ಕರ್ನಾಟಕದಲ್ಲಿ ಒಂದೇ ದಿನ 54 ಕೊರೊನಾ ಪ್ರಕರಣ: ಮಂಡ್ಯದಲ್ಲೇ 22 ಹೊಸ ಪ್ರಕರಣಗಳು

ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾಗಿರುವ 54 ಸೋಂಕಿತರಲ್ಲಿ 36 ಪುರುಷರು, 18 ಮಹಿಳೆಯರು ಹಾಗೂ 10 ಮಕ್ಕಳಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

54 ಸೋಂಕಿತರಲ್ಲಿ 22 ಪ್ರಕರಣಗಳು ಸಕ್ಕರೆ ನಾಡು ಮಂಡ್ಯ ಜಿಲ್ಲೆಯೊಂದರಿಂದಲೇ ವರದಿಯಾಗಿದೆ ಉಳಿದಂತೆ, ಕಲುಬುರಗಿ 10, ಹಾಸನ 6, ಧಾರವಾಡ 4, ಯಾದಗಿರಿ 3, ಕೋಲಾರ 3, ಶಿವಮೊಗ್ಗ 2,  ದಕ್ಷಿಣ ಕನ್ನಡ  2, ವಿಜಯಪುರ 1, ಉಡುಪಿ 1 ಪ್ರಕರಣಗಳು ದಾಖಲಾಗಿವೆ.

ಲಾಕ್‌ಡೌನ್‌ ಸಡಿಲಿಕೆಗೂ ಮುನ್ನ ಗ್ರೀನ್‌ ಝೋನ್‌ನಲ್ಲಿದ್ದ ಹಾಸನ ಜಿಲ್ಲೆಯಲ್ಲಿ ದಿನೇದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಸನದಲ್ಲಿ ಇದೂವರೆಗೂ 24 ಪ್ರಕರಣಗಳು ದಾಖಲಾಗಿವೆ.

ಮೊದಲ ಹಂತದ ಲಾಕ್‌ಡೌನ್‌ನಲ್ಲಿಯೇ ಮಂಡ್ಯ ಜಿಲ್ಲೆಯನ್ನು ರೆಡ್‌ ಜೋನ್‌ ಎಂದು ಘೋಷಿಸಲಾಗಿತ್ತು. ಪಕ್ಕದ ಜಿಲ್ಲೆ ಮೈಸೂರಿನಲ್ಲಿಯೂ 100 ಗಡಿ ದಾಟಿತ್ತು. ಆದರೆ, ತೀವ್ರ ಕಾರ್ಯಾಚಾರಣೆಯಿಂದ ಇಂದು ಮೈಸೂರು ಕೊರೊನಾ ಮುಕ್ತ ಜಿಲ್ಲೆಯೆಂದು ಘೋಷಿಸಿಕೊಂಡಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೂವರೆಗೂ 71 ಪ್ರಕರಣಗಳು ದಾಖಲಾಗಿವೆ.

https://twitter.com/sriramulubjp/status/1261928183621959680

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights