Lockdown: ಬಡ ಕಾರ್ಮಿಕರ ನೆರವಿಗೆ ನಿಂತ ಮಕ್ಕಳ ಆಶ್ರಮ

ಕೊರೊನಾ ವೈರಸ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಉದ್ಯೋಗ ಹರಸಿ ಬಹುದೂರದ ಊರುಗಳಿಂದ ನಗರ-ಪಟ್ಟಣಗಳಿಗೆ ವಲಸೆ ಬಂದಿದ್ದ ಜನರು ಆರೋಗ್ಯದ ಆತಂಕದಿಂದಾಗಿ ಮತ್ತು ಇರವು ವಸತಿ ಇಲ್ಲದೆ ತಮ್ಮೂರುಗಳಿಗೆ ನಡೆದೇ ಸಾಗುತ್ತಿದ್ದಾರೆ. ಕೆಲವರು ಹಳ್ಳಿಗಳಿಗೂ ಹೋಗಲಾರದೆ ಕೂಲಿ ಮಾಡುತ್ತಿದ್ದ ಸ್ಥಳಗಳಲ್ಲಿ ಇದ್ದಕೊಂಡು ಒಂದೊತ್ತಿನ ಕೂಳಿಗೂ ಪರಿತಪಿಸುತ್ತಿದ್ದಾರೆ.

ದೇಶದ ನಾನಾ ಭಾಗಗಳಲ್ಲಿ ಬಡ, ನಿರಾಶ್ರಿತ ಜನರು ಯಾರಾದರೂ ಆಹಾರ ನೀಡುವರೇ ಎಂದು ಎದುರು ನೋಡುತ್ತಿದ್ದಾರೆ. ಇವರಲ್ಲಿ ಕೊಲಾರ ಜಿಲ್ಲೆಯ ನರಸಾಪುರ ಮತ್ತು ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಂಡಟ್ಟಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದುಡಿಯಲು ಕೂಲಿಯೂ ಇಲ್ಲದೆ, ಬದುಕಲು ಸೂರೂ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಇಂತಹ ಕಾರ್ಮಿಕರ ನೆರವಿಗೆ ಯುವಶಕ್ತಿ ಕರ್ನಾಟಕ ನಿರಾಶ್ರಿತ ಮಕ್ಕಳ ಆಶ್ರಮ ಮತ್ತು ಗೋಶಾಲೆ ಅಭಿವೃದ್ಧಿ ಟ್ರಸ್ಟ್‌ ನೆರವು ನೀಡಿದ್ದು, ಅವರಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ.

“21 ದಿನಗಳ ಕಾಲ ಇಡೀ ಭಾರತವನ್ನು ಲಾಕ್ ಡೌನ್ ಮಾಡಿರುವುದರಿಂದ ನರಸಾಪುರದ ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳು ಇಲ್ಲದೆ ಊಟಕ್ಕೆ ಪರದಾಡುತ್ತಿರುವ ಕಾರ್ಮಿಕರು. ಕಂಪನಿಗಳ ವಾಹನ ಚಾಲಕರು. ಹಾಗೂ ಅಲೆಮಾರಿಗಳು. ಬಡಜನರಿಗೆ ಊಟ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ” ಎಂದು ಅನುಶ್ರೀ ರವರು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights