ಕೊರೋನಾ ತಡೆಗಟ್ಟಲು ಲಾಕ್‌ಡೌ‌ನ್‌ ಒಂದೇ ಸಾಕೆ? ಅಪಾಯ ತಪ್ಪಿಸಲು ಸಾಧ್ಯವಿಲ್ – WHO..

ಕೊರೋನಾ ತಡೆಗಟ್ಟಲು ಲಾಕ್‌ಡೌ‌ನ್‌ ಒಂದೇ ಸಾಕೆ?

ಲಾಕ್‌ಡೌನ್‌ ಮಾತ್ರದಿಂದಲೇ ಅಪಾಯ ತಪ್ಪಿಸಲು ಸಾಧ್ಯವಿಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆ

ಮಾರಕ ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಭಾರತ ಸರಕಾರ ತೆಗೆದುಕೊಂಡಿರುವ ಲಾಕ್‌ಡೌನ್‌ ನಿರ್ಧಾರವೊಂದಿಂದಲೇ ನಿಶ್ಚಿತ ಪರಿಹಾರ ಸಿಗಲಿದೆಯೇ? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿದೆ. ಕೇವಲ ಲಾಕ್‌ಡೌನ್‌ ಮಾಡುವುದರಿಂದ ಕೊರೋನಾ ಸೋಂಕು ತಡೆಯಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಲಾಕ್‌ಡೌನ್‌ನಿಂದ ಸೋಂಕು ಹರಡುವುದನ್ನು ಮುಂದೂಡಬಹುದಷ್ಟೇ ಹೊರತು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದ ದೊರೆತ ಸಮಯಾವಕಾಶದಲ್ಲಿ ಶಂಕಿತರು, ಸೋಂಕಿತರು ಮತ್ತು ಅವರ ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷೆ ಕಾರ್‍ಯ ಸಮರೋಪಾದಿಯಲ್ಲಿ ನಡೆದರಷ್ಟೇ ಕೊರೋನಾ ಹರಡುವುದನ್ನು ತಪ್ಪಿಸಲು ಸಾಧ್ಯ.  ಇದರ ಹೊರತಾಗಿ ಕೇವಲ ಲಾಕ್‌ಡೌ‌ನ್‌ ಮಾಡಿ ಅದರಿಂದಲೇ ಕೊರೋನಾ ಗೆಲ್ಲಬಹುದು ಎಂಬುದು ತಪ್ಪು ಕಲ್ಪನೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ.

ಭಾರತದಲ್ಲಿ ಇದುವರೆಗೆ 649 ಕೊರೊನಾ ಪ್ರಕರಣ ದಾಖಲಾಗಿದ್ದು, ಹದಿನಾಲ್ಕು ಜನ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಭಾರತ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಚೀನಾವು ಶ್ಲಾಘಿಸಿದೆ.

ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತವು ಈವರೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದು, ಆರಂಭದಲ್ಲೇ ವಿಜಯ ಸಾಧಿಸಲಿದೆ ಎಂದು ಚೀನಾದ ವಿದೇಶಾಂಗ ಅಧಿಖಾರಿ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights