀ ಪೊಲೀಸರಿಂದಾಗಲಿ ಸಾಧ್ಯವಾಗಿಲ್ಲ. ಸಿಡಿ ಪ್ರಕರಣ ಬೆಳಕಿಗೆ ಬಂದು ಸುಮಾರು ದಿನಗಳು ಕಳೆದರೂ ಸಿಡಿ ಯುವತಿ ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಯಾಕೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವತಿ ಈಗಾಗಲೇ ನಾಲ್ಕು ಬಾರಿ ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ್ದಾಳೆ. ವಕೀಲರ ಮೂಲಕ ದೂರು ಕೂಡ ದಾಖಲಿಸಿದ್ದಾಳೆ. ಹೀಗಿದ್ದರೂ ಆಕೆಯನ್ನು ಯಾರೂ ಕೂಡ ಪತ್ತೆ ಮಾಡಲಾಗಿಲ್ಲ. ಕಾನೂನು ಪ್ರಕಾರ ಹೋರಾಟ ಮಾಡುವ, ದೂರು ಸಲ್ಲಿಸುವ ಹಕ್ಕು ಆಕೆಗೆ ಇದೆ. ಹೀಗಿದ್ದರೂ ಆಕೆ ಪೊಲೀಸರ ಮುಂದೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾಳೆ. ಪೊಲೀಸರ ಮುಂದೆ ಹಾಜರಾಗುವುದಿರಲಿ ಪೋಷಕರಿಗೂ ಆಕೆ ಸಿಡಿ ಬಿಡುಗಡೆಯಾದಾಗಿನಿಂದಲೂ ಕಾಣಿಸಿಕೊಂಡಿಲ್ಲ. ಆದರೆ ಪೋಷಕರೊಂದಿಗೆ ಮಾತನಾಡುತ್ತಿದ್ದಾಳೆ, ವಕೀಲರೊಂದಿಗೆ ದೂರು ಕಳುಹಿಸಿದ್ದಾಳೆಂದರೆ ಏನ್ ಅರ್ಥ?

ಯುವತಿ ಬಿಡುಗಡೆ ಮಾಡುವ ವೀಡಿಯೋದಲ್ಲಿ ಯುವತಿ ಎಸ್ಐಟಿ ಹಾಗೂ ಪೊಲೀಸ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾಳೆ ಇದನ್ನು ಗೃಹ ಸಚಿವರು ಗಮನ ಹರಿಸಬೇಕು ಎಂದಿದ್ದಾರೆ. ಪೊಲೀಸ್ ವ್ಯವಸ್ಥೆ ಸೇರಿ ಇಡೀ ಆಡಳಿತ ವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights