KPL cricket fixing :

ಕರ್ನಾಟಕ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ದಂಧಯ ಕರಾಳ ಮುಖ ಈಗಾಗಲೇ ಅನಾವರಣಗೊಂಡಿದ್ದು, ಅದರ ವ್ಯಾಪ್ತಿ ಇತರ ರಂಗಗಳಿಗೂ ಹಬ್ಬಿರುವ ಅನುಮಾನಗಳು ಈಗ ವ್ಯಕ್ತವಾಗುತ್ತಿದೆ.

ಈ ದಂಧೆಯಲ್ಲಿ ಕನ್ನಡ ಚಿತ್ರರಂಗದ ನಟಿಯರೂ ಭಾಗಿಯಾಗಿರುವ ಅನುಮಾನ ಮೂಡಿದ್ದು, ಈ ಸಂಬಂಧ ಮೂವರು ಪ್ರಮುಖ ನಟಿಯರ ಹೆಸರು ಕೇಳಿಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಬೆಟ್ಟಿಂಗ್ ದಂಧೆಯಲ್ಲಿ ಆಟಗಾರರನ್ನು ಸೆಳೆಯಲು ಬಲೆ ಬೀಸುವ ಕೆಲಸವನ್ನು ಈ ನಟಿಯರು ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಇವರು ಯಾರು ಎಂಬ ಮಾಹಿತಿಯನ್ನು ಪೊಲೀಸರು ರಹಸ್ಯವಾಗಿಟ್ಟಿದ್ದರೂ, ದಶಕದ ಹಿಂದೆ ಕನ್ನಡ ಚಿತ್ರರಂಗದ ಪ್ರಮುಖ ಹೀರೋಯಿನ್‌ ಸೇರಿದಂತೆ ಮೂವರು ಇದ್ದಾರೆಂದು ಮೂಲಗಳು ಹೇಳಿವೆ.

ಈ ಮಧ್ಯೆ ಆಟಗಾರರೂ ಸೇರಿದಂತೆ ಒಂಬತ್ತು ಜನರನ್ನು ಬೆಂಗಳೂರು ಪೊಲೀಸರು ಈವರೆಗೆ ಬಂಧಿಸಿದ್ದು, ಮಂಗಳವಾರ ಮಾಜಿ ಆಟಗಾರ ಹಾಗೂ ಕೆಎಸ್‌ಸಿಎ ಪದಾಧಿಕಾರಿಯೂ ಆಗಿರುವ ಸುಧೀಂದ್ರ ಶಿಂಧೆ ಸಾಕ್ಷಿ, ಪುರಾವೆಗಳೊಂದಿಗೆ ಸಿಕ್ಕಿಕೊಂಡಿದ್ದಾರೆ.

ಈ ವಿಚಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಐಸಿಸಿ ಸಹ ತೀರಾ ಗಂಭಿರವಾಗಿ ಪರಿಗಣಿಸಿದ್ದು, ಕರ್ನಾಟಕ ಪ್ರೀಮಿಯರ್‍ ಲೀಗ್‌ ಅನ್ನು ನಿರ್ಬಂಧಿಸುವ ಅಥವ ನಿಷೇಧೀಸುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights