Corona test : 5 ಖಾಸಗಿ ಮತ್ತು 11 ಸರಕಾರಿ ಆಸ್ಪತ್ರೆಗಳಲ್ಲಿ ಟೆಸ್ಟ್‌,2250 ರೂ ಶುಲ್ಕ ನಿಗದಿ..

ಲಾಕ್‌ಡೌನ್ ಜೊತೆಜೊತೆಗೇ ಹೆಚ್ಚು ಮಂದಿಯ ವೈದ್ಯಕೀಯ ತಪಾಸಣೆಗೆ ಸರಕಾರ ಒತ್ತು ನೀಡಿದ್ದು, ದಿಕ್ಕಾಗಿ ರಾಜ್ಯದ 16 ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಅನುಮತಿ ನೀಲಾಗಿದೆ.  ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಯ ವೆಚ್ಚವನ್ನು ಸರಕಾರಗಳೇ ಭರಿಸುತ್ತಿದ್ದು, ಖಾಸಗಿ ಆಸ್ಪತ್ರಗಳಲ್ಲಿ 2250 ರೂ ಶುಲ್ಕ ನಿಗದಿಪಡಿಸಲಾಗಿದೆ. ಎಂದು ವೈದ್ಯಕೀಯ ಮಂಡಳಿ  ತಿಳಿಸಿದೆ.

ರಾಜ್ಯದಲ್ಲಿ 16 ಆಸ್ಪತ್ರೆಗಳಿಗೆ ಕೊರೋನಾ ಸೋಂಕು ಪರೀಕ್ಷೆಗೆ ಅನುಮತಿ ನೀಲಾಗಿದೆ. ಈ ಪೈಕಿ 11 ಸರಕಾರಿ ಹಾಗೂ 5 ಖಾಸಗಿ ವಲಯದ ಆಸ್ಪತ್ರೆಗಳು ಇವೆ.  ಯಾವುದೇ ಸಂದರ್ಭದಲ್ಲಿಯೂ ನಿಗದಿಗಿಂತ ಹೆಚ್ಚಿನ ಶುಲ್ಕ ಪೀಕುವಂತಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಸೋಂಕಿತರ ಪರೀಕ್ಷಾ ವಿವರಗಳನ್ನು ಖಾಸಗಿ ಆಸ್ಪತ್ರೆಗಳು ಆಗಿದ್ದಾಂಗ್ಗೇ ರಾಜ್ಯ ಸರಕಾರಗಳಿಗೆ ರವಾನಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಳೆದೆರಡು ದಿನಗಳಿಂದ ತೀವ್ರ ಏರುಗತಿಯಲ್ಲಿದೆ. ಕಳೆದ 19 ತಾಸಿನಲ್ಲಿ 38 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ, ಮೈಸೂರಿನ ನಂಜನಗೂಡು, ಬಳ್ಳಾರಿಯ ಹೊಸಪೇಟೆ ಮತ್ತು ವಿಜಯಪುರದಲ್ಲಿ ಈ ಅವಧಿಯಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರಿನಲ್ಲಿ 12 ಪ್ರಕರಣಗಳು ಪತ್ತೆಯಾದರೇ ಬೆಂಗಳೂರಿನಲ್ಲಿ 9, ಬಳ್ಳಾರಿಯಲ್ಲಿ 7 ಮಂದಿಯಲ್ಲಿ ಸೋಂಕಿರುವುದು ಪರೀಕ್ಷೆಗಳಿಂದ ಖಚಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights