Cricket : ಮೊದಲ ಬಾರಿ ನಿವೃತ್ತಿ ಬಗ್ಗೆ ಮಾತನಾಡಿದ ವಿರಾಟ್, 3ವರ್ಷ ನಿವೃತ್ತಿಯ ಮಾತೇ ಇಲ್ಲ..

ಇದೇ ಮೊದಲ ಬಾರಿಗೆ ಕ್ರಿಕೆಟ್ ನಿವೃತ್ತಿಯ ಬಗ್ಗೆ ಮಾತನಾಡಿರುವ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇನ್ನು ಮೂರು ವರ್ಷ ಆ ಮಾತೇ ಇಲ್ಲ ಎಂದಿದ್ದಾರೆ. ನಿವೃತ್ತಿಯ ಚಿಂತನೆಯೇನೇ ಇದ್ದರೂ ಅದು ಮೂರು ವರ್ಷದ ನಂತರದ ಮಾತು ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಮೂರು ವರ್ಷದ ತರುವಾಯ ಮುರರಲ್ಲಿ ಯಾವುದಾದರೂ ಒಂದು ಪ್ರಕಾರದಿಂದ (ಟೆಸ್ಟ್, ಏಕದಿನ, ಟಿ20) ಹಿಂದೆ ಸರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿ ಬರಬಹುದು. ಆದರೆ ಅಲ್ಲಿಯ ತನಕ ಅಂತಹ ಯೋಚನೆಯನ್ನೂ ಮಾಡುವುವದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಒಂದೇ ಸಮನೆ ಆಡುವುದರಿಂದ ಯಾವುದೇ ಆಟಗಾರ ಸಹ ಬಳಲುತ್ತಾನೆ. ಆದರೆ ಅದಕ್ಕೆಂದೇ ಆಟಗಾರರು ಹೆಚ್ಚಿನ ಬ್ರೇಕ್‍ಗಳನ್ನು ತೆಗೆದುಕೊಳ್ಳುತ್ತಾರೆ. ವಯಸ್ಸು 34 ದಾಟಿದ ಮೇಳೆ ದೇಹಕ್ಕೆ ವಿಶ್ರಾಂತಿ ಬೇಕೆಂದು ಎನಿಸಬಹುದು. ಅದು ಎಲ್ಲ ಆಟಗಾರರೂ ಅನಿವಾರ್ಯವಾಗಿ ಮಾಡಿಕೊಳ್ಳಬೇಕಾದ ಆಯ್ಕೆ ಎಂದು ಕೊಹ್ಲಿ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights