Fact Check: ಕೊರೊನಾಗೆ ಔಷಧಿ ಕಂಡು ಹಿಡಿದಿದ್ದಾಯಿತು! ಈ ಸುದ್ದಿ ನಿಜವೇ?

ದೊಡ್ಡ ಸುದ್ದಿ! ಕರೋನಾ ವೈರಸ್ ಲಸಿಕೆ ಸಿದ್ಧವಾಗಿದೆ. ಚುಚ್ಚುಮದ್ದಿನ ನಂತರ 3 ಗಂಟೆಗಳಲ್ಲಿ ರೋಗಿಯನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಯುಎಸ್ ವಿಜ್ಞಾನಿಗಳಿಗೆ ಹ್ಯಾಟ್ಸ್ಆಫ್. ರೋಚೆ ಮೆಡಿಕಲ್ ಕಂಪನಿ ಮುಂದಿನ ಭಾನುವಾರ ಲಸಿಕೆ ಬಿಡುಗಡೆ ಮಾಡುವುದಾಗಿ ಟ್ರಂಪ್ ಘೋಷಿಸಿದರು.

ಈ ರೀತಿಯ ಸುದ್ದಿಗಳು ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ವೈರಲ್‌ ಆಗಿವೆ. ಚಿಂತಸಬೇಡಿ ಕೊರೊನಾವನ್ನು ಓಡಿಸಲು ಔಷಧಿ ಸಿದ್ಧವಾಗಿದೆ ಎಂಬ ಸಂದೇಶಗಳನ್ನು ಬೇಕಾಬಿಟ್ಟಿ ಷೇರ್‌ ಮಾಡಲಾಗುತ್ತಿದೆ. ಆದರೆ ಈ ಸುದ್ದಿ ನಿಜವೇ? ಬನ್ನಿ ನೋಡೋಣ.

ಸತ್ಯ: ಷೇರ್‌ ಮಾಡಿರುವ ಫೋಟೊವನ್ನು ಜೂಮ್‌ ಮಾಡಿ ನೋಡಿದರೆ ಅದರ ಮೇಲೆ ಇದು ಮೆಡಿಸಿನ್ ಅಲ್ಲ ಬದಲಿಗೆ ಕೊರೊನಾ ಟೆಸ್ಟ್ ಮಾಡುವ ಕಿಟ್ ಆಗಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ದಕ್ಷಿಣ ಕೊರಿಯಾ ಮೂಲಕ ಕಂಪನಿಯೊಂದು ಈ ಕಿಟ್‌ ತಯಾರಿಸಿದ್ದು 10 ನಿಮಿಷದಲ್ಲಿ ಕೊರೊನಾ ವರದಿ ಬರುತ್ತದೆ ಎಂದು ಹೇಳಿಕೊಂಡಿದೆ.

ಅಲ್ಲದೇ ಈ ಕಿಟ್‌ ಸಹ 100% ಸಮರ್ಪಕವಾಗಿಲ್ಲ. ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ಎಂದು ತೋರಿಸಿರುವುದಾಗಿ ಹಲವಾರು ದೂರುಗಳು ಕೇಳಿಬಂದಿವೆ.

ಇನ್ನು ಕೊರೊನಾಗೆ ಔಷಧಿ ಕಂಡುಹಿಡಿಯುವ ಕೆಲಸ ಪ್ರಗತಿಯಲ್ಲಿದೆ. ಅದಕ್ಕೆ ಸುಮಾರು 18 ತಿಂಗಳುಗಳು ಬೇಕಾಗುತ್ತವೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಆದಷ್ಟು ಬೇಗ ಸಾಧ್ಯವಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇನ್ನು ಔಷಧಿ ಕಂಡು ಹಿಡಿದಿಲ್ಲ ಎಂಬುದು ಮಾತ್ರ ಸತ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights