ಫ್ಯಾಕ್ಟ್‌ಚೆಕ್: ಡ್ರಗ್ ಇನ್ಸ್‌ಪೆಕ್ಟರ್ ನೇಹಾ ಶೋರಿಯವರ ಹತ್ಯೆ ಸುದ್ದಿ ಇತ್ತೀಚಿನದಲ್ಲ

ಪಂಜಾಬ್‌ನಲ್ಲಿ ಡ್ರಗ್ ಇನ್ಸ್‌ಪೆಕ್ಟರ್‌ನ ಹತ್ಯೆಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಘಟನೆಯು ಇತ್ತೀಚೆಗೆ ನಡೆದಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ಪ್ರಕಾರ, ಪಂಜಾಬ್‌ನಲ್ಲಿ ಡ್ರಗ್ ಇನ್ಸ್‌ಪೆಕ್ಟರ್ ನೇಹಾ ಶೋರಿಯನ್ನು ರಸಾಯನಶಾಸ್ತ್ರಜ್ಞರೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ 2019 ರಲ್ಲಿ ಘಟನೆಯನ್ನು ವರದಿ ಮಾಡಿದ ಹಲವು ಸುದ್ದಿ ವರದಿಗಳನ್ನು ನೀಡಿತು. ನೇಹಾ ಶೋರಿ ಎಂಬ ಡ್ರಗ್ ಇನ್ಸ್‌ಪೆಕ್ಟರ್‌ರೊಬ್ಬರಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಗಳನ್ನು ಮಾಡಲಾಗಿದೆ. ಈ ಘಟನೆಯು ಇತ್ತೀಚಿನದಲ್ಲ 2019 ರಲ್ಲಿ ನಡೆದಿದೆ.

ಸುದ್ದಿಗಳ ಪ್ರಕಾರ, ನೇಹಾ ಶೋರಿಯನ್ನು ಖರಾರ್‌ನಲ್ಲಿರುವ ತನ್ನ ಕಚೇರಿಯಲ್ಲಿ ರಸಾಯನಶಾಸ್ತ್ರಜ್ಞನೊಬ್ಬ ಗುಂಡಿಕ್ಕಿ ಕೊಂದಿದ್ದನು, ಶೋರಿಯನ್ನು ಹತ್ಯೆ ಮಾಡಿದ ನಂತರ ಆತನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ವರದಿಯಾಗಿದೆ.

ಆರೋಪಿಯು ರೋಪರ್‌ನಲ್ಲಿ ರಾಸಾಯನಿಕ ಅಂಗಡಿಯನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ ಮತ್ತು ಅನಧಿಕೃತ ಔಷಧಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಡಾ. ಶೋರಿ ಅವರು 2009 ರಲ್ಲಿ ಅವರ ಪರವಾನಗಿಯನ್ನು ರದ್ದುಗೊಳಿಸಿದ್ದರು ಎಂದು ವರದಿಯಾಗಿದೆ.

ಅಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘಟನೆಯ ತನಿಖೆಗೆ ಆದೇಶಿಸಿದ್ದರು. ಆಗ ಮಾಡಲಾಗಿದ್ದ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಘಟನೆಯು ಹಳೆಯದು ಮತ್ತು ಇತ್ತೀಚಿನದಲ್ಲ ಎಂದು ಈ ಲೇಖನಗಳು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಂಜಾಬ್‌ನಲ್ಲಿ ಡ್ರಗ್ ಇನ್ಸ್‌ಪೆಕ್ಟರ್‌ನ ನೇಹಾ ಶೋರಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ನಿಜ ಆದರೆ ಅದು ಇತ್ತೀಚಿನದಲ್ಲ, 2019ರಲ್ಲಿ ನಡೆದ ಹಳೆಯ ಸುದ್ದಿಯನ್ನು ಇತ್ತೀಚಿನದ್ದು ಎಂಬಂತೆ ಬಿಂಬಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂದು ಸುಳ್ಳು ಹೇಳಿದ ಬಲಪಂಥಿಯರು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights