Corona: ಸಾರ್ವಜನಿಕರ ಪ್ರಯಾಣಕ್ಕೆ ಏನು ವ್ಯವಸ್ಥೆ: ಅನ್ಯ ದೇಶಗಳು ವ್ಯವಸ್ಥೆಗಳೇನು? ಕಂಪ್ಲೀಟ್‌ ಡಿಟೈಲ್ಸ್‌

ಲಾಕ್‌ಡೌನ್‌ ಸಂದರ್ಭದಲ್ಲಿ ಶೇ.90 ರಷ್ಟು ಕುಸಿತ ಕಂಡಿರುವ ಸಾರ್ವಜನಿಕ ಸಾರಿಗೆ ಪ್ರಯಾಣ ಪ್ರಮಾಣವು ಶೀಘ್ರವೇ ಚೇತರಿಸಿಕೊಳ್ಳಬಹುದಾದ ಸಾಧ್ಯತೆಗಳಿಲ್ಲ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅಂದಾಜು ಮಾಡಿದೆ. ಹಾಗಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೈಸಿಕಲ್‌ ನಂತಹ ಮೊಟಾರು ರಹಿತ ಸಾರಿಗೆಗಳನ್ನು ಪ್ರೋತ್ಸಾಹಿಸಲು ಹಾಗೂ ಪರ್ಯಾಯ ಸಾರಿಗೆ ವಿಧಾನಗಳನ್ನು ತರಲು ಸಚಿವಾಲಯವು ಕರೆ ಕೊಟ್ಟಿದೆ.

“ಸಾರ್ವಜನಿಕ ಸಾರಿಗೆಗಳನ್ನು ಹಿಂದಿನ ರೀತಿಯಲ್ಲಿ ಬಳಸುವಂತೆ ಪ್ರಯಾಣಿಕರನ್ನು ಪ್ರೇರೇಪಿಸುವುದು ನಗರಗಳಿಗೆ ದೊಡ್ಡ ಸವಾಲಾಗಿದೆ. ಏಕೆಂದರೆ, ಲಾಕ್‌ಡೌನ್‌ ನಂತರದಲ್ಲಿ ಸುರಕ್ಷಿತ ಪ್ರಯಾಣವನ್ನು ಬಯಸುತ್ತಿರುವ ಜನರು ಪರ್ಯಾಯ ಆಯ್ಕೆಗಳನ್ನು ಹುಡುತ್ತಿರಬಹುದು. ಇಂತಹ ನಾಟಕೀಯ ಬದಲಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಪರ್ಯಾಯ ಸಾರಿಗೆ ವಿಧಾನಗಳೊಂದಿಗೆ ಪೂರಕಗೊಳಿಸುವ ಅಗತ್ಯವಿರುತ್ತದೆ”ಎಂದು ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು ತಿಳಿಸಿದ್ದಾರೆ.

“ಈ ಪರೀಕ್ಷಾತ್ಮಕ ಸಮಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಾರ್ವಜನಿಕರು ಪ್ರಯಾಣಿಸುವಾಗ ಅವರ ಮನಸ್ಸಿನಲ್ಲಿ ಅಭದ್ರತೆಯ ಭಾವನೆ” ಮೂಢುತ್ತದೆ. ಇದರಿಂದಾಗಿ ರಸ್ತೆಯ ಮೇಲೆ ಎಲ್ಲಾ ರೀತಿಯ ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಮಾಲಿನ್ಯ ಮತ್ತು ರಸ್ತೆ ಸುರಕ್ಷತೆಗಾಗಿ ಪ್ರತಿಕೂಲ ಪರಿಣಾಮ ಬೀರುವಂತಹ ಸಾರ್ವಜನಿಕ ಸಾರಿಗೆಯ ಇತರ ವಿಧಾನಗಳ ಅವಕಾಶಗಳನ್ನು ತರಬೇಕು ಎಂದು ಸಲಹೆಯಲ್ಲಿ ಹೇಳಲಾಗಿದೆ.

Does Charity come with a Price? (With images) | India funny ...

ನಗರ ಕೇಂದ್ರಗಳಲ್ಲಿನ ಬಸ್ ರಾಪಿಡ್ ಟ್ರಾನ್ಸಿಟ್ (ಬಿಆರ್‌ಟಿ) ಮತ್ತು ಮೆಟ್ರೋಗಳು ಕೊರೊನಾ ಮುಂಚಿನ ಪ್ರಯಾಣದ ಶೇಕಡಾ 25 ರಿಂದ 50 ರಷ್ಟು ಮಾತ್ರ ಪ್ರಯಾಣಿಕರನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಚಿವಾಲಯ ಅಂದಾಜಿಸಿದೆ. ಈ ವ್ಯವಸ್ಥೆಗಳಲ್ಲಿ ಪ್ರತಿದಿನ 10 ಮಿಲಿಯನ್ ಪ್ರಯಾಣಿಕರು ಇರುವುದರಿಂದ, 5 ರಿಂದ 7.5 ಮಿಲಿಯನ್ ಜನರಿಗೆ ಹೊಸ ರೀತಿಯ ಸಾರಿಗೆಯ ಅಗತ್ಯವಿರುತ್ತದೆ ಎಂದು ಸಲಹಾ ಪಟ್ಟಿಯಲ್ಲಿ ಹೇಳಲಾಗಿದೆ.

ಸಾರಿಗೆ ಮತ್ತು ಮಾಲಿನ್ಯದ ಪರಿಹಾರಕ್ಕಾಗಿ, ಸಾಂಕ್ರಾಮಿಕ ಸಮಯದಲ್ಲಿ ಮೆಟ್ರೊ, ಬಸ್‌ ಮತ್ತು ಕಾರುಗಳಿಗೆ ಪರ್ಯಾಯವಾಗಿ ಸೈಕ್ಲಿಂಗ್ ಮೂಲಸೌಕರ್ಯ ವ್ಯವಸ್ಥೆಗೆ ಹೂಡಿಕೆ ಮಾಡಿರುವ ಇತರ ದೇಶಗಳ ಉದಾಹರಣೆಗಳನ್ನು ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.

 ಮೂರು ಹಂತದ ಸಲಹೆಗಳು:

ಮೊದಲ ಹಂತದಲ್ಲಿ, ಅಧಿಕಾರಿಗಳು ಆರೋಗಾ ಸೇತು ಅಪ್ಲಿಕೇಶನ್‌ನ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಹೆಚ್ಚಿನ ಸೋಂಕಿರಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಕಡಿಮೆ ಮಾಡಬೇಕು. ಬಸ್‌ಗಳ ಆಸನ ಸಾಮರ್ಥ್ಯವನ್ನು ಕಡಿಮೆಗೊಳಿಸಿ, ಕಡಿಮೆ ಪ್ರಯಾಣವನ್ನು ಪ್ರೋತ್ಸಾಹಿಸಬೇಕು. ಇದರಿಂದ ಜನರು ವಾಕಿಂಗ್ ಮತ್ತು ಸೈಕ್ಲಿಂಗ್ ಅನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ತಾತ್ಕಾಲಿಕ ಫುಟ್‌ಪಾತ್‌ಗಳನ್ನು ಅಭಿವೃದ್ಧಿ ಪಡಿಸಬೇಕು.

ಎರಡನೇ ಹಂತದಲ್ಲಿ, ನಗರಗಳು ವಾಕಿಂಗ್ ಮತ್ತು ಸೈಕ್ಲಿಂಗ್‌ಗಾಗಿ ಶಾಶ್ವತ, ಅಂತರ್ಸಂಪರ್ಕಿತ ಮೂಲಸೌಕರ್ಯಗಳನ್ನು ಒದಗಿಸಬೇಕು. ಫುಟ್‌ಪಾತ್‌ಗಳು ಮತ್ತು ಸೈಕಲ್ ಟ್ರ್ಯಾಕ್‌ಗಳಲ್ಲಿ ಅತಿಕ್ರಮಣ ಮತ್ತು ಪಾರ್ಕಿಂಗ್ ಅನ್ನು ನಿಷೇಧಿಸಬೇಕು. ಸಿಗ್ನಲ್ ಸಮಯವನ್ನು ಕಡಿಮೆ ಮಾಡಬೇಕು ವೇಗ ಮಾನಿಟರ್ ಮತ್ತು ಕ್ಯಾಮೆರಾಗಳನ್ನು ಅಳವಡಿಸಬೇಕು.

ಮೂರನೇ ಹಂತದಲ್ಲಿ, ನಗರಗಳಿಗೆ ಬೈಸಿಕಲ್‌ಗಳ ಹಣವಿಲ್ಲದ ಬುಕಿಂಗ್‌ಗೆ ಅವಕಾಶ. ಎನ್‌ಎಂಟಿ ವಲಯಗಳ ಕಟ್ಟುನಿಟ್ಟಿನ ನಿಯಂತ್ರಣ. ಫುಟ್‌ಪಾತ್‌ಗಳ ಅಗಲೀಕರಣ. ಸೈಕ್ಲಿಂಗ್‌ ಮಾಡುವವರಿಗೆ ಸಾಲ ವ್ಯವಸ್ಥೆ ಮತ್ತು ಚಲನಶೀಲತೆಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಡೇಟಾಬೇಸ್ ಹೊಂದಲು ಶಿಫಾರಸು ಮಾಡಲಾಗಿದೆ.

Indians who care for the environment - Rediff.com Business

ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಪರ್ಯಾಯ ಸಾರಿಗೆ ವ್ಯವಸ್ಥೆಯ ಸಮಸ್ಯೆ ಉಲ್ಬಣವಾಗಿದ್ದು, ನ್ಯೂಯಾರ್ಕ್‌ನಲ್ಲಿ ಸೈಕ್ಲಿಸ್ಟ್‌ಗಳಿಗಾಗಿ 40 ಮೈಲಿಗಳ ಹೊಸ ಎನ್‌ಎಂಟಿ ಲೇನ್‌ಗಳನ್ನು ಪರಿಚಯಿಸಿತು; ಓಕ್ಲ್ಯಾಂಡ್ (ಕ್ಯಾಲಿಫೋರ್ನಿಯಾ)ದಲ್ಲಿ 10 ಶೇಕಡಾ ರಸ್ತೆಗಳಲ್ಲಿ ಮೋಟಾರು ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.  ಇಟಲಿಯಲ್ಲಿ 22 ಮೈಲಿಗಳ ಹೊಸ ಸೈಕ್ಲಿಂಗ್ ಪಥಗಳನ್ನು ನಿರ್ಮಾಣ ಮಾಡಲಾಗಿದೆ. ಆಕ್ಲೆಂಡ್ (ನ್ಯೂಜಿಲೆಂಡ್)ನಲ್ಲಿ ಪಾಪ್-ಅಪ್ ಬೈಕು ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಇತರ ದೇಶಗಳಿಗಿಂತ ಭಿನ್ನವಾಗಿ,ಭಾರತದಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ಮೋಟಾರು ವಾಹನಗಳನ್ನು ಬಳಸದಂತೆ ತಡೆಯಲು ಹೊಸ ಸಾರಿಗೆ ವಿಧಾನಗಳು ಬೇಕಾಗುತ್ತವೆ ಎಂದು ಸಲಹಾ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights