ಉತ್ತರಾಖಂಡ್ ನದಿ ತೀರದಲ್ಲಿ ನಾಯಿಗಳಿಗೆ ಆಹಾರವಾದ ಮಾನವನ ಮೃತ ದೇಹಗಳು!

ಉತ್ತರಾಖಂಡದ ಉತ್ತರ್ಕಶಿಯ ಭಾಗೀರಥಿ ನದಿಯ ದಡದಲ್ಲಿರುವ ಕೇದಾರ ಘಾಟ್‌ನಲ್ಲಿ ನಾಯಿಗಳು ಮಾನವ ದೇಹವನ್ನು ತಿನ್ನುತ್ತಿರುವ ಭೀಕರ ವೀಡಿಯೊಗಳು ಹೊರಬಿದ್ದಿವೆ.

ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಭಾಗೀರಥಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಶವಗಳ ಭಾಗಗಳು, ಅರ್ಧ ಸುಟ್ಟುಹೋದ ಭಾಗಗಳು ನದಿಯಲ್ಲಿ ಹರಿದುಕೊಂಡು ಬಂದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಈ ಮೃತ ದೇಹಗಳನ್ನು ಕೊರೊನಾ ಸೋಂಕಿತರ ದೇಹಗಳು ಎಂದು ಶಂಕಿಸಲಾಗಿದೆ.

“ನಾನು ನಿನ್ನೆ ಅರ್ಧ ಸುಟ್ಟ ದೇಹಗಳು ಮತ್ತು ನಾಯಿಗಳು ಅವುಗಳನ್ನು ತಿನ್ನುವುದನ್ನು ನೋಡಿದೆ. ಜಿಲ್ಲಾಡಳಿತ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಇದನ್ನು ಅರಿತುಕೊಂಡು ತಕ್ಷಣ ಏನಾದರೂ ಮಾಡಬೇಕು. ಇದು ಕಳವಳಕಾರಿ ವಿಷಯ “ಎಂದು ಸ್ಥಳೀಯ ಪ್ರತ್ಯಕ್ಷದರ್ಶಿ ಸುದ್ದಿಗಾರರಿಗೆ ಹೇಳಿದರು.

“ಇವು ಶವಸಂಸ್ಕಾರ ಮಾಡಿದ ಕೋವಿಡ್-19 ಸೋಂಕಿತ ಜನರ ಶವಗಳಿರುವ ಸಾಧ್ಯತೆಯಿದೆ. ಸೋಂಕಿನ ಹರಡುವಿಕೆಯನ್ನು ತಪ್ಪಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಂತಿಮ ವಿಧಿಗಳನ್ನು ನಡೆಸಿದ ನಂತರ ಶವಗಳನ್ನು ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಂಬಂಧಿಕರು ಮೃತ ದೇಹಗಳನ್ನು ನದಿಗೆ ಎಸೆದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಪುರಸಭೆಯ ಅಧ್ಯಕ್ಷ ರಮೇಶ್ ಸೆಮ್ವಾಲ್ ಅವರು ಸ್ಥಳೀಯರಿಂದ ದೂರುಗಳನ್ನು ಸ್ವೀಕರಿಸಿದ ನಂತರ, ಅವರು ಕೇದರ್ ಘಾಟ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಅರ್ಧ ಸುಟ್ಟ ಶವಗಳನ್ನು ದಹನ ಮಾಡಲು ನಿಯೋಜಿಸಿದ್ದಾರೆ.

“ಕಳೆದ ಕೆಲವು ದಿನಗಳಲ್ಲಿ, ನಮ್ಮ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೃತ ದೇಹಗಳನ್ನು ಸಂಬಂಧಿಕರು ಸರಿಯಾಗಿ ಸುಡುತ್ತಿಲ್ಲ. ಆದ್ದರಿಂದ ಅರ್ಧ ಸುಟ್ಟ ಶವಗಳ ಅಂತ್ಯಕ್ರಿಯೆಗಾಗಿ ಕೇದಾರ ಘಾಟ್‌ನಲ್ಲಿ ವ್ಯವಸ್ಥೆ ಮಾಡಲುಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ” ಎಂದು ರಮೇಶ್ ಸೆಮ್ವಾಲ್ ಹೇಳಿದರು.

ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ತೇಲುತ್ತಿರುವ ಘಟನೆಗಳು ವರದಿಯಾಗಿವೆ. ಕೋವಿಡ್-19 ವೈರಸ್‌ನಿಂದ ಸಾವನ್ನಪ್ಪಿದವರ ಸಂಬಂಧಿಕರು ಸ್ಥಳವನ್ನು ಹುಡುಕಲು ಅಥವಾ ಕೊನೆಯ ವಿಧಿಗಳನ್ನು ಮಾಡಲು ಸಾಧ್ಯವಾಗದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights