ಫ್ಯಾಕ್ಟ್‌ಚೆಕ್: ದೆಹಲಿ ಗಲಭೆಗೆ ಸಂಬಂಧಿಸಿದ್ದು ಎಂದು ಹಳೆಯ ಫೋಟೋ ಹಂಚಿಕೆ

ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಗಲಭೆಯ ಸಂದರ್ಭದಲ್ಲಿ ಪೊಲೀಸರ ಗುಂಪಿನೊಂದಿಗೆ ಇಬ್ಬರು ಕೇಸರಿ ಶಾಲು ಧರಿಸಿರುವ ವ್ಯಕ್ತಿಗಳು ಗಸ್ತು ತಿರುಗುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಲಾಠಿಗಳನ್ನು ಹಿಡಿದ ಪೊಲೀಸರು ಮತ್ತು ಸಿವಿಲ್ ಡ್ರೆಸ್‌ನಲ್ಲಿರುವ ಇಬ್ಬರು ವ್ಯಕ್ತಿಗಳು ತಮ್ಮ ಕುತ್ತಿಗೆಗೆ ಕೇಸರಿ ಬಣ್ಣದ ಸ್ಕಾರ್ಫ್‌ಗಳನ್ನು ಧರಿಸಿರುವುದನ್ನು ಕಾಣಬಹುದು. ದೆಹಲಿ ಪೊಲೀಸರು ಕೇಸರಿ ವಸ್ತ್ರಧಾರಿ ಧರ್ಮ ರಕ್ಷಕರ ಜೊತೆ ತಿರುಗಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಂಗ್ಯ ಮಾಡಿದ್ದಾರೆ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್:

ಭಾರತದಾದ್ಯಂತ ಕೋಮು ಹಿಂಸಾಚಾರದ ಘಟನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಜಹಾಂಗೀರ್ಪುರಿ ಗಲಭೆ ಪ್ರಕರಣದಲ್ಲಿ ಪೊಲೀಸರು 25 ಮಂದಿಯನ್ನು ಬಂಧಿಸಿದ್ದು, ಘರ್ಷಣೆಯಲ್ಲಿ ತೊಡಗಿದ್ದ ಕೆಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಫೋಟೋ ದೆಹಲಿ ಗಲಭೆಗೆ ಸಂಬಂಧಿಸಿಲ್ಲ

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಸುಮಾರು ಎರಡು ವರ್ಷಗಳಷ್ಟು ಹಳೆಯದು. ಏಪ್ರಿಲ್ 21, 2020 ರಲ್ಲಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸೆರೆ ಹಿಡಿದಿರುವ ಚಿತ್ರ ಎಂದು ಮಾಹಿತಿ ಲಭ್ಯವಾಗಿದೆ.

ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಟೊ ಸುಮಾರು ಎರಡು ವರ್ಷಗಳಷ್ಟು ಹಳೆಯದಾಗಿದ್ದು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸೆರೆ ಹಿಡಿದಿರುವ ಫೋಟೋ ಎಂದು ತಿಳಿದು ಬಂದಿದೆ. ಮೇಲಿನ ಫೋಟೋದಲ್ಲಿ ತೋರಿಸಿರುವ ಇಬ್ಬರೂ ವ್ಯಕ್ತಿಗಳು ಕೋವಿಡ್ -19 ವಾರಿಯರ್ಸ್ ಮುಖೇಶ್ ಕುಮಾರ್ ಮತ್ತು ಸುನಿಲ್ ಗುರ್ಜರ್ ಎಂದು ಶೋ ಕೊಟ್ವಾಲಿ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನರಿಗೆ ತಿಳಿ ಹೇಳಿ ತಮ್ಮ ತಮ್ಮ ಮನೆಗಳಲ್ಲಿ ಇರಬೇಕೆಂದು ಅವರು ಮನವಿ ಮಾಡಿದ್ದರು.

https://twitter.com/Saba__PathaN2/status/1252199166975016960?ref_src=twsrc%5Etfw%7Ctwcamp%5Etweetembed%7Ctwterm%5E1252259303773188097%7Ctwgr%5E%7Ctwcon%5Es4_&ref_url=https%3A%2F%2Fthelogicalindian.com%2Ffact-check%2Fdelhi-police-roaming-around-with-saffron-clad-dharma-rakshaks-after-jahangirpuri-violence-35081

ಉತ್ತರ ಪ್ರದೇಶದ ಬದೌನ್‌ನಲ್ಲಿ ಪೊಲೀಸರು ಮುಸ್ಲಿಮರನ್ನು ಕೊಂದವರ ಜೊತೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು  ಟ್ವೀಟ್‌ಗಳಲ್ಲಿ ಬರೆದಿದ್ದಾರೆ. ಈ ಟ್ವೀಟ್‌ಗೆ ಸಂಬಂಧಿಸಿದಂತೆ  ಬದೌನ್ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದ್ದು ಅವರು ಕೋವಿಡ್ -19 ವಾರಿಯರ್ಸ್ ಮುಖೇಶ್ ಕುಮಾರ್ ಮತ್ತು ಸುನಿಲ್ ಗುರ್ಜರ್ ಎಂದು ಶೋ ಕೊಟ್ವಾಲಿ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಜನರಿಗೆ ತಿಳಿ ಹೇಳಿ ತಮ್ಮ ಮನೆಗಳಲ್ಲಿ ಇರಬೇಕೆಂದು ಅವರು ಮನವಿ ಮಾಡಿದ್ದರು. ಈ ಪೋಟೋ ದೆಹಲಿಯ ಘಲಭೆಹೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಫೋಟೋದಲ್ಲಿ ದೆಹಲಿ ಪೊಲೀಸರು ಗಲಭೆಕೋರರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆಯು ಸುಳ್ಳು ಮತ್ತು ತಪ್ಪು ದಾರಿಗೆಳೆಯುವಂತಿದೆ.

ಕೃಪೆ: ದ ಲಾಜಿಕಲ್ ಇಂಡಿಯಾ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹೆತ್ತ ಮಕ್ಕಳನ್ನೆ ಮದುವೆಯಾದ ಮುಸ್ಲಿಂ ದಂಪತಿ ಎಂಬುದು ಸಂಪೂರ್ಣ ಸುಳ್ಳು ಸುದ್ದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights