ಶಾಲೆಯ ಅಧ್ಯಕ್ಷನಿಂದ ಶಿಕ್ಷಕಿ ಕೊಲೆ; ಕೃತ್ಯಕ್ಕೆ ಆತನ ಆನಾಚಾರದ ವಿಡಿಯೋಗಳೇ ಕಾರಣ

ಒಡಿಶಾದಲ್ಲಿ ನಡೆದ ಶಿಕ್ಷಕಿ ಮಮಿತಾ ಮೆಹೆರ್ ಅವರ ಹತ್ಯೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. ಪ್ರಮುಖ ಕೊಲೆ ಆರೋಪಿ ಗೋವಿಂದ್‌ ಸಾಹು ಎಂಬಾತತನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಕೊಲೆಗೆ ನೀಡಿದ ಕಾರಣವನ್ನು ಪೊಲೀಸರು ವಿವರಿಸಿದ್ದಾರೆ. ​

ಒಡಿಶಾದ ಕಲಹಂಡಿ ಜಿಲ್ಲೆಯ ಮಹಾಲಿಂಗದಲ್ಲಿ ಇರುವ  ಸನ್​ಸೈನ್​ ಇಂಗ್ಲಿಷ್​ ಮಾಧ್ಯಮ ಶಾಲೆಯಲ್ಲಿ 24 ವರ್ಷದ ಮಮಿತಾ ಅವರು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅರೋಪಿ ಗೋವಿಂದ್ ಸಾಹು ಕೂಡ ಅದೇ ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಆತನೇ ಮಮಿತಾ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ದೂರು ದಾಖಲಿಸಿದ್ದರು.

ಪೋಷಕರ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಸಾಹುವನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಕಾರಣವನ್ನು ವಿವರಿಸಿದ್ದಾನೆ.

ಅಕ್ಟೋಬರ್ 08 ರಂದು ಮಮಿತಾ ಅವರನ್ನು ಆರೋಪಿ ಸಾಹು ಭವಾನಿಪುರಕ್ಕೆ ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ. ಮರಳಿ ಬರುವಾಗ ಆಕೆಯನ್ನು ಕಾರಿನಲ್ಲಿ ಕೊಲೆ ಗೈದು, ಮೃತದೇಹವನ್ನು ಹೂತ ಹಾಕಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಆರೋಪಿ ಗೋವಿಂದ್‌ ಸಾಹು
ಆರೋಪಿ ಗೋವಿಂದ್‌ ಸಾಹು

ಸಾಹು ಅನ್ಯ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಅಲ್ಲದೆ, ಆತ ಶಾಲೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಈ ಆರೋಪಗಳಿಗೆ ಸಂಬಂಧಿಸಿದ ಎರಡು ವಿಡಿಯೋಗಳು ಮಮಿತಾ ಅವರ ಬಳಿ ಇದ್ದವು. ಆ ವಿಡಿಯೋಗಳ ಮೂಲಕ ಆತನ ಅನಾಚಾರಗಳನ್ನು ಬಹಿರಂಗ ಪಡಿಸುವುದಾಗಿ ಮಮತಿ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.

ಹೀಗಾಗಿ, ಆಕೆ ಮುಂದೊಂದು ದಿನ ಈ ವಿಡಿಯೋಗಳನ್ನು ಇಟ್ಟುಕೊಂಡು ತನಗೆ ತೊಂದರೆ ಕೊಡಬಹುದು ಎಂದು ದುರಾಲೋಚಿತ ಆರೋಪಿ ಆಕೆಯನ್ನು ತನ್ನ ಕಾರಿನಲ್ಲಿ ಕೊರೆದೊಯ್ದು, ಆಕೆಯನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಪ್ರಕರಣ ಯಾರಿಗೂ ತಿಳಿಯಬಾರದು ಎಂದು ಕೊಲೆಗೂ ಮುನ್ನವೇ, ಅ. 7ರಂದು ಶಾಲೆಯ ಸ್ಟೇಡಿಯಂ ನಿರ್ಮಾಣದ ಸೈಟಿನಲ್ಲಿ ಹಳ್ಳ ತೆಗೆಯಲು ಜೆಸಿಬಿ ಕೆಲಸಗಾರನಿಗೆ ಹೇಳಿ, ಗುಂಡಿ ತೆಗೆಸಿದ್ದಾನೆ. ಆ ಗುಂಡಿಗೆ ಮಮಿತಾ ಅವರ ಮೃತದೇಹವನ್ನು ಇಟ್ಟು, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ, ಮೃತದೇಹದ ಮೇಲೆ ಉಪ್ಪನ್ನೂ ಸುರಿದು ಗುಂಡಿ ಮುಚ್ಚಿದ್ದಾನೆ.

ಈ ಕೃತ್ಯದಲ್ಲಿ ಇನ್ನೂ ಅನೇಕ ಮಂದಿ ಕೈಜೋಡಿಸಿದ್ದಾರೆ. ಈ ಕೊಲೆ ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕೃತ್ಯದ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿ ಸಾಹು ಮತ್ತು ಆತನಿಗೆ ಸಹಕಾರ ನೀಡಿದ ಎಲ್ಲರನ್ನೂ ಕಠಿಣ ಶಿಕ್ಷೆ ಒಳಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಹಿಮದುರಂತ: ಚಾರಣಿಗರ ಸಾವಿನ ಸಂಖ್ಯೆ 11ಕ್ಕೆ ಏರಿಕೆ; ಉಳಿದವರಿಗೆ ಹುಡುಕಾಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights