School : ಶಾಲೆಗಳ ಪುನಾರಂಭ ಮಾರ್ಗಸೂಚಿ – ಶಿಫ್ಟ್ ಪದ್ಧತಿ, ದಸರಾ, ಕ್ರಿಸ್ಮಸ್ ರಜೆಗಳಿಗೆ ಕತ್ತರಿ..

ಲಾಕಾಡೌ‌ನಿನಿಂದಾಗಿ ಅಯೋಮಯವಾಗಿರುವ ಶಿಕ್ಷಣ ಕ್ಷೇತ್ರದ ಕಾಯಕಲ್ಪಕ್ಕೆ ಸರಕಾರ ಮುಂದಾಗಿದೆ. ನಿರ್ಬಂಧ ತೆರವಿನ ನಂತರ ಶಾಲೆಗಳಲ್ಲಿ ಅನುಸರಿಸಬೇಕಾದ ಕ್ರಮಗಳತ್ತ ಗಮನ ಹರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ನಡೆಸುವ ನಿಟ್ಟನಲ್ಲಿ ಶಿಫ್ಟ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಶಾಲೆಗಳಲ್ಲಿ ವಿವಿಧ ಶಿಫ್ಟ್‌ಗಳಲ್ಲಿ ಪಾಠ ಮಾಡುವುದರ ಸಾಧಕ ಬಾಧಕಗಳ ಪರ್‍ಯಾಲೋಚನೆಗೆ ಶಿಕ್ಷಣ ಇಲಾಖೆ ಒಂದು ಗಜಗಾತ್ರದ ಸಮಿತಿ ರಚಿಸಿದೆ. ಶಿಪ್ಟ್‌ ಪದ್ಧತಿಯ ಜೊತೆಗೇ ತರಗತಿಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ ದಿನಬಿಟ್ಟು ದಿನ ಒಂದೊಂದು ವರ್ಗಕ್ಕೆ ಬೋಧನೆ ಮಾಡುವ ಪರಿಕಲ್ಪನೆಯೂ ಇದೆ.

ಇದೇ ವೇಳೆ ಶಾಲಾ ದಿನಗಳಲ್ಲಿ ಉಂಟಾಗುವ ಕಡಿತವನ್ನು ಗಮನದಲ್ಲಿಟ್ಟುಕೊಂಡು ದಸರಾ ಮತ್ತು ಕ್ರಿಸ್ಮಸ್ ರಜೆಗಳಿಗೆ ಕತ್ತರಿ ಹಾಕುವ ಸಾಧ್ಯತೆಯೂ ಇದೆ. ಲಾಕ್‌ಡೌನ್ ಮುಕ್ತಾಯದ ಸುಳಿವು ದೊರೆತಿದ್ದರೂ ಶಾಲೆಗಳ ಪುನಾರಂಭ ಇನ್ನೂ ಸಾಕಷ್ಟು ಮುಂದೆ ಹೋಗುವ ಸಾಧ್ಯತೆಯೇ ಹೆಚ್ಚಿದ್ದು, ತರವಿನ ವೇಳೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಸಹ ಬದಲಾವಣೆ ಸಾಧ್ಯತೆ ಇದೆ. ತೀರಾ ಅತ್ಯವಶ್ಯಕ ಅಂಶಗಳನ್ನು ಹೊರತುಪಡಿಸಿ ಇತರೆ ವಿಚಾರಗಳನ್ನು ಪಠ್ಯದಿಂದ ಕೈಬಿಡಲಾಗುತ್ತದೆ. ಈ ಎಲ್ಲ ವಿಚಾರಗಳನ್ನು ಪರಾಮರ್ಶಿಸಿ ಆದಷ್ಟೂ ಬೇಗ ಮಾರ್ಗಸೂಚಿ ಸಿದ್ಧಪಡಿಸುವಂತೆ ಸಮಿತಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights