Corona tunnel : ಕೊರೋನಾ ವಿರುದ್ಧದ ಹೋರಾಟಕ್ಕೆ ಸೋಂಕು ತಡೆ ಸುರಂಗಗಳ ನಿರ್ಮಾಣ..

ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಕೊರೋನಾ ಸೋಂಕು ತಡೆಯುವ ದೃಷ್ಟಿಯಿಂದ ಸೋಂಕು ತಡೆ ಸುರಂಗಗಳನ್ನು ತೆರೆಯಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಇಂತಹ ಐದು ಟನಲ್‌ಗಳನ್ನು ಸೋಮವಾರ ಉದ್ಘಾಟಿಸಿದರು.

 

ಈ ವಿಷಯದಲ್ಲಿ ಸರಕಾರದ ಮರ್ಜಿಗೆ ಕಾಯದೇ ಸ್ವಂತ ಖರ್ಚಿನಲ್ಲಿಯೇ ಟನಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಟನಲ್‌ಗೆ ಸುಮಾರು ಒಂದು ಲಕ್ಷ ರೂ. ಖರ್ಚು ತಗುಲಲಿದೆ. ಹಳ್ಳಿಗಳಿಂದ ಬರುವ ರೈತರಿಗೆ ಸೋಂಕು ತಡೆಯುವ ಸಣ್ಣ ಕಾರ್ಯವನ್ನ ಪ್ರಾರಂಭ ಮಾಡಿದ್ದೇವೆ. ಎಲ್ಲಾ ಕಡೆ ಈ ರೀತಿ ಟನಲ್ ಗಳನ್ನ ಸ್ಥಾಪನೆ ಮಾಡಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.

ಕೊರೊನಾ ವೈರಾಣು ಸೋಂಕು ಹರಡದಂತೆ ಎಲ್ಲಾ ರೈತಬಂಧುಗಳು ಎಚ್ವರಿಕೆ ವಹಿಸುವಂತೆ ಇದೇ ಸಂಧರ್ಭದಲ್ಲಿ ಕುಮಾರಸ್ವಾಮಿ ಅವರು ಮನವಿ ಮಾಡಿದರು. ರಾಮನಗರದ ರೇಷ್ಮೆ ಮಾರುಕಟ್ಟೆ ದಿನನಿತ್ಯ ನೂರಾರು ಮಂದಿ ವ್ಯಾಪಾರ ವಹಿವಾಟುಗಳಿಗೆ ಆಗಮಿಸುತ್ತಿರುವ ಹಿನ್ನೆಲೆ ಸೋಂಕು ವೈರಾಣುಗಳ ಹರಡದಂತೆ ಸ್ಯಾನಿಟೈಸಡ್ ಟನಲುಗಳನ್ನು ಸ್ಥಾಪಿಸಲಾಗಿದೆ.

ರಾಮನಗರ ಹಾಗೂ ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆ ಮತ್ತು ರಾಮನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಈ ಸೋಂಕು ತಡೆ ಸುರಂಗಗಳನ್ನು ನಿರ್ಮಾಣ ಮಾಲಾಗಿದೆ. ರಾಜ್ಯದ ಇತೆ ಭಾಗಗಳಲ್ಲಿಯೂ ಇಂಥದ್ದೇ ಸುರಂಗಗಳ ನಿರ್ಮಾಣದ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸುವುದಾಗಿ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights