ಕೊರೊನಾದಿಂದ ಗುಣಮುಖರಾಗಲು ಕೆಮಿಕಲ್ ಸೇವಿಸಿ ಇರಾನ್ ನ 7೦೦ ಜನ ಸಾವು!

ಮಹಾಮಾರಿ ಕೊರೊನಾಕ್ಕೆ ಬಲಿಯಾಗುತ್ತಿರುವವರು ಸಂಕಷ್ಟ ಒಂದೆಡೆಯಾದರೆ ಈ ಸಂಕಷ್ಟದಿಂದ ಪಾರಾಗುವುದು ಸವಾಲು. ಹೀಗಾಗಿ ವಿಶ್ವದೆಲ್ಲೆಡೆ ಕೊರೊನಾ ಸೋಂಕಿನಿಂದ ಪಾರಾಗಲು ಜನ ಸ್ವಯಂ ಔಷಧಿಗೆ ಒಳಗಾಗಿ ಪ್ರಾಣಕ್ಕೆ ಆಪತ್ತು ತಂದೊಂಡ್ಡಿಕೊಂಡ ಘಟನೆಗಳು ಸಾಕಷ್ಟಿವೆ. ಇದಕ್ಕೆ ಮತ್ತೊಂದು ಉದಾರಣೆಯಾಗಿದೆ ಇರಾನ್ ನಲ್ಲಿ  ನಡೆದ ಘಟನೆ.

ಹೌದು… ಕೊರೊನಾದಿಂದ ಗುಣಮುಖರಾಗಲು ಮಿಥೇನಾಲ್ ಸೇವಿಸಿ 700 ಮಂದಿ ಸಾವನ್ನಪ್ಪಿದ ಭಯಾನಕ ಘಟನೆ ಇರಾನ್ ನಲ್ಲಿ ನಡೆದಿದೆ. ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್  ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ. ಇರಾನ್ ನಲ್ಲಿ ಸೋಂಕಿತರ ಸಂಖ್ಯೆ 91 ಸಾವಿರ ಗಡಿ ದಾಟಿದ್ದು 5 ಸಾವಿರ ಜನರು ಮರಣ ಹೊಂದಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ತಿಳಿಸಿದೆ.

ಈ ರೀತಿ ವಿಷಕಾರಿ ಆಲ್ಕೋಹಾಲ್ ಸೇವಿಸಿ ಸತ್ತಿರುವವರ ಸಂಖ್ಯೆ ಶೇ.10 ರಷ್ಟು ಹೆಚ್ಟಾಗಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ನೂರಕ್ಕೂ ಹೆಚ್ಚಿನವರಲ್ಲಿ ದೃಷ್ಟಿ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಫೆಬ್ರವರಿಯಿಂದ ಏಪ್ರಿಲ್ 7ರ ವರೆಗೆ ಸುಮಾರು 728 ಮಂದಿ ಬಲಿಯಾಗಿದ್ದಾರೆ. ಮಿಥೇನಾಲ್ ಎಂಬುದು ವಾಸನೆ ಇರುವುದಿಲ್ಲ. ಜೊತೆಗೆ ರುಚಿಯೂ ಇರುವುದಿಲ್ಲ, ಇದರಲ್ಲಿ ಟಾಕ್ಸಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲ್ಕೋಹಾಲಿಕ್ ದ್ರವಣಗಳಲ್ಲಿ ಅಕ್ರಮವಾಗಿ ಇರಾನ್ ನಲ್ಲಿ ಇದನ್ನು ಬಳಸಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights