Cricket : world cup ಗೆದ್ದ ನಾಯಕನಿಗು Lock down effect, ಹೊಸ ಅವತಾರದಲ್ಲಿ ದೇವ್..

ಕಪಿಲ್ ದೇವ್ ಎಂದರೇ ಯಾರಿಗೆ ತಾನೆ ತಿಳಿದಿಲ್ಲ. ಅವರಾರು ಎಂದು ಕೇಳು ಭಾರತೀಯರು ಬಹುಶಃ ಇರಲಿಕ್ಕಿಲ್ಲ. ತೆಲತುಂಬ ಗುಂಗುರು ಕೂದಲು, ಮೈಯಲ್ಲಿ ಅದೆಂಥದೋ ಆವೇಗ, ಸಾಧನೆಯಲ್ಲಿ ತಾದಾತ್ಮ್ಯ. ಭಾರತದ ಕ್ರೀಡಾ ಕ್ಷಿತಿಜದ ಕಾಯಂ ತಾರೆ ಎಂದರೆ ಅದು ಕಪಿಲ್ ದೇವ್. ಅವರಿಗು ಕರೋನಾ ವೈರಸ್ ಕಾಟ ತಪ್ಪಿಲ್ಲ..  ಅದಕ್ಕೆ ಅವರ ಸ್ಟ್ಯಲೆ ಚೆಂಜ್ ಆಗಿದೆ…

ಒಂದಿಡೀ ತಲೆಮಾರಿನ ಜನರನ್ನು ಸಮ್ಮೋಹಿನಿಗೊಳಪಡಿಸಿದ್ದ ಕ್ರಿಕೆಟ್ ಗಾರುಡಿಗ ಕಪಿಲ್ ದೇವ್. ಆಟದ ಮೈದಾನದಲ್ಲಿ ಅದೆಷ್ಟು ಕರಿಷ್ಮಾ ಇತ್ತೋ, ಮೈದಾನದಾಚೆಗೂ ಕಪಿಲ್ ಎಂದರೆ ಜನರಿಗೆ ಅದೇನೋ ಪುಳಕ. ಇಂತಹ ಕಪಿಲ್ ಈಗ ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ. ಈಗಿನ ಕ್ರಿಕೆಟರುಗಳು ದಿನಕ್ಕೊಂದು ಶೈಲಿಯಲ್ಲಿ ಕ್ರಾಪು ತೆಗೆಯುವುದುಂಟು.

ಕ್ರಿಕೆಟ್ ಜಾಯಮಾನ ಪೂರ್ತಿ ತನ್ನ ಆಟದಂತೆಯೇ ತಲೆಗೂದಲ ಶೈಲಿ ಬದಲಿಸದಿದ್ದ ಕಪಿಲ್‌ ದೇವ್ ಈಗ ಬೋಳಾಗಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕಪಿಲ್ ಈ ಹೊಸ ಶೈಲಿ ಹಲವರನ್ನು ಅವಕ್ಕಾಗಿಸಿದೆ. ಈಗಿನ ಕ್ರೀಡಾಳುಗಳಿಗೆ ತಲೆಗೂದಲು ನುಣ್ಣಗಾಗಿಸುವುದು ಹೊಸ ವಿಷಯವಲ್ಲ. ಆದರೆ ಕಪಿಲ್ ದೇವ್ ಸಹ ಹಾಗೆಯೇ ಮಾಡಿರುವುದ ಹಲವರ ಹುಬ್ಬೇರಿಸಿದೆ.

ಕ್ರಿಕೆಟ್‌ ನಂತರ ಗಾಲ್ಫ್‌ನಲ್ಲಿ ಹೆಚ್ಚು ತೊಗಿಸಿಕೊಂಡಿರುವ ಕಪಿಲ್ ದೇವ್ ತಮ್ಮ ಈ ಹೊಸ ಲುಕ್‌ನಲ್ಲಿ ಎಲ್ಲರನ್ನೂ ದಂಗಾಗಿಸಿರುವುದಂತೂ ನಿಜ. ಕಪಿಲ್ ಅವರ ಈ ನೋಟಕ್ಕೆ ಸಹ ಆಟಗಾರರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಿರಿಯಪ ಪಾಲಿನ ’ಪಾಜಿ’ ಸ್ಟೈಲ್‌ಗೆ ಚೇತನ್ ಶರ್ಮಾ ಬೋಲ್ಡ್ ಆಗಿದ್ದಾರಲ್ಲದೇ ಬೊಂಬಾಟಾಗಿದೆ ಎಂದು ಬಣ್ನಿಸಿದ್ದಾರೆ.

ಕಪಿಲ್ ಅವರ ಈ ಸಾಹಸ ಕಂಡವರು ಅವರನ್ನು ನೋಡಿದರೇ ವೆಸ್ಟ್ ಇಂಡೀಸ್ ವಿವಿಯನ್ ರಿಚರ್ಡ್ಸ್‌ ಮತ್ತು ಭಾರತದ ಸಯ್ಯದ್ ಕಿರ್ಮಾನಿ ನೆನಪಿಗೆ ಬರುತ್ತಾರೆ ಎಂದಿದ್ದಾರೆ. ಕಪಿಲ್ ಅವರ ಈ ಗೆಟಪ್ಪು ಸಹಜವಾಗಿಯೇ ಸೋಶಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕೆ ಹಲವರಿಂದ ಹಲವಾರು ರೀತಿಯ ವ್ಯಾಖ್ಯಾನಗಳು ಹರಿದುಬರುತ್ತಿವೆ.

ಕೆಲವರು ಕಪಿಲ್ ದೇವ್ ಅವರು ರಿಚರ್ಡ್ಸ್‌ ಕುರಿತ ಆತ್ಮಚರಿತ್ರೆ ಚಿತ್ರದಲ್ಲಿ ನಟಿಸುತ್ತಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆವಲವರು ಬಾಹುಬಲಿ ಕಟ್ಟಪ್ಪನಿಗೆ ಕಪಿಲ್ ಅವರ ಲುಕ್ ಹೋಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights