Film : ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ – ಮೊದಲ ಪೋಸ್ಟರ್ ಅನ್ನು ದಬಾಂಗ್ ಶೈಲೀಲೇ ಪರಿಚಯಿಸಿದ ಸಲ್ಲು
ಹಿಂದಿ ಚಿತ್ರರಂಗದ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ ಅವರ ಮೊದಲ ಪೋಸ್ಟರ್ ಅನ್ನು ದಬಾಂಗ್ ಶೈಲೀಲೇ ಪರಿಚಯ ಮಾಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಕಿಚ್ಚ ಸುದೀಪರನ್ನು ತಮ್ಮ ಚಿತ್ರದ ಬಲಶಾಲಿ ವಿಲನ್ ಎಂದು ಬಣ್ಣಿಸಿರುವ ಸಲ್ಮಾನ್ ಅವರೊಂದಿಗೆ ಹೊರಾಡುವುದೇ ಮಜಾ ಎಂದು ಹೇಳುತ್ತಲೇ ಚಿತ್ರದಲ್ಲಿ ಸುದೀಪ್ ಅವರ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಸುದೀಪ್ ಪ್ರತಿಕ್ರಿಯಿಸಿದ್ದು, ಇಲ್ಲಿ ಹೋರಾಟದ ಮಾತು ಬರುವುದಿಲ್ಲ. ವಿಲನ್ ಗೆ ಹೀರೋ ಮೇಲೆ ಪ್ರೀತಿ ಉಂಟಾಗುತ್ತದೆ ಎಮದಿದ್ದಾರಲ್ಲದೇ ಅಲ್ಮಾನ್ ಅವರೊಂದಿಗೆ ಕೆಲಸ ಮಾಡಿದ್ದೇ ಖುಷಿಯ ವಿಚಾರ ಎಂದಿದ್ದಾರೆ.
ಬಹಳ ಸಮಯದ ನಂತರ ಹಿಂದಿ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ ದಬಾಂಗ್ ಸರಣಿಯ ಮೂರನೇ ಅವತರಣಿಕೆಯಲ್ಲಿ ಸಲ್ಮಾನ್ ವಿರುದ್ಧ ಖಳನಾಯಕನಾಗಿ ಮಿಂಚಿದ್ದಾರೆ.
ಡಿಸೆಂಬರ್ ತಿಮಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ದಬಾಂಗ್-3 ಚಿತ್ರವು ಹಿಂದಿ ಮಾತ್ರವಲ್ಲದೇ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ.