FactCheck: ಅನ್ಯ ಧರ್ಮೀಯರೆಲ್ಲರೂ ಸಾಯುವವರೆಗೆ ಜಿಹಾದಿ ಮುಂದುವರೆಯುತ್ತದೆ! ಇದು ಸತ್ಯವೇ?

ಎಲ್ಲಾ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ನಾಸ್ತಿಕರನ್ನು ಕೊಲ್ಲುವವರೆಗೆ ಜಿಹಾದ್ ಮುಂದುವರಿಯುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಯ ಮತ್ತು ದ್ವೇಷವನ್ನು ಹರಡುವ ಸಂದೇಶದೊಂದಿಗೆ ಹಳೆಯ ಚಿತ್ರ ಹರಿದಾಡುತ್ತಿದೆ.

ಪೋಸ್ಟ್ ಮಾಹಿತಿ:

ಕೆಳಗಿನ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪರಿಶೀಲನೆ: 2014ರ ಹಳೆಯ ಚಿತ್ರವನ್ನು ಕೋಮುದ್ವೇಷ ಬಿತ್ತಲು ಬಳಸಿಕೊಳ್ಳಲಾಗಿದೆ.

ಭಯೋತ್ಪಾದನೆ ಆರೋಪ ಹೊತ್ತಿದ್ದ, ಆರೋಪ ಸಾಬೀತಾಗದೆ 2014ರಲ್ಲಿ ಖುಲಾಸೆಗೊಂಡ ವ್ಯಕ್ತಿಯೊಬ್ಬನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಿತ್ತುವ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ಚಿತ್ರ 2017 ಮತ್ತು 2018ರಲ್ಲಿ ಬೇರೆ ಬೇರೆ ಶೀರ್ಷಿಕೆಗಳೊಂದಿಗೆ ಹಂಚಲ್ಪಟ್ಟಿತ್ತು. ಆದರೆ, ಈಗ ಅದೇ ಮಾಹಿತಿ ಬೇರೆ ಬೇರೆ ಭಾಷೆಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ರೀತಿಯಲ್ಲಿ ಆತ ಹೇಳಿಕೆಗಳನ್ನು ನೀಡಿಲ್ಲ.

ಹಳೆಯ, ಅಪ್ರಸ್ತುತ ಚಿತ್ರಗಳು, ಸಂದೇಶಗಳು, ವೀಡಿಯೊಗಳು, ಆಡಿಯೊಗಳನ್ನು ಕೋಮುವಾದಿ ದ್ವೇಷ ಬಿತ್ತುವ ಎಳೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಿಡಿಗೇಡಿಗಳ ದ್ವೇಷಬಿತ್ತುವ ಸಂದೇಶಗಳಲ್ಲಿ ಇದೂ ಒಂದು. ಫಾರ್ವರ್ಡ್ ಮಾಡುವ ಮೊದಲು ನೀವು ಸ್ವೀಕರಿಸುವ ಯಾವುದೇ ಸಂದೇಶದ ಬಗ್ಗೆ ಸತ್ಯವನ್ನು ಪರಿಶೀಲಿಸಿ. ಆಗ ಮಾತ್ರ ಧರ್ಮದ ಹೆಸರಿನಲ್ಲಿ ಜನರನ್ನು ಮೋಸಗೊಳಿಸದಂತೆ ತಡೆಯಬಹುದು.

ಕೆಳಗೆ ಶೇರ್ ಮಾಡಿದ ಚಿತ್ರ 2014ರದು. ನಕಲಿ ಪೋಸ್ಟ್ ಮಾಡಲು ಬಲಗಡೆಯ ವ್ಯಕ್ತಿಯ ಚಿತ್ರವನ್ನು ಬಳಸಲಾಗುತ್ತಿದೆ. ಈ ವ್ಯಕ್ತಿಯ ಹೆಸರು ಅಬ್ದುಲ್ಲಾ ಜುಬೆರ್. ನಕಲಿ ಪೋಸ್ಟ್ನಲ್ಲಿ “ಜೆ” ಅಕ್ಷರವನ್ನು “ಜೆಡ್”ನೊಂದಿಗೆ ಬದಲಾಯಿಸಲಾಗಿದೆ.

 

ಫ್ಯಾಕ್ಟ್‌ಚೆಕ್‌ ಬಗೆಗೆನ ಮಾಹಿತಿಗಾಗಿ ಕೆಳಗಿನ ಲಿಂಕ್ ಪರಿಶೀಲಿಸಿ:

ಚಿತ್ರವನ್ನು ಮೊದಲು ಎಎಫ್‌ಪಿ ಫ್ಯಾಕ್ಟ್‌ಚೆಕ್‌‌ನಿಂದ ಬಿಡುಗಡೆ ಮಾಡಲಾಗಿದೆ:  AFP Fact Check.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights