ಲಸಿಕೆ ಜಾತಿವಾದ : ಮಲ್ಲೇಶ್ವರಂನಲ್ಲಿ ಬ್ರಾಹ್ಮಣ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ!

ರಾಜ್ಯ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ವಿಧಾನ ಸಭಾ ಕ್ಷೇತ್ರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬ್ರಾಹ್ಮಣ ಪುರೋಹಿತರು ಮತ್ತು ಅವರ ಕುಟುಂಬಗಳಿಗೆ ಉಚಿತವಾಗಿ ಪ್ರತ್ಯೇಕ ಕೊರೋನಾ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಹಾಗೆ ನೋಡಿದರೆ ಕೋವಿಡ್ ವಾರಿಯರ್ಸ್ ಗಳಾಗಿ ದುಡಿಯುತ್ತಿರುವ ಪೌರಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಇತರ ಇಲಾಖೆಗಳ ನೌಕರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವುದಾಗಿ ಸರ್ಕಾರವೇ ಘೋಷಣೆ ಮಾಡಿದೆ.

ಆದರೆ ಲಸಿಕೆ ಅಭಾವದಿಂದಾಗಿ ಇಂದಿಗೂ ಸಹ ಸರ್ಕಾರ ಕೋವಿಡ್ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿಲ್ಲ. ಇನ್ನು ಲಾಕ್ಡೌನ್ ಸಂದರ್ಭದಲ್ಲೂ ಹೊಲಗದ್ದೆಗಳಲ್ಲಿ ದುಡಿದು ದೇಶದ ಜನರಿಗೆ ಅನ್ನ ನೀಡುತ್ತಿರುವ ಅನ್ನದಾತ ರೈತನಿಗೆ ಇದುವರೆಗೂ ಆದ್ಯತೆಯ ಮೇರೆಗೆ ಲಸಿಕೆ ನೀಡುತ್ತಿಲ್ಲ.

ಅಂತಹುದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುವುದಕ್ಕಾಗಿ ಬ್ರಾಹ್ಮಣ ಪುರೋಹಿತರು ಮತ್ತು ಕುಟುಂಬಕ್ಕೆ ಲಸಿಕೆ ಅಭಿಯಾನ ನಡೆಸುತ್ತಿರುವುದು ಎಷ್ಟು ಸರಿ?

ಪುರೋಹಿತರಿಗೆ ಲಸಿಕೆ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರ ತಾನೇ ಘೋಷಿಸಿಕೊಂಡ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಏಕೆ ನೀಡುತ್ತಿಲ್ಲ?

ಒಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆಯಲ್ಲಿ ಸಿಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಲಸಿಕೆ ನೀಡುವುದಕ್ಕೂ ಜಾತಿ ಆಧಾರದ ಮೇಲೆ ಆದ್ಯತೆ ನೀಡಿರುವುದು ಖಂಡನೀಯ.

ಪುರೋಹಿತರಷ್ಟೆ ಪೌರಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು ಮತ್ತು ಈ ದೇಶದ ಎಲ್ಲ ಬಡವರ ಜೀವ ಅಮೂಲ್ಯ ಎಂದು ಸರ್ಕಾರ ಮತ್ತು ಸರ್ಕಾರದ ಮುಖ್ಯಸ್ಥರುಗಳಿಗೆ ಅರ್ಥವಾಗಬೇಕು.

ಲಸಿಕೆ ನೀಡುವುದರಲ್ಲೂ ತಾರತಮ್ಯ ಮಾಡುವುದರ ಮೂಲಕ ಬಿಜೆಪಿ ತಾನು ಅಪ್ಪಟ ಜಾತಿವಾದಿ ಮತ್ತು ಮನುವಾದಿ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ.
ಒಂದು ವೇಳೆ ದಲಿತರಿಗೂ, ಮುಸ್ಲಿಮರಿಗೂ ಅಥವಾ ಹಿಂದುಳಿದ ವರ್ಗಗಳಿಗೆ ಈ ಅಭಿಯಾನ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಎಲ್ಲಾ ಮನುವಾದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿತ್ತು.

ಸರ್ಕಾರದ ನಡವಳಿಕೆಯನ್ನು ದೊಡ್ಡ ಮಟ್ಟದಲ್ಲಿ ಖಂಡಿಸಲಾಗುತಿತ್ತು. ಆದ್ದರಿಂದ ಪುರೋಹಿತರಿಗೂ ನೀಡಲಿ ಹಾಗೆಯೇ ರೈತರು, ಕಾರ್ಮಿಕರು, ಬಡವರು ಎಲ್ಲರಿಗೂ ಆದ್ಯತೆಯ ಮೇರೆಗೆ ಉಚಿತವಾಗಿ ಲಸಿಕೆ ನೀಡಲಿ ಎಂಬುದೇ ನಮ್ಮ ಆಶಯ ಮತ್ತು ಆಗ್ರಹ. ಹೀಗೆಂದ ಮಾತ್ರಕ್ಕೆ ನಾವು ಬ್ರಾಹ್ಮಣರ ವಿರೋಧಿಯಲ್ಲ. ಆದರೆ ಬ್ರಾಹ್ಮಣ್ಯ ( ಜಾತಿವಾದ, ಮನುವಾದ)ದ ವಿರೋಧಿ ಅನ್ನೋದು ಮಾತ್ರ ಸ್ಪಷ್ಟ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಲಸಿಕೆ ಜಾತಿವಾದ : ಮಲ್ಲೇಶ್ವರಂನಲ್ಲಿ ಬ್ರಾಹ್ಮಣ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ!

  • June 2, 2021 at 8:51 pm
    Permalink

    ಇವರು ನಿಜವಾದ ಪ್ರಂಟ್ ಲೈನ್ ವಾರಿಯರ್ಸ್. ಇವರು ಅದೆಷ್ಟು ಜನರ ಜೀವ ರಕ್ಷಿಸಿದ್ದಾರೆ ಎಂಬುದು ಲೆಖ್ಖಕ್ಕೆ ಇಲ್ಲ. ವ್ಯಾಕ್ಸಿನ್ ಹಾಕಿಸಿಕೊಂಡು ಸೀದಾ ಪಾಕಿಸ್ತಾನ ಬಾರ್ಡರ್ ಗೆ ಹೋಗಿ ದೇಶ ರಕ್ಷಣೆ ಮಾಡ್ತಾರೆ. ಪಾಪ ಇವರಿಗೆ ಸರಕಾರ ಇನ್ನೂ ಮುರ್ನಾಲ್ಕು ಡೋಸ್ ಹೆಚ್ಚಿಗೆ ಕೊಡಬೇಕು ಇದು ನಮ್ಮ ಆಗ್ರಹ. ಬ್ರಾಮರು ಅಂದ್ರೆ, ದೇಶ.

    Reply

Leave a Reply

Your email address will not be published.

Verified by MonsterInsights