Film : ಸಿನಿ ಪಯಣದಲ್ಲಿ 34 ವಸಂತಗಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣನ 123ನೇ ಸಿನೆಮಾ…

ಸಿನಿ ಪಯಣದಲ್ಲಿ 34 ವಸಂತಗಳನ್ನು ಪೂರೈಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‍ ತಮ್ಮ ಈ ಸುದೀರ್ಘ ವೃತ್ತಿ ಯಾನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲರಿಗೂ ಧನ್ಯಾವದಗಳನ್ನು ಹೇಳಿದ್ದಾರೆ.

ತಮ್ಮ ಈವರೆಗಿನ ಚಿತ್ರಗಳ ಗುಚ್ಛವೊಂದನ್ನು ಟ್ವಿಟರ್‍ ಖಾತೆಯಲ್ಲಿ ಲಗತ್ತಿಸಿರುವ ಶಿವಣ್ಣ ತಮ್ಮನ್ನು ತಿದ್ದು ತೀಡಿದ ನಿರ್ದೇಶಕರು, ತಮಗಾಗಿ ಕಥೆ ಬರೆದವರು ಹಾಗೂ ತಮ್ಮ ಚಿತ್ರಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ವಂದನೆಗಳನ್ನು ತಿಳಿಸಿದ್ದಾರೆ.

’ಇಂದಿಗೆ ಈ ಚಿತ್ರರಂಗದಲ್ಲಿ ನನ್ನ ಕೆಲಸ ಶುರುಮಾಡಿ 34ವರ್ಷಗಳಾದವು. ನಿಮ್ಮ ಪ್ರೋತ್ಸಾಹಕ್ಕೆ ಅಭಿಮಾನಕ್ಕೆ ಚಿರಋಣಿ. ಇಂದು ನನ್ನ 123ನೇ ಸಿನಿಮಾದ ಮುಹೂರ್ತ ನೆರವೇರಿತು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ. ನಿಮ್ಮ ಶಿವು’ ಎಂದು ಕರುನಾಡ ಚಕ್ರವರ್ತಿ ಶಿವಣ್ಣ ಟ್ವೀಟಿಸಿದ್ದಾರೆ.

ಇದೇ ವೇಳೆ ಶಿವಣ್ಣ ಅಭಿನಯದ ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಆರ್‍ಡಿಎಕ್ಸ್ ಚಿತ್ರದ ಮಹೂರ್ತ ನೆರವೇರಿತು. ಪವರ್‌ಸ್ಟಾರ್‍ ಪುನೀತ್ ರಾಜ್‌ಕುಮಾರ್‍ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಚಿತ್ರದಲ್ಲಿ ಶಿವಣ್ಣನಿಗೆ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights